Movie Lyrics: ಧರೆ ನೀ ನೀಡಿದ ಆಸರೆ.. ತೆರೆ ಈ ನೆನಪಿನ ಸೆರೆ; ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಲಿರಿಕ್ಸ್‌-sandalwood news sapta sagaradaache ello side b songs lyrics dhare neenididaasare kannada lyrics pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Movie Lyrics: ಧರೆ ನೀ ನೀಡಿದ ಆಸರೆ.. ತೆರೆ ಈ ನೆನಪಿನ ಸೆರೆ; ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಲಿರಿಕ್ಸ್‌

Movie Lyrics: ಧರೆ ನೀ ನೀಡಿದ ಆಸರೆ.. ತೆರೆ ಈ ನೆನಪಿನ ಸೆರೆ; ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಲಿರಿಕ್ಸ್‌

Sapta Sagaradaache Ello Side B Songs Lyrics: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯ ಧರೆ ನೀ ನೀಡಿದ ಆಸರೆ ಹಾಡು ಮತ್ತು ಅದರ ಸಂಗೀತಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿದೆ.

Movie Lyrics: ಧರೆ ನೀ ನೀಡಿದ ಆಸರೆ.. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಲಿರಿಕ್ಸ್‌
Movie Lyrics: ಧರೆ ನೀ ನೀಡಿದ ಆಸರೆ.. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಲಿರಿಕ್ಸ್‌

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿಯ ಹಾಡುಗಳು ಭಾವಪೂರ್ಣವಾಗಿದ್ದು, ಕಾಡುವಂತೆ ಇದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಧರೆ ನೀ ನೀಡಿದ ಆಸರೆಯ ಹಾಡು ಮತ್ತು ಸಂಗೀತಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಹಾಡಿಗೆ ಹೇಮಂತ್‌ ಎಂ ರಾವ್‌ ನೀಡಿರುವ ಸಂಗೀತಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರೊಂದಿಗೆ ಚರಣ್‌ ರಾಜ್‌ರ ರಾಂಗ ಸಂಯೋಜನೆಯೂ ಈ ಭಾವನಾತ್ಮಕ ಹಾಡನ್ನು ಇನ್ನಷ್ಟು ಕಾಡುವಂತೆ ಮಾಡುತ್ತದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎನಲ್ಲಿ ಆರು ಹಾಡುಗಳು ಕಾಡಿದ್ದವು. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯ ಹಾಡುಗಳೂ ಕಾಡುತ್ತಿವೆ. ಕಡಲನು ಕಾನಾ ಹೊರಟಿರೊ ಹಾಡಂತೂ ಸಾಕಷ್ಟು ವೈರಲ್‌ ಆಗಿದೆ. ರಕ್ಷಿತ್‌ ಶೆಟ್ಟಿ ರಚಿಸಿರೋ ಈ ಹಾಡಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಒಲವೇ ಒಲವೇ ಹಾಡು ಮತ್ತು ಟೈಟಲ್ ಟ್ರ್ಯಾಕ್‌ ಮಾತ್ರ ಸೈಡ್‌ ಬಿ ಸಿನಿಮಾ ಬಿಡುಗಡೆಗೆ ಮೊದಲು ಬಿಡುಗಡೆಯಾಗಿತ್ತು. ಬಳಿಕ ಧರೆ ನೀನೀಡಿದಾಸರೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಲಿರಿಕಲ್‌ ಹಾಡಿನ ವಿಡಿಯೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಇದನ್ನು ಓದಿ: ತಂಗಾಳಿಯ ಆಲಾಪವೇ ಪಿಸುಮಾತಿನ ಶೃಂಗಾರವೇ, ಇದು ಯಾವ ಸಿನಿಮಾದ ಹಾಡು ಹೇಳಿನೋಡೋಣ, ಇಲ್ಲಿದೆ ಒಲವೇ ಒಲವೇ ಕನ್ನಡ ಸಾಂಗ್‌ ಲಿರಿಕ್ಸ್‌

ಧರೆ ನೀ ನೀಡಿದ ಆಸರೆ ಹಾಡಿನಲ್ಲಿ ಕೆಲವೇ ಕೆಲವು ಚರಣಗಳಿವೆ. ಈ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿದೆ.

