ಕನ್ನಡ ಸುದ್ದಿ  /  Entertainment  /  Sandalwood News Sathish Ninasam Aditi Prabhudeava Starrer Matimee Movie Romantic Song Released Mnk

Matinee Movie: ಮನಾಲಿಯ ಮಂಜಲ್ಲಿ ‘ಮ್ಯಾಟ್ನಿ’ ಜೋಡಿ; ರೊಮ್ಯಾಂಟಿಕ್‌ ಹಾಡಲ್ಲಿ ಒಂದಾದ ಸತೀಶ್‌ ನೀನಾಸಂ, ಅದಿತಿ ಪ್ರಭುದೇವ

ಮ್ಯಾಟ್ನಿ ಚಿತ್ರದಿಂದ ಹೊಸ ಹಾಡೊಂದು ಹೇಳುಗರ ಕಿವಿ ತಲುಪಿದೆ. ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ. ಏಪ್ರಿಲ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

Matinee Movoe: ಮ್ಯಾಟ್ನಿ ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಒಂದಾದ ಅದಿತಿ ಪ್ರಭುದೇವ, ಸತೀಶ್‌ ನೀನಾಸಂ
Matinee Movoe: ಮ್ಯಾಟ್ನಿ ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಒಂದಾದ ಅದಿತಿ ಪ್ರಭುದೇವ, ಸತೀಶ್‌ ನೀನಾಸಂ

Matinee Movie song: ಮ್ಯಾಟ್ನಿ ಸತೀಶ್ ನೀನಾಸಂ, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ಅಭಿನಯದ ಸಿನಿಮಾ. ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ. ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.

ಸದ್ಯ ಬಿಡುಗಡೆಯಾಗಿರೋ ನಿನಗಾಗಿ ಮಿಡಿಯುವುದು ಈ ಹೃದಯ ಅನ್ನೋ ಹಾಡಿನಲ್ಲಿ ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕಂಪ್ಲೀಟ್ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಣ ಮಾಡಿದ್ದು ಹಾಡು ಸಖತ್ ಬ್ಯೂಟಿಫುಲ್ ಹಾಗೂ ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ.

ಇನ್ನು ಈ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಮ್ಯಾಟ್ನಿ ಸಿನಿಮಾತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ. ನಿನಗಾಗಿ ಮಿಡಿಯುವುದು ಹಾಡಿನ ಜೊತೆಗೆ ಮೇಕಿಂಗ್ ಅನ್ನು ಬಿಡುಗಡೆ ಮಾಡಿರೋ ತಂಡ ಮೂರು ದಿನಗಳ ಕಾಲ ಮನಾಲಿ ಚಿತ್ರೀಕರಣ ಹೇಗಿತ್ತು ಅದರ ಜೊತೆ ಚಿತ್ರತಂಡ ಮನಾಲಿಯಲ್ಲಿ ಏನೆಲ್ಲಾ ಸಾಹಸ ಮಾಡಿ ಚಿತ್ರೀಕರಣ ಮಾಡಿದೆ ಅನ್ನೋದನ್ನು ಮೇಕಿಂಗ್ ಮೂಲಕ ತಿಳಿಸಿದ್ದಾರೆ.

ಮ್ಯಾಟ್ನಿ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು, ಪಾರ್ವತಿ ಎಸ್ ಗೌಡ ಚಿತ್ರಕ್ಕೆ ಎಫ್ ಥ್ರೀ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಇನ್ನು ಈ ಹಾಡಿಗೆ ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್ ಮಾಡಿದ್ದು, ಸಂತು ಮಾಸ್ಟರ್ ಕೋರಿಯೋಗ್ರಾಫ್ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಮ್ಯಾಟ್ನಿ ಸಿನಿಮಾದ ಈ ರೊಮ್ಯಾಂಟಿಕ್ ಹಾಡನ್ನು ಹೇಮಂತ್ ಕುಮಾರ್ ಗಂಜಂ ಬರೆದಿದ್ದು, ಸಾದ್ವಿನಿ ಕೊಪ್ಪ ಧ್ವನಿ ನೀಡಿದ್ದಾರೆ.

ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಶಿವರಾಜ್ ಕೆ ಆರ್ ಪೇಟೆ, ನಾಗಭೂಷಣ್‌, ಪೂರ್ಣ ಮೈಸೂರು, ದಿಗಂತ್ ಸೇರಿದಂತೆ ತಬಲ ನಾಣಿ, ಪ್ರಕಾಶ್ ತುಮ್ಮಿನಾಡು, ಗೋಪಿ ಮಿಮಿಕ್ರಿ, ತುಳಸಿ ಶಿವಮಣಿ ಇನ್ನು ಅನೇಕರು ಅಭಿನಯಿಸಿದ್ದಾರೆ. ಈಗಾಗಲೇ ಹಾಡಿನ ಮೂಲಕ ಪ್ರಚಾರ ಕಾರ್ಯಕ್ಕೂ ಚಿತ್ರತಂಡ ಚಾಲನೆ ನೀಡಿದ್ದು, ಏಪ್ರಿಲ್‌ 5ರಂದು ಮ್ಯಾಟ್ನಿ ಸಿನಿಮಾ ತೆರೆಗೆ ಬರ್ತಿದೆ.

IPL_Entry_Point