ಹಾಲಿವುಡ್‌ಗೆ ಹೋಗಿ ಬಂದ ಕಾಂತಾರ ನಟಿ ಸಪ್ತಮಿಗೌಡ, ಇಂಗ್ಲೀಷ್ ಸಿನಿಮಾದಲ್ಲಿ ನಟಿಸುತ್ತಿದ್ದೀರಾ ಎಂದು ಕೇಳಿದ ಫ್ಯಾನ್ಸ್
ಸಿನಿಮಾ ಜಂಜಾಟಗಳಿಂದ ಬ್ರೇಕ್ ಪಡೆದು ಕಾಂತಾರ ನಟಿ ಸಪ್ತಮಿ ಗೌಡ ಅಮೆರಿಕ ಹೋಗಿ ಬಂದಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಸಪ್ತಮಿ ತಮ್ಮ ಇನ್‌ಸ್ಟಾಗ್ರಾಮ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಪ್ತಮಿ ಅಭಿನಯದ ಯುವ ಸಿನಿಮಾ ಬಿಡುಗಡೆ ಆಗಿತ್ತು. ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಚಿತ್ರದಲ್ಲಿ ಸಪ್ತಮಿ ನಟಿಸುತ್ತಿದ್ದಾರೆ.
ಸಿನಿಮಾ ಚಿತ್ರೀಕರಣ ಹಾಗೂ ಇನ್ನಿತರ ತಲೆಬಿಸಿಗಳ ನಡುವೆ ನಟ/ನಟಿಯರು ರಿಲಾಕ್ಸ್ ಮೂಡ್‌ಗೆ ಹೋಗಲು ಬಯಸುತ್ತಾರೆ. ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಟ್ರಿಪ್ ಹೋಗಿ ಬರುತ್ತಾರೆ. ಅವಕಾಶ ದೊರೆತರೆ ವಿದೇಶಕ್ಕೆ ಹಾರುವುದೇ ಹೆಚ್ಚು. ಇದೀಗ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಕೂಡಾ ಅಮೆರಿಕ ಹೋಗಿ ಬಂದಿದ್ದಾರೆ.
ಅಮೆರಿಕದ ಸುಂದರ ತಾಣಗಳ ಫೋಟೋ ಹಂಚಿಕೊಂಡ ಕಾಂತಾರ ನಟಿ
ಹಾಲಿವುಡ್ ಎಂದ ಕೂಡಲೇ ಸಪ್ತಮಿ ಗೌಡ ಇಂಗ್ಲೀಷ್ ಸಿನಿಮಾದಲ್ಲೇನಾದರೂ ನಟಿಸುತ್ತಿದ್ದಾರಾ ಎಂಬ ಅನುಮಾನ ಕಾಡುವುದು ಸಹಜ. ಸಪ್ತಮಿ ಹಂಚಿಕೊಂಡಿರುವ ಫೋಟೋಗಳು ಕೂಡಾ ಹಾಗೊಂದು ಅನುಮಾನ ಹುಟ್ಟುಹಾಕಿದೆ. ಆದರೆ ಆಕೆ ಹಾಲಿವುಡ್‌ನಲ್ಲಿ ನಟಿಸುತ್ತಿಲ್ಲ. ತಮ್ಮ ಪ್ರೀತಿಪಾತ್ರರೊಡನೆ ಅಮೆರಿಕ ಟ್ರಿಪ್ ಮಾಡಿಬಂದಿದ್ದಾರೆ ಅಷ್ಟೇ. ಅಮೆರಿಕದ ಲಿಬರ್ಟಿ ಸ್ಟಾಚು, ಗೋಲ್ಡನ್ ಬ್ರಿಡ್ಜ್, ಯೂನಿವರ್ಸಲ್ ಸ್ಟುಡಿಯೋ ಸೇರಿದಂತೆ ಸುಂದರ ತಾಣಗಳಲ್ಲಿ ತೆಗೆಸಿದ ಫೋಟೋಗಳನ್ನು ಸಪ್ತಮಿ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೊಂದು ವಿಡಿಯೋಗಳನ್ನು ಕೂಡಾ ಸಪ್ತಮಿ ಹಂಚಿಕೊಂಡಿದ್ದಾರೆ. ಸಪ್ತಮಿ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಯುವ-ಶ್ರೀದೇವಿ ಡಿವೋರ್ಸ್ ಪ್ರಕರಣದಲ್ಲಿ ಸಪ್ತಮಿ ಹೆಸರು
ಕೆಲವು ದಿನಗಳ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಡಿವೋರ್ಸ್ ಕೇಸ್‌ನಲ್ಲಿ ಸಪ್ತಮಿಗೌಡ ಹೆಸರು ಕೇಳಿಬಂದಿತ್ತು. ಯುವ ಹಾಗೂ ಶ್ರೀದೇವಿ ವಿಚ್ಚೇದನಕ್ಕೆ ಸಪ್ತಮಿ ಕಾರಣ ಎಂಬ ಅರೋಪ ಕೇಳಿಬಂದಿತ್ತು. ಅದರೆ ಸಪ್ತಮಿ ಇದನ್ನು ನಿರಾಕರಿಸಿದ್ದರು. ತಮ್ಮ ವಿರುದ್ಧ ಅರೋಪ ಹೊರಿಸಿದವರ ಮೇಲೆ ಮಾನನಷ್ಟ ಮೊಕದ್ದಮೆ ಕೂಡಾ ಹೂಡಿದ್ದರು. ಈ ಪ್ರಕರಣದ ನಂತರ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ಸಪ್ತಮಿ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇದ್ದಾರೆ. ಅಮೆರಿಕದಿಂದ ವಾಪಸ್ ಬಂದು ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಮೊದಲ ಬಾರಿ ನಟನೆ
ಸಪ್ತಮಿ, ಇಂಜಿನಿಯರಿಂಗ್ ಪದವೀಧರೆ, ರಾಷ್ಟ್ರಮಟ್ಟದ ಈಜುಗಾರ್ತಿ ಕೂಡಾ. 2020ರಲ್ಲಿ ತೆರೆ ಕಂಡ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಸಪ್ತಮಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರದಲ್ಲಿ ಈಕೆ ಗಿರಿಜಾ ಪಾತ್ರದಲ್ಲಿ ನಟಿಸಿದ್ದರು. ಆದರೆ ಸಪ್ತಮಿಗೆ ಹೆಸರು ತಂದುಕೊಟ್ಟದ್ದು ಕಾಂತಾರ ಚಿತ್ರದ ಲೀಲಾ ಪಾತ್ರ. ಈ ಸಿನಿಮಾಗಾಗಿ ಸಪ್ತಮಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಈ ಸಿನಿಮಾ ನಂತರ ಆಕೆಗೆ ಅವಕಾಶಗಳು ಹುಡುಕಿ ಬಂದವು. ಬಾಲಿವುಡ್‌ನ ವಾಕ್ಸಿನ್ ವಾರ್ ಚಿತ್ರದಲ್ಲೂ ನಟಿಸಿ ಬಂದರು. ಯುವ ರಾಜ್‌ಕುಮಾರ್ ಜೊತೆ ಯುವ ಚಿತ್ರದಲ್ಲಿ ನಾಯಕಿಯಾಗಿ ಕೂಡಾ ಮಿಂಚಿದರು. ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾದಲ್ಲಿ ಕೂಡಾ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.