ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ
ಕನ್ನಡ ಸುದ್ದಿ  /  ಮನರಂಜನೆ  /  ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

Sambhavami Yuge Yuge Kannada Movie: ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ "ಸಂಭವಾಮಿ ಯುಗೇಯುಗೇ" ಮಾತು ಈಗ ಕನ್ನಡ ಸಿನಿಮಾವಾಗುತ್ತಿದೆ. ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ "ಸಂಭಾವಮಿ ಯುಗೇಯುಗೇ" ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ರಿಲೀಸ್‌ ಆಗಿದೆ.

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ
ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ

ಬೆಂಗಳೂರು: ಶ್ರೀಕೃಷ್ಣ ಭಗವದ್ಗೀತೆಯಲ್ಲಿ "ಸಂಭವಾಮಿ ಯುಗೇಯುಗೇ" ಎಂಬ ಮಾತನ್ನು ಹೇಳಿದ್ದಾನೆ. ಅಧರ್ಮ ಹೆಚ್ಚಾದಾಗ ನಾನು ಪುನಃ ಪುನಃ ಬರುತ್ತಿರುತ್ತೇನೆ ಎಂದು ಈ ಮಾತಿನ ಅರ್ಥ. ಕೃಷ್ಣ ಹೇಳಿದ ಈ ಮಾತೇ ಈಗ ಚಿತ್ರದ ಶೀರ್ಷಿಕೆಯಾಗಿದೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ "ಸಂಭಾವಮಿ ಯುಗೇಯುಗೇ" ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ‌.

ಭಗವದ್ಗೀತೆಯ ಈ ವಾಕ್ಯವನೇ ಆದರ್ಶವಾಗಿಟ್ಟುಕೊಂಡು ನಿರ್ದೇಶಕರು ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಚೇತನ್ ಚಂದ್ರಶೇಖರ್ ಶೆಟ್ಟಿ ಅವರದೆ. ಪಕ್ಕಾ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಇದೆ ಎನ್ನುತ್ತಾರೆ ನಿರ್ದೇಶಕರು.

ಸಂಭವಾಮಿ ಯುಗೇಯುಗೇ ಸಿನಿಮಾ
ಸಂಭವಾಮಿ ಯುಗೇಯುಗೇ ಸಿನಿಮಾ

ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದೆ. ಚನ್ನಪಟ್ಟಣದ ಸುತ್ತಮುತ್ತ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿರುವ ಚಿತ್ರತಂಡ ಮೊದಲಹೆಜ್ಜೆಯಾಗಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.

"ಸಂಭಾವಮಿ ಯುಗೇಯಗೇ" ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಪುರಾನ್ ಶೆಟ್ಟಿಗಾರ್ ಸಂಗೀತ ನೀಡಿದ್ದಾರೆ. ಪ್ರಾಂಕ್ರಿನ್ ರಾಖಿ ಅವರ ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ರವೀಶ್ ಆತ್ಮಾರಾಮ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಗೀತಾ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ದಿನೇಶ್ ರಾಜನ್.

ಸಂಭವಾಮಿ ಯುಗೇಯುಗೇ ಸಿನಿಮಾ
ಸಂಭವಾಮಿ ಯುಗೇಯುಗೇ ಸಿನಿಮಾ

ಜಯ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಿಶಾ ರಜಪೂತ್ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರಗೌಡ ಪ್ರಮುಖಪಾತ್ರದಲ್ಲಿದ್ದಾರೆ. ಅಭಯ್ ಪುನೀತ್, ಬಾಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Whats_app_banner