ಕನ್ನಡ ಸುದ್ದಿ  /  ಮನರಂಜನೆ  /  ಸಸ್ಪೆನ್ಸ್‌ ಥ್ರಿಲ್ಲರ್‌ ಅಡವಿಕಟ್ಟೆ ಟ್ರೇಲರ್‌ ರಿಲೀಸ್‌ ಮಾಡಿದ ಡಿಕೆ ಸುರೇಶ್; ಇದು ನಟ ಅಭಿಜಿತ್‌ ನಟನೆಯ ಸಿನಿಮಾ

ಸಸ್ಪೆನ್ಸ್‌ ಥ್ರಿಲ್ಲರ್‌ ಅಡವಿಕಟ್ಟೆ ಟ್ರೇಲರ್‌ ರಿಲೀಸ್‌ ಮಾಡಿದ ಡಿಕೆ ಸುರೇಶ್; ಇದು ನಟ ಅಭಿಜಿತ್‌ ನಟನೆಯ ಸಿನಿಮಾ

ಹಿರಿಯನಟ ಅಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ "ಅಡವಿಕಟ್ಟೆ" ಚಿತ್ರದ ಟ್ರೇಲರ್ ಅನ್ನು ಕಾಂಗ್ರೆಸ್‌ ಮುಖಂಡ ಡಿಕೆ ಸುರೇಶ್‌ ಬಿಡುಗಡೆ ಮಾಡಿದರು.

ಸಸ್ಪೆನ್ಸ್‌ ಥ್ರಿಲ್ಲರ್‌ ಅಡವಿಕಟ್ಟೆ ಟ್ರೇಲರ್‌ ರಿಲೀಸ್‌ ಮಾಡಿದ ಡಿಕೆ ಸುರೇಶ್; ಇದು ನಟ ಅಭಿಜಿತ್‌ ನಟನೆಯ ಸಿನಿಮಾ
ಸಸ್ಪೆನ್ಸ್‌ ಥ್ರಿಲ್ಲರ್‌ ಅಡವಿಕಟ್ಟೆ ಟ್ರೇಲರ್‌ ರಿಲೀಸ್‌ ಮಾಡಿದ ಡಿಕೆ ಸುರೇಶ್; ಇದು ನಟ ಅಭಿಜಿತ್‌ ನಟನೆಯ ಸಿನಿಮಾ

Adavikatte Trailer: ಸ್ಯಾಂಡಲ್‌ವುಡ್‌ ಕಂಡ ನಟ ಅಭಿಜಿತ್‌, ಇತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದರಂತೆ ಇದೀಗ ಅಡವಿಕಟ್ಟೆ ಅನ್ನೋ ಸಿನಿಮಾದಲ್ಲಿಯೂ ಅಭಿಜಿತ್‌ ನಟಿಸಿದ್ದಾರೆ. ಇನ್ನೇನು ಈ ಸಿನಿಮಾ ಬಿಡುಗಡೆಯ ಸನಿಹಕ್ಕೂ ಬಂದು ನಿಂತಿದ್ದು, ಟ್ರೇಲರ್‌ ಸಹ ಹೊರಬಂದಿದೆ.

ಹಿರಿಯನಟ ಅಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ "ಅಡವಿಕಟ್ಟೆ" ಚಿತ್ರದ ಟ್ರೇಲರ್ ‌ಇತ್ತೀಚೆಗೆ ಬಿಡುಗಡೆಯಾಯಿತು. ಉಮಾ ಎಸ್ ನಿರ್ಮಿಸಿರುವ, ಸಂಜೀವ್ ಗಾವಂಡಿ ನಿರ್ದೇಶನದ ಈ ಚಿತ್ರದ ಟ್ರೇಲರ್‌ಅನ್ನು ಕಾಂಗ್ರೆಸ್ ಮುಖಂಡ ಡಿ.ಕೆ.ಸುರೇಶ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಸಾಥ್‌ ನೀಡಿದರು.

ಟ್ರೆಂಡಿಂಗ್​ ಸುದ್ದಿ

ಶುಭ ಹಾರೈಸಿದ ಡಿಕೆ ಸುರೇಶ್

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಿ.ಕೆ.ಸುರೇಶ್ ಅವರು, ಕನ್ನಡದಲ್ಲಿ ಸಾಕಷ್ಟು ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳು ಬರುತ್ತಿದೆ. ಆ ಸಾಲಿಗೆ ಈ ಚಿತ್ರ ಕೂಡ ಸೇರಲಿದೆ ಎಂದು ನನಗೆ ಟ್ರೇಲರ್ ನೋಡಿದಾಗ ಅನಿಸಿತು. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಚಿತ್ರದಲ್ಲಿ ನನ್ನದು ವಿಶೇಷ ಪಾತ್ರ. ಚಿತ್ರ ನೋಡಿದಾಗ ನಿಮಗೂ ನನ್ನ ಪಾತ್ರ ಇಷ್ಟವಾಗುತ್ತದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಡಿ.ಕೆ.ಸುರೇಶ್ ಅವರಿಗೆ ಧನ್ಯವಾದ ಎಂದರು ಹಿರಿಯ ನಟ ಅಭಿಜಿತ್.

ನಾನು ಕನಕಪುರದ ಹತ್ತಿರದ ಹಳ್ಳಿಯಿಂದ ಬಡ ಕುಟುಂಬದಿಂದ ಬಂದವನು. ಸಿನಿಮಾದಲ್ಲಿ ನಟಿಸುವುದು ನನ್ನ ಆಸೆಯಾಗಿತ್ತು. ಅದು ಈಗ ನನಸಾಗಿದೆ. ನಮ್ಮ ಚಿತ್ರದ ಟ್ರೇಲರ್ ಅನ್ನು ಡಿ.ಕೆ.ಸುರೇಶ