Salaar Song lyrics: ಹೃದಯ ನವಿರೇಳಿಸುವ ಸಲಾರ್ ಸಿನಿಮಾದ ಮೊದಲ ಹಾಡು ಬಿಡುಗಡೆ; ಆಕಾಶ ಗಡಿಯ ದಾಟಿ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ ನೋಡಿ
Salaar: Part One - Ceasefire Song lyrics: ಸಲಾರ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. Sooreede ಹಾಡು ಕನ್ನಡದಲ್ಲಿ ಆಕಾಶ ಗಡಿಯ ದಾಟಿ ತಂದಾನೋ ಬೆಳಕು ಕೋಟಿ ಎಂಬ ಸುಂದರ ಸಾಹಿತ್ಯದಲ್ಲಿ ಮೂಡಿ ಬಂದಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಬ್ಬರ ಬಾಲ್ಯ, ಸ್ನೇಹ, ಸಾಹಸ ಕಥನಗಳ ಹಿನ್ನಲೆಯಲ್ಲಿ ಈ ಹಾಡು ಮೂಡಿ ಬಂದಿದೆ.
ಸಲಾರ್: ಪಾರ್ಟ್ ಒನ್ ಕೇಸ್‌ಫೈರ್ ಸಿನಿಮಾದ ಮೊದಲ ಹಾಡು Sooreede ಬಿಡುಗಡೆಯಾಗಿದೆ. ಈ ಹಾಡನ್ನು ಹರಿಣಿ ವೈತೂರಿ ಹಾಡಿದ್ದಾರೆ. ಆಕಾಶ ಗಡಿಯ ದಾಟಿ ಕನ್ನಡ ಹಾಡನ್ನು ವಿಜಯಲಕ್ಷ್ಮಿ ಮತ್ತಿನಹೊಳೆ ಹಾಡಿದ್ದಾರೆ. ಸಲಾರ್ ಸಿನಿಮಾವು ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾವಾಗಿದೆ.
ನಿನ್ನೆ ಬಿಡುಗಡೆಯಾದ ಮ್ಯೂಸಿಕ್ ವಿಡಿಯೋದಲ್ಲಿ ಪ್ರಭಾಸ್ ದೇವ್ ಆಗಿ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ವರದಾ ಆಗಿ ಕಾಣಿಸಿದ್ದಾರೆ. ತಮ್ಮಿಬ್ಬರ ನಡುವೆ ಇರುವ ಅಗಾಧ ಸ್ನೇಹ, ಬಾಲ್ಯದ ಜೀವನ, ತಾಯಿಯ ಮಮತೆ ಇತ್ಯಾದಿಗಳನ್ನು ತೋರಿಸಲಾಗಿದೆ. ವಿಶೇಷವಾಗಿ ತನ್ನ ಸ್ನೇಹಿತ ವರದಾನ ಕುರಿತು ದೇವ ವಹಿಸುವ ಕಾಳಜಿ ಈ ಹಾಡಿನಲ್ಲಿ ವ್ಯಕ್ತವಾಗಿದೆ.
ಸಲಾರ್ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ (Salaar Song lyrics)
ಆಕಾಶ ಗಡಿಯ ದಾಟಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದೇನೆ
ಜೀವ ಕೊಟ್ಟಂತೆ....
ಕಣ್ಣ ಕಾಯೋ ರೆಪ್ಪೆ ಅವನೇ
ಕಾವಲಾದಂತೆ...
ಮೋಡನಾ ಮಳೆಯ ಮಾಡಿ
ನೂರಾರು ಹನಿಯಾ ಕೂಡಿ
ಕಾದ ನೆಲಕ್ಕೆ ಮುತ್ತನ್ನಿಡುವ
ಜೀವ ಹನಿಯಂತೆ
ಬೆನ್ನ ಹಿಂದೆ ಕಾಣದಂತಹ ಸೈನ್ಯ ನಿಂತಂತೆ
ಖಡ್ಗ ಇವನಂತೆ
ಕಡುಕೋಪ ಅವನಂತೆ
ಇವ ಕಿಂಕರ ಅವ ಭಯಂಕರ
ಕಲಹ ಕದನನೇ....
ಶಕ್ತಿ ಇವನು ಸೈನ ಅವನು...
ಎದುರು ನಿಂತರೆ ಸಮರವೇ...
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಬೇಕು ನೂರ್‌ಕಾಲ ನಿಲ್ಲಬೇಕು
ಇಬ್ಬರೊಂದಾಗಿ
ರಣರಂಗ ನಡಗುತ್ತಿದೆ
ಶತ್ರು ಇವನು, ಮೃತ್ಯು ಅವನು
ಪ್ರಳಯ ಭೂಮಿನೇ...
ಅಗ್ನಿ ಇವನು ಜ್ವಾಲೆ ಅವನು
ಹಗೆಯು ಸುಳಿದರೆ ರೌದ್ರವೇ...
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಿಬೇಕು ನೂರ್ಕಾಲ ನಿಲ್ಲಬೇಕು
ಆಕಾಶ ಗಡಿಯ ದಾಟಿ
ತಂದನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದನೇ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆ ಅವನೇ ಕಾವಲಾದಂತೆ
ಸಲಾರ್ ಮೊದಲ ಹಾಡಿನ ವಿಡಿಯೋ ನೋಡಿ
ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ್ ಸಿನಿಮಾ ಇದೇ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಆಕ್ಷನ್ ಇರುವ ಡ್ರಾಮಾಗಿದ್ದು, ಈ ಚಿತ್ರದಲ್ಲಿ ತೆಲುಗು ಮೂಲದ ಮಲಯಾಳಂ ನಟ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಲಾರ್ ಸಿನಿಮಾದ ಚಿತ್ರೀಕರಣ ಆರಂಭವಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಸಿನಿಮಾವನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಬಿಡುಗಡೆ ಮುಂದಕ್ಕೆ ಹಾಕಲಾಗಿತ್ತು.
