ಶಿವಕಾರ್ತಿಕೇಯನ್‌ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್‌, ಪ್ರೀತಿಯ ಪಾರಿವಾಳ ಹಾರಿಹೋಯ್ತು ಅಂದ್ರು ನೆಟ್ಟಿಗರು
ಕನ್ನಡ ಸುದ್ದಿ  /  ಮನರಂಜನೆ  /  ಶಿವಕಾರ್ತಿಕೇಯನ್‌ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್‌, ಪ್ರೀತಿಯ ಪಾರಿವಾಳ ಹಾರಿಹೋಯ್ತು ಅಂದ್ರು ನೆಟ್ಟಿಗರು

ಶಿವಕಾರ್ತಿಕೇಯನ್‌ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್‌, ಪ್ರೀತಿಯ ಪಾರಿವಾಳ ಹಾರಿಹೋಯ್ತು ಅಂದ್ರು ನೆಟ್ಟಿಗರು

Rukmini Vasanth: ಸಪ್ತ ಸಾಗರದಾಚೆ ಎಲ್ಲೋ ನಾಯಕಿ ರುಕ್ಮಿಣಿ ವಸಂತ್‌ ಅವರು ಶಿವಕಾರ್ತಿಕೇಯನ್‌ ಮುಂದಿನ ಸಿನಿಮಾ ಎಸ್‌ಕೆ23ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎಆರ್ ಮುರಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಇಂದು ಮುಹೂರ್ತ ಕಾರ್ಯಕ್ರಮ ನಡೆದಿದೆ.

ಶಿವಕಾರ್ತಿಕೇಯನ್‌ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್‌
ಶಿವಕಾರ್ತಿಕೇಯನ್‌ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್‌

ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕನ್ನಡಿಗರ ಕ್ರಶ್‌ ಆಗಿರುವ ರುಕ್ಮಿಣಿ ವಸಂತ್‌ಗೆ ಪರಭಾಷೆಗಳಲ್ಲಿ ಅವಕಾಶ ದೊರಕುತ್ತಿದೆ. ಇದೀಗ ಇವರು ಇನ್ನೂ ಹೆಸರಿಡದ ಶಿವಕಾರ್ತಿಕೇಯನ್‌ ಮುಂದಿನ ಸಿನಿಮಾ ಎಸ್‌ಕೆ23 ತಂಡಕ್ಕೆ ಸೇರಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ರುಕ್ಮಿಣಿ ವಸಂತ್‌ ಅಪ್‌ಡೇಟ್‌ ನೀಡಿದ್ದಾರೆ. ಎಆರ್ ಮುರಗದಾಸ್ ಆಕ್ಷನ್‌ ಕಟ್‌ ಹೇಳಲಿರುವ ಈ ಚಿತ್ರದಲ್ಲಿ ಕಾಲಿವುಡ್‌ ನಟ ಶಿವ ಕಾರ್ತಿಕೇಯನ್ ಜತೆ ರುಕ್ಮಿಣಿ ವಸಂತ್‌ ನಟಿಸಲಿದ್ದಾರೆ.

ರುಕ್ಮಿಣಿ ವಸಂತ್‌ ಏನಂದ್ರು?

ಈ ಅದ್ಭುತ ತಂಡದ ಭಾಗವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಿಮ್ಮ ಸುಂದರ ಸ್ವಾಗತಕ್ಕೆ ಧನ್ಯವಾದ. ಅದ್ಭುತ ಶೂಟಿಂಗ್‌ಗಾಗಿ ಕಾಯುತ್ತಿರುವೆ ಎಂದು ರುಕ್ಮಿಣಿ ವಸಂತ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ.

ಪ್ರೀತಿಯ ಪಾರಿವಾಳ ಹಾರಿಹೋಯ್ತು ಅಂದ್ರು ನೆಟ್ಟಿಗರು

ಕಾಲಿವುಡ್‌ ನಟ ಶಿವಕಾರ್ತಿಕೇಯನ್‌ ಟೀಮ್‌ಗೆ ರುಕ್ಮಿಣಿ ವಸಂತ್‌ ಸೇರಿರುವುದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ. "ಪ್ರೀತಿಯ ಪಾರಿವಾಳ ತಮಿಳಿಗೆ ಹಾರಿಹೋಯ್ತು ಗೆಳೆಯ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಕಥಮ್ ಟಾಟಾ ಬಾಯ್ ಬಾಯ್" "ತುಂಬಾ ಬೇಜಾರಿನ ಸಂಗತಿ, ಬೆಳಿಯೋವರೆಗೂ ಕನ್ನಡ ಬೆಳೆದು ಆದಮೇಲೆ ಬೇರೆ ಭಾಷೆ" "ಅಕ್ಕ ಅಲ್ಲಿಗೆ ಹೋಗಿರೋದು ಸಂತೋಷ, ಅಲ್ಲೇ ಸೆಟಲ್‌ ಆಗಬೇಡಿ" "ಇಲ್ಲಿ ಅವಕಾಶ ಕಡಿಮೆ ಆಗಿರೋದಕ್ಕೆ ಅಲ್ಲಿಗೆ ಹೋಗಿರೋದು" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ರುಕ್ಮಿಣಿ ವಸಂತ್‌ಗೆ ಅಭಿನಂದನೆ ತಿಳಿಸಿದ್ದಾರೆ. "ವೆಲ್‌ ಡಿಸರ್ವ್ಡ್‌, ಉತ್ತಮ ಅವಕಾಶ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಶಿವಕಾರ್ತಿಕೇಯನ್‌ ಚಿತ್ರಕ್ಕೆ ಮುಹೂರ್ತ

