ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್‌ಗೆ ಆಕ್ಷನ್ ಕಟ್ ಹೇಳ್ತಾರಂತೆ ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್, ಎಚ್‌ಟಿ ಸಂದರ್ಶನದಲ್ಲಿ ಬಹಿರಂಗ
HT exclusive interview: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಿರ್ದೇಶಕರಾದ ಹೇಮಂತ್ ರಾವ್ ಅವರು ತನ್ನ ಮುಂದಿನ ಸಿನಿಮಾದ ಕುರಿತು ಮಾತನಾಡಿದ್ದಾರೆ. ಇವರು ಶಿವರಾಜ್ ಕುಮಾರ್ ಜತೆ ಮುಂದಿನ ಸಿನಿಮಾ ಮಾಡಲಿದ್ದಾರೆ.
ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಮತ್ತು 'ಸೈಡ್ ಬಿ' ಸಿನಿಮಾಗಳ ಮೂಲಕ ನಿರ್ದೇಶಕ ಹೇಮಂತ್ ರಾವ್ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರು ಹೇಮಂತ್ ರಾವ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತು ಗುರುವಾರ ಪ್ರಕಟಣೆ ಹೊರಡಲಿದೆ. ಇದಕ್ಕೂ ಮೊದಲೇ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಹೇಮಂತ್ ರಾವ್ ಒಂದಿಷ್ಟು ವಿವರ ನೀಡಿದ್ದಾರೆ.
ಇದು ವೈಜ್ಞಾನಿಕ ಸಿನಿಮಾವಲ್ಲ: ಹೇಮಂತ್ ರಾವ್ ಸ್ಪಷ್ಟನೆ
ಇತ್ತೀಚೆಗೆ ಶಿವಣ್ಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೈಲರ್ ಮತ್ತು ಕ್ಯಾಪ್ಟನ್ ಮಿಲ್ಲರ್‌ನಂತಹ ಮೆಗಾ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತೆರೆಯ ಮೇಲೆ ಕೆಲವು ಸಮಯ ಮಾತ್ರವಿದ್ದರೂ ದೊಡ್ಡ ಮಟ್ಟದ ಹವಾ ಸೃಷ್ಟಿಸಿದ್ದಾರೆ. ಇದೀಗ ಶಿವಣ್ಣ ಹೇಮಂತ್ ರಾವ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಷಯವು ದೊಡ್ಡ ಸಂಚಲನ ಉಂಟು ಮಾಡಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಶಿವರಾಜ್ ಕುಮಾರ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಹೇಮಂತ್ ರಾವ್ ಇನ್ನಷ್ಟು ವಿವರ ನೀಡಿದ್ದಾರೆ. "ಇದು ಸೈನ್ಸ್ ಫಿಕ್ಷನ್ ಚಿತ್ರ ಎಂದು ಕೆಲವು ವರದಿಗಳು ಬಂದಿವೆ. ಆದರೆ, ಇದು ಸೈನ್ಸ್ ಫಿಕ್ಷನ್ ಚಿತ್ರವಲ್ಲ. ಇದೊಂದು ಆಖ್ಷನ್ ಡ್ರಾಮಾ. ಶಿವಣ್ಣ ಸರ್ ತಮ್ಮ ವೃತ್ತಿಜೀವನದಲ್ಲಿ ಮಾಡದೆ ಇರುವಂತಹ ಕಥೆ ಇದಾಗಿದೆ. ಅವರ ಸಿನಿಮಾಗಳನ್ನು ನೋಡುತ್ತ ಬೆಳೆದ ನಾನು ಅವರನ್ನು ಹೊಸ ಪಾತ್ರದಲ್ಲಿ ನೋಡಲು ಬಯಸುತ್ತೇನೆ. ಇದು ತುಂಬಾ ವಿಭಿನ್ನ ಎಂದು ನಾನು ಭಾವಿಸುವೆ" ಎಂದು ಹೇಮಂತ್ ಕುಮಾರ್ ಹೇಳಿದ್ದಾರೆ.
ಶಿವಣ್ಣನ ಮುಂದಿನ ಸಿನಿಮಾ
ಮುಂದಿನ ಪ್ರಾಜೆಕ್ಟ್ ಕುರಿತು ಹೆಚ್ಚಿನ ವಿವರ ನೀಡಲು ನಿರ್ದೇಶಕರು ನಿರಾಕರಿಸಿದ್ದಾರೆ. ಈ ಸಿನಿಮಾ ಐತಿಹಾಸಿಕ ಅಂಶಗಳನ್ನು ಹೊಂದಿರುತ್ತದೆ. ಪಿರೆಯಿಡಿಕಲ್ ಚಿತ್ರವಾಗಿರಲಿದೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ನಿರ್ದೇಶಕರು ಈ ಚಿತ್ರದ ಸ್ಕ್ರಿಪ್ಟ್ ಮುಗಿಸುತ್ತಿದ್ದಾರೆ. ಬಳಿಕ ಇದು ಶೀಘ್ರದಲ್ಲಿ ಪ್ರಿ-ಪ್ರೊಡಕ್ಷನ್‌ಗೆ ಹೋಗಲಿದೆ. ನರ್ತನ್ ನಿರ್ದೇಶಣದ ಭೈರತಿ ರಣಗಲ್ ಚಿತ್ರದ ಕೆಲಸ ಮುಗಿಸಿದ ಮೇಲೆ ಹೇಮಂತ್ ರಾವ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.
ಒಟಿಟಿಯಲ್ಲಿ ನೋಡಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ
ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಈಗ ಒಟಿಟಿಯಲ್ಲಿ ಪ್ರದರ್ಶನವಾಗುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿವೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎಯಲ್ಲಿ ಮನು ಮತ್ತು ಪ್ರಿಯರ ಪ್ರೇಮಕಥೆ ಸಿನಿಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತಂದಿತ್ತು. ಮನು ಜೈಲಿನಲ್ಲಿಯೇ ಉಳಿದರೆ, ಪ್ರಿಯಾ ಬೇರೆಯವನ ಮದುವೆಯಾಗಿ ಜೀವನ ಮುಂದುವರಿಸಿದ್ದಳು. ಇದರ ಕಥೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಮುಂದುವರೆದಿದೆ.