Sanjay Dutt: ರಾಕ್ಷಸ ಪ್ರಜಾಪ್ರಭುತ್ವದ ರಾಜ ಧಕ್‌ ದೇವ ಬಂದ; ಧ್ರುವ ಸರ್ಜಾ ಕೆಡಿ- ದಿ ಡೆವಿಲ್‌ ಯುದ್ಧಾಂಗಣಕ್ಕೆ ಸಂಜಯ್‌ ದತ್‌ ಎಂಟ್ರಿ
ಕನ್ನಡ ಸುದ್ದಿ  /  ಮನರಂಜನೆ  /  Sanjay Dutt: ರಾಕ್ಷಸ ಪ್ರಜಾಪ್ರಭುತ್ವದ ರಾಜ ಧಕ್‌ ದೇವ ಬಂದ; ಧ್ರುವ ಸರ್ಜಾ ಕೆಡಿ- ದಿ ಡೆವಿಲ್‌ ಯುದ್ಧಾಂಗಣಕ್ಕೆ ಸಂಜಯ್‌ ದತ್‌ ಎಂಟ್ರಿ

Sanjay Dutt: ರಾಕ್ಷಸ ಪ್ರಜಾಪ್ರಭುತ್ವದ ರಾಜ ಧಕ್‌ ದೇವ ಬಂದ; ಧ್ರುವ ಸರ್ಜಾ ಕೆಡಿ- ದಿ ಡೆವಿಲ್‌ ಯುದ್ಧಾಂಗಣಕ್ಕೆ ಸಂಜಯ್‌ ದತ್‌ ಎಂಟ್ರಿ

Sanjay Dutt KD Movie: ಧ್ರುವ ಸರ್ಜಾ ನಟನೆಯ ಕೆಡಿ- ದಿ ಡೆವಿಲ್‌ ಸಿನಿಮಾ ತಂಡಕ್ಕೆ ಈಗ ಬಾಲಿವುಡ್‌ನ ಸಂಜಯ್‌ ದತ್‌ ಎಂಟ್ರಿ ನೀಡಿದ್ದಾರೆ. ಡೆವಿಲ್‌ ಡೆಮಾಕ್ರಸಿಯ ಲಾರ್ಡ್‌ ಧಕ್‌ ದೇವನಾಗಿ ಸಂಜಯ್‌ ದತ್‌ ನಟಿಸಲಿದ್ದಾರೆ. ಸಂಜಯ್ ದತ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

Sanjay Dutt: ರಾಕ್ಷಸ ಪ್ರಜಾಪ್ರಭುತ್ವದ ರಾಜ ಧಕ್‌ ದೇವ ಬಂದ; ಸಂಜಯ್‌ ದತ್‌ ಎಂಟ್ರಿ
Sanjay Dutt: ರಾಕ್ಷಸ ಪ್ರಜಾಪ್ರಭುತ್ವದ ರಾಜ ಧಕ್‌ ದೇವ ಬಂದ; ಸಂಜಯ್‌ ದತ್‌ ಎಂಟ್ರಿ

ಬೆಂಗಳೂರು: ಒಂದೆಡೆ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಧ್ರುವ ಸರ್ಜಾ ನಟನೆಯ ಕೆಡಿ ದಿ ಡೆವಿಲ್‌ ಸಿನಿಮಾದ ಅಪ್‌ಡೇಟ್‌ ಕೂಡ ದೊರಕಿದ್ದು, ಆಕ್ಷನ್‌ ಫ್ರಿನ್ಸ್‌ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಕೆಡಿ ಸಿನಿಮಾದಲ್ಲಿ ಧಕ್‌ ದೇವನಾಗಿ ಸಂಜಯ್‌ ದತ್‌ ನಟಿಸಲಿದ್ದಾರೆ ಎಂಬ ಅಪ್‌ಡೇಟ್‌ ಅನ್ನು ಚಿತ್ರತಂಡ ನೀಡಿದೆ. ಇಷ್ಟೇ ಮಾತ್ರವಲ್ಲದೆ ಧಕ್‌ ದೇವ ಹೇಗಿರಲಿದ್ದಾನೆ ಎಂಬ ಝಲಕ್‌ ನೀಡುವ ಪೋಸ್ಟರ್‌ ಅನ್ನೂ ಬಿಡುಗಡೆ ಮಾಡಲಾಗಿದೆ.

"ಲಾರ್ಡ್‌ ಆಫ್‌ ಡೆವಿಲ್‌ ಡೆಮಕ್ರಸಿಯ ಧಕ್‌ ದೇವನಾಗಿ ಕೆಡಿ ವಿಂಟೇಜ್‌ ಯುದ್ಧ ಭೂಮಿಯಲ್ಲಿ ಸಂಜಯ್‌ ದತ್‌ ಸುನಾಮಿ ಎಬ್ಬಿಸಲಿದ್ದಾರೆ. ನಮ್ಮ ಪ್ರೀತಿಯ ಸಂಜಯ್‌ ದತ್‌ಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕೆವಿಎನ್‌ ಪ್ರೊಡಕ್ಷನ್‌ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಪೋಸ್ಟರ್‌ ಹಂಚಿಕೊಂಡಿದೆ.

