Prakash Raj: ಸ್ಟ್ಯಾಲಿನ್ ಯಾರ್ ರಿ? ಪ್ರಕಾಶ್ ರಾಜ್ ಹುಟ್ಟಿನ ಬಗ್ಗೆ ಈಶ್ವರಪ್ಪ ವಾಗ್ದಾಳಿ
ಕನ್ನಡ ಸುದ್ದಿ  /  ಮನರಂಜನೆ  /  Prakash Raj: ಸ್ಟ್ಯಾಲಿನ್ ಯಾರ್ ರಿ? ಪ್ರಕಾಶ್ ರಾಜ್ ಹುಟ್ಟಿನ ಬಗ್ಗೆ ಈಶ್ವರಪ್ಪ ವಾಗ್ದಾಳಿ

Prakash Raj: ಸ್ಟ್ಯಾಲಿನ್ ಯಾರ್ ರಿ? ಪ್ರಕಾಶ್ ರಾಜ್ ಹುಟ್ಟಿನ ಬಗ್ಗೆ ಈಶ್ವರಪ್ಪ ವಾಗ್ದಾಳಿ

ಸನಾತನ ಧರ್ಮ ಬಗ್ಗೆ ಪರ ವಿರೋಧ ಚರ್ಚೆಗಳು ಹೆಚ್ಚಾಗುತ್ತಿವೆ. ನಟ ಪ್ರಕಾಶ್‌ ರಾಜ್‌ ಸಹ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಆ ಹೇಳಿಕೆಗೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

Prakash Raj: ಸ್ಟ್ಯಾಲಿನ್ ಯಾರ್ ರಿ? ಪ್ರಕಾಶ್ ರಾಜ್ ಹುಟ್ಟಿನ ಬಗ್ಗೆ ಈಶ್ವರಪ್ಪ ವಾಗ್ದಾಳಿ
Prakash Raj: ಸ್ಟ್ಯಾಲಿನ್ ಯಾರ್ ರಿ? ಪ್ರಕಾಶ್ ರಾಜ್ ಹುಟ್ಟಿನ ಬಗ್ಗೆ ಈಶ್ವರಪ್ಪ ವಾಗ್ದಾಳಿ

Prakash Raj: ಕಳೆದ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸನಾತನ ಧರ್ಮ ವಿಚಾರದ ಪರ ವಿರೋಧ ಚರ್ಚೆಯಾಗುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಅವರ ಮಗ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ವಿಚಾರವಾಗಿ ನೀಡಿದ್ದ ಹೇಳಿಕೆ ಇದೀಗ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಪ್ರಕಾಶ್‌ ರಾಜ್‌, ಕಿಶೋರ್‌ ಸೇರಿ ಇನ್ನೂ ಹಲವರು ಸನಾತನ ಧರ್ಮದ ಬಗ್ಗೆ ಟೀಕಿಸಿದ್ದಾರೆ. ರಾಜಕಾರಣಿಗಳೂ ಈ ವಿಚಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡುತ್ತಿದ್ದಾರೆ. ಇದೀಗ ನಟ ಪ್ರಕಾಶ್‌ ರಾಜ್‌ ಮಾತಿಗೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನಟ ಪ್ರಕಾಶ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪ್ರಕಾಶ ರಾಜ್ ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗಿದೆ ಅಲ್ವಾ ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಗೌರವ ಇದೆ ಎಂದರು.

ಇನ್ನು ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಜಿ. ಪರಮೇಶ್ವರ ಅವರಿಗೆ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಎಂದು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದರು.

ಉದಯ ಸ್ಟ್ಯಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಉದಯನಿಧಿ ಸ್ಟ್ಯಾಲಿನ್, ಪರಮೇಶ್ವರ್, ಪ್ರಕಾಶ್ ರಾಜ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ಕಿಡಿಕಾರಿದರು. ಉದಯನಿಧಿಗೂ ಸನಾತನ ಧರ್ಮಕ್ಕೂ ಏನ್ ಸಂಬಂಧ? ಸ್ಟ್ಯಾಲಿನ್ ಯಾರ್ ರಿ? ಸಾಧು-ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲು ಆಗಿಲ್ಲ, ಆಗೋದು ಇಲ್ಲ. ಧರ್ಮ ವಿರುದ್ಧ ಯಾರು ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೊ ಅವರು ನಾಶವಾಗಿ ಹೋಗ್ತಾರೆ ಎಂದರು.

ಹಿಂದುತ್ವದ ಬಗ್ಗೆ ಶಾಸಕ ಯತ್ನಾಳ 90% ಜೋರಾಗಿಯೇ ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿಜವಾದ ಗಂಡು. ಯತ್ನಾಳ ನಮ್ಮ ಲೀಡರ್. ಇದು ನನಗೆ ಖುಷಿ ಇದೆ. ಆದ್ರೇ, ಶೇ. 10% ರಷ್ಟು ಮಾತ್ರ ಆಚೀಚೆ ಮಾತನಾಡುತ್ತಾರೆ. ಅದನ್ನು ನಾವು ಸರಿ ಪಡಿಸುತ್ತೇವೆ ಎಂದರು.

ಸ್ಟಾಲಿನ್‌ ಹೇಳಿಕೆ ಏನಾಗಿತ್ತು?

"ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇವನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ" ಎಂದು ಉದಯನಿಧಿ ಸ್ಟಾಲಿನ್​​ ಹೇಳಿಕೆ ನೀಡಿದ್ದರು.

Whats_app_banner