Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌; ಕಿಚ್ಚನ ಮಗಳು ಶಾನ್ವಿ ಸುದೀಪ್‌ ನೀಡಿದ್ರು ಬ್ಯೂಟಿಫುಲ್‌ ಕಾಮೆಂಟ್‌
ಕನ್ನಡ ಸುದ್ದಿ  /  ಮನರಂಜನೆ  /  Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌; ಕಿಚ್ಚನ ಮಗಳು ಶಾನ್ವಿ ಸುದೀಪ್‌ ನೀಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌; ಕಿಚ್ಚನ ಮಗಳು ಶಾನ್ವಿ ಸುದೀಪ್‌ ನೀಡಿದ್ರು ಬ್ಯೂಟಿಫುಲ್‌ ಕಾಮೆಂಟ್‌

Chaitra J Achar: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ನಟಿ ಚೈತ್ರಾ ಜೆ ಆಚಾರ್‌ ಪ್ರೀತಿಯ ಹೆಸರೇ ನೀನು ಎಂಬ ಹಾಡು ಹಾಡಿದ್ದು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇದಕ್ಕೆ ಕಿಚ್ಚನ ಮಗಳು ಶಾನ್ವಿ ಸುದೀಪ್‌, ವಾಸುಕಿ ವೈಭವ್‌, ಶೃತಿ ಹರಿಹರಣ್‌ ಮೊದಲಾದವರು ಪ್ರತಿಕ್ರಿಯೆ ನೀಡಿದ್ದಾರೆ.

Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌
Chaitra J Achar: ಪ್ರೀತಿಯ ಹೆಸರೇ ನೀನು ಎಂದ ಚೈತ್ರಾ ಜೆ ಆಚಾರ್‌

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ನಟಿ ಚೈತ್ರಾ ಜೆ ಆಚಾರ್‌ ಒಳ್ಳೆಯ ಹಾಡುಗಾರ್ತಿಯೂ ಹೌದು. ಸೋಜಿಗದ ಸೂಜು ಮಲ್ಲಿಗೆ ಸೇರಿದಂತೆ ಹಲವು ಚಲನಚಿತ್ರ ಗೀತೆಗಳಿಗೆ ಇವರು ಧ್ವನಿಯಾಗಿದ್ದಾರೆ. ಇದೀಗ ಚೈತ್ರಾ ಜೆ ಆಚಾರ್‌ ಕಲ್ಯಾಣ್‌ ಮಂಜುನಾಥ್‌ ಜತೆ "ಪ್ರತೀ ಕ್ಷಣ ಕಂಡಾಗ ನಿನ್ನನು, ಅದೇನೋ ಏನೋ ಏನೋ ಆಗಿದೆ, ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ, ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ, ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ" ಎಂಬ ಹಾಡನ್ನು ಹಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ.

ಕಿಚ್ಚನ ಮಗಳ ಪ್ರತಿಕ್ರಿಯೆ

ಚೈತ್ರಾ ಜೆ ಆಚಾರ್‌ ಹಾಡಿಗೆ ಕಿಚ್ಚನ ಮಗಳು ಶಾನ್ವಿ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ನಿಮ್ಮ ಧ್ವನಿ ಮತ್ತು ನಿಮ್ಮ ಮೇಲೆ ಗೀಳು ಹೊಂದಿದ್ದೇನೆ. ತುಂಬಾ ಚೆನ್ನಾಗಿ ಹಾಡಿದ್ದೀರಿ" ಎಂದು ಶಾನ್ವಿ ಪ್ರತಿಕ್ರಿಯೆ ನೀಡಿದ್ದಾರೆ. ಶಾನ್ವಿ ಕೂಡ ಗಾಯಕಿ.

ಶಾನ್ವಿ ಸುದೀಪ್‌ ಮಾತ್ರವಲ್ಲದೆ ಕನ್ನಡದ ಯುವ ಗಾಯಕ ವಾಸುಕಿ ವೈಭವ್‌ ಕೂಡ "ಲವ್‌" ಇಮೋಜಿಗಳ ಮೂಲಕ ಕಾಮೆಂಟ್‌ ನೀಡಿದ್ದಾರೆ. ಗಾಯಕಿ ಶೃತಿ ಹರಿಹರಣ್‌ ಕೂಡ ಲವ್‌ ಯು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಪನ್ನಗಭರಣ ಕೂಡ ಕಾಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರೀತಿಯ ಹೆಸರು ನೀನು ಹಾಡಿನ ಕನ್ನಡ ಲಿರಿಕ್ಸ್‌

ಹ್ಯಾಪಿ ನ್ಯೂ ಇಯರ್‌ ಸಿನಿಮಾದ ಪ್ರೀತಿಯ ಹೆಸರು ನೀನು ಎಂಬ ಹಾಡನ್ನು ಚೈತ್ರಾ ಜೆ ಆಚಾರ್‌ ಹಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಈ ಮೂಲ ಹಾಡು ರಘು ದೀಕ್ಷಿತ್‌ ಧ್ವನಿಯಲ್ಲಿದೆ. ಆಸಕ್ತರಿಗಾಗಿ ಪ್ರೀತಿಯ ಹೆಸರು ನೀನು ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ.

ಏನೋ ಇದು ಹಾಯಾಗಿದೆ
ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ
ಜೀವ ಬಂದಂತಿದೆ
ಇದ್ದಕಿದ್ದ ಹಾಗೆಯೇ
ಖುಷಿ ಕಣ್ತುಂಬಿದೆ
ತೇಲಾಡುತಾ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ರೋಮಾಂಚನ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು

ಪ್ರತೀ ಕ್ಷಣ ಕಂಡಾಗ ನಿನ್ನನು
ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ
ತೇಲಾಡುತಾ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ರೋಮಾಂಚನ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು

ದಿನ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ
ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೇ ಇದೆ ಎಲ್ಲ ಉತ್ತರ
ದೂರ ದೂರವಾಗಲಿ ಬೇರೆ ಎಲ್ಲ ಕಾಳಜಿ
ಪೂರ ಪೂರ ವಾಲಲಿ ನನ್ನ ಕಡೆಗೆ ಮನ
ತೇಲಾಡುತಾ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ರೋಮಾಂಚನ ಐ ಹ್ಯಾವ್‌ ಫಾಲನ್‌ ಇನ್‌ ಲವ್‌
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು

ಚೈತ್ರಾ ಜೆ ಆಚಾರ್‌ ಕನ್ನಡದ ಹಲವು ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಅಮ್ಮ ಹಾಡುವುದನ್ನು ಕೇಳುತ್ತ ಈಕೆಯೂ ಸಂಗೀತದ ಕುರಿತು ಆಸಕ್ತಿ ಬೆಳೆಸಿಕೊಂಡರು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. ಬಾಲ್ಯದಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಇವರು ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್‌ ಫೇಮಸ್‌ ಆಗಿತ್ತು.

Whats_app_banner