ಕೆಡಿ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳ್ತಾ ಇರುವುದು ನಿರ್ದೇಶಕ ಪ್ರೇಮ್‌. ಈ ಚಿತ್ರದಲ್ಲಿ ಹಲವು ಪ್ರಮುಖ ನಟರು ನಟಿಸುತ್ತಿದ್ದಾರೆ. ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರಮೇಶ್‌ ಅರವಿಂದ್‌, ರವಿಚಂದ್ರನ್‌ ಸೇರಿದಂತೆ ಭಾರತದ ಪ್ರಮುಖ ತಾರಾಗಣವಿರಲಿದೆ. ಇದೇ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಈಗಾಗಲೇ ಕೆಡಿ ಸಿನಿಮಾದ ಆಡಿಯೋ ಹಕ್ಕುಗಳು ದಾಖಲೆ ಮಟ್ಟಕ್ಕೆ ಬಿಕರಿಯಾಗಿರುವ ಸಂಗತಿ ಬಹಿರಂಗಗೊಂಡಿದೆ. ಆಡಿಯೋ ಹಕ್ಕು ಎಷ್ಟು ಮೊತ್ತಕ್ಕೆ ಹೋಗಿದೆ ಎಂದು ಯಾವೊಬ್ಬ ನಿರ್ಮಾಪಕರೂ ಹೇಳಿಕೊಂಡಿದ್ದಿಲ್ಲ. ಆದರೆ ಇದೇ ಮೊದಲ ಬಾರಿಗೆ ನಿರ್ದೇಶಕ ಪ್ರೇಮ್ ತಮ್ಮ ಕೆಡಿ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು 17.70 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ ಎಂದು ಇದೇ ಮಾರ್ಚ್‌ ತಿಂಗಳಲ್ಲಿ ಮಾಹಿತಿ ನೀಡಿದ್ದರು.

ಕೆಡಿ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತವಿರಲಿದೆ. ಇದು ವಿಂಟೇಜ್‌ ಹಿನ್ನಲೆಯ ಸಿನಿಮಾ. ಅಂದರೆ, ಎಪ್ಪತ್ತು, ಎಂಭತ್ತರ ದಶಕದ ಕಥೆಯನ್ನು ಹೊಂದಿದೆ. ಜವಾನ್‌ ಚಿತ್ರಕ್ಕೆ ಬಳಸಿದಂತಹ 256 ಪೀಸ್ ಆರ್ಕೆಸ್ಟ್ರಾವನ್ನು ಕೆಡಿ ಸಿನಿಮಾಕ್ಕೆ ಬಳಸಲಾಗುತ್ತಿದೆ. ನಿರ್ದೇಶಕ ಪ್ರೇಮ್‌ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಧ್ರುವ ಸರ್ಜಾ ಸಿನಿಮಾಗಳು

ಕನ್ನಡದ ಆಕ್ಷನ್‌ ಫ್ರಿನ್ಸ್‌ ಎಂದೇ ಖ್ಯಾತಿ ಪಡೆದಿರುವ ಧ್ರುವ ಸರ್ಜಾ ಇಲ್ಲಿಯವರೆಗೆ ಕೇವಲ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಸಿದ ಐದೂ ಸಿನಿಮಾಗಳು ಹೆಸರು ಮಾಡಿದ್ದವು. ಅದ್ಧೂರಿ, ಬಹದ್ಧೂರ್‌, ಭರ್ಜರಿ, ಪ್ರೇಮ ಬರಹ ಮತ್ತು ಪೊಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಮ ಬರಹ ಸಿನಿಮಾದಲ್ಲಿ ಜೈ ಹನುಮಂತ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ಧ್ರುವ ಸರ್ಜಾ ನಟನೆಯ ಮುಂಬರುವ ಸಿನಿಮಾಗಳು

ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಸೆಪ್ಟೆಂಬರ್‌ 9ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಬ್ರಿಗೇಡಿಯರ್‌ ಅರ್ಜುನ್‌ ಸಕ್ಸೆನಾ, ಏಜೆಂಡ್‌ ಡಿಐಎ, ಬಿಎಸ್‌ಎಫ್‌ ಆಗಿ ಧ್ರುವ ಸರ್ಜಾ ನಟಿಸಿದ್ದಾರೆ. ಇದಲ್ಲದೆ ಕೆಡಿ ದಿ ಡೆವಿಲ್‌ ಎನ್ನುವುದು ಕೂಡ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಭಾರತದ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.

Whats_app_banner