ಧರೆ ನೀ ನೀಡಿದ ಆಸರೆ (ನೀನೀಡಿದಾಸರೆ)

ಆ... ಆ...

ತೆರೆ ಈ ನೆನಪಿನ ಸೆರೆ

ಆ... ಆ...

ದೂರದ ಆ ಸಾಗರ

ಕೂಗಿ ಕರೆಯಿತೇ

ಆ.. ಆ...

ತೀರಕ್ಕೆ ಅಲೆಗಳು

ಮುಗಿಲ ಸಾಲು ಹೇಳಿದೆ....

ಮನವು ಹಗುರಾಯ್ತೇಗೆ

ಗಂಗೆ ಧರೆಗಿಳಿದ ಹಾಗೆ

ಕಾದೇ ನಾ ಹೇಗೆ

ನಿನ್ನ ಬೀಳ್ಕೊಡುಗೆಗೆ

ಧರೆ ನೀ ನೀಡಿದ ಆಸರೆ ವಿಡಿಯೋ ಇಲ್ಲಿದೆ

 

ಸಪ್ತಸಾಗರದಾಚೆ ಎಲ್ಲೋ- ಒಲವೇ ಒಲವೇ ಹಾಡಿನ ಕನ್ನಡ ಲಿರಿಕ್ಸ್‌

ತಂಗಾಳಿಯ ಆಲಾಪವೇ

ಪಿಸುಮಾತಿನ ಶೃಂಗಾರವೇ

ಆಕಾಶದಾಚೆ ನಾ ನವಿಲಾಗಿ ಕುಣಿದೆ

ನನ್ನ ಹೆಜ್ಜೆಗೆ ನೀ ತಾಳವಲ್ಲವೇ

ಮನದಾಳದಿ ಗುನುಗೋ ಸಿಹಿಯಾದ ಸ್ವರದ

ನನ್ನ ಹಾಡಿನ ಶೃತಿ ನೀನೇ ಅಲ್ಲವೇ

ಒಲವೇ ಒಲವೇ ಒಲವೇ ಈ ನದಿಗೆ ಕಡಲಗಿರುವೆ.

ಒಲವೇ ಒಲವೇ ಒಲವೇ

ನನ್ನ ಈ ಜೀವನ ಮುಡಿಪಾಗಿಡುವೆ

ಆಆಆಆಆಆಆಆಆ..

ಬೆಟ್ಟ ಈ ನೋಟದಲಿ

ಸಾವಿರ ಮಾತಾಡುವೆ

ಕಂಗಳ ಈ ಬೆಳಕಿನಲಿ

ಚಿಮ್ಮುವ ಖುಷಿಯಾಗುವೆ

ಹಾರಡುವ ಈ ನನ್ನಯ ಸಂಭ್ರಮ ನೀನಾದೆ

ಈ ಭಾವದ ಅಂತರದ ಮಾಧುರ್ಯ ನೀನಾದೆ..

ಸಂಜೆಯ ಈ ರಾಗಕ್ಕೆ ಬಂದಿಹ ಬೆಳದಿಂಗಳೆ

ಮನದಾಳದಿ ಗುನುಗೋ ಸಿಹಿಯಾದ ಸ್ವರದ

ನನ್ನ ಹಾಡಿನ ಶೃತಿ ನೀನೇ ಅಲ್ಲವೇ

ಒಲವೇ ಒಲವೇ ಒಲವೇ ಈ ನಾಡಿಗೆ ಕಡಲಗಿರುವೆ..

ಒಲವೇ ಒಲವೇ ಒಲವೇ ನನ್ನ ಈ ಜೀವನ ಮುಡಿಪಾಗಿಡುವೆ.

ಆಆಆಆಆಆಆಆ