ಶಿವಕಾರ್ತಿಕೇಯನ್‌ ಚಿತ್ರಕ್ಕೆ ಸದ್ಯ ಎಸ್‌ಕೆ 23 ಎಂದು ಹೆಸರಿಡಲಾಗಿದೆ. ಅಂದರೆ, ಶಿವಕಾರ್ತಿಕೇಯನ್‌ ಅವರ 23ನೇ ಸಿನಿಮಾ. ಈಗಾಗಲೇ ಇವರ ಅಯಾಲನ್ ಸಿನಿಮಾ ಸೂಪರ್‌ಹಿಟ್‌ ಆಗಿದ್ದಾರೆ. ಇದೇ ಸಮಯದಲ್ಲಿ ಎಸ್‌ಕೆ 23 ಮುಹೂರ್ತ ಮಾಡಲಾಗಿದೆ. ಈ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಶಿವ ಕಾರ್ತಿಕೇಯನ್‌ಗೆ ಹೀರೋಯಿನ್‌ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಮೃಣಾಲ್‌ ಠಾಕೂರ್‌ಗೆ ಅವಕಾಶ ದೊರಕಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಅವಕಾಶ ಸಪ್ತ ಸಾಗರದಾಚೆ ಎಲ್ಲೋ ಚೆಲುವೆಗೆ ದೊರಕಿದೆ.

ಕಾರ್ತಿಕೇಯನ್‌ ನಟನೆಯ ಎಸ್‌ಕೆ35 ಸಿನಿಮಾದಲ್ಲಿ ಮೋಹನ್‌ ಲಾಲ್‌ ಮತ್ತು ವಿದ್ಯುತ್‌ ಜಮ್ವಾಮ್‌ ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಅನಿರುದ್ಧ್‌ ರವಿಚಂದರ್‌ ಸಂಗೀತವಿರಲಿದೆ.

ರುಕ್ಮಿಣಿ ವಸಂತ್‌ ಪ್ರಾಜೆಕ್ಟ್‌ಗಳು

ಸ್ಯಾಂಡಲ್‌ವುಡ್‌ ಕುಡಿಗಳಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಈಗಾಗಲೇ ತೆಲುಗು ಸಿನಿಮಾದಲ್ಲಿ ಬೇಡಿಕೆಯ ನಟಿಯರು. ಇದೇ ರೀತಿ ರುಕ್ಮಿಣಿ ವಸಂತ್‌ಗೂ ಪರಭಾಷೆಯಿಂದ ಅವಕಾಶಗಳು ದೊರಕುತ್ತಿವೆ. ಬೆಂಗಳೂರು ಮೂಲದ ರುಕ್ಮಿಣಿ ವಸಂತ್‌ ಅವರು ನಟನಾ ತರಬೇತಿ ಕೋರ್ಸ್‌ ಅನ್ನು ಲಂಡನ್‌ನಲ್ಲಿ ಪಡೆದಿದ್ದಾರೆ. 2019ರಲ್ಲಿ ಬೀರಬಲ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಇವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇವರು ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ಬಾನದಾರಿಯಲ್ಲಿ ಚಿತ್ರದಲ್ಲೂ ನಟಿಸಿದ್ದರು.

ಮುರಳಿ ನಾಯಕ ನಟನಾಗಿರುವ ಬಘೀರ ಚಿತ್ರಕ್ಕೂ ರುಕ್ಮಿಣಿ ನಾಯಕಿ. ಬೈರತಿ ರಣಗಲ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ಗೆ ರುಕ್ಮಿಣಿ ವಸಂತ್‌ ನಾಯಕಿ. ಇವರ ಕೈಯಲ್ಲಿ ಕನ್ನಡ ಪ್ರಾಜೆಕ್ಟ್‌ಗಳೂ ಇವೆ. ಜತೆಗೆ, ಪರಭಾಷೆಗಳ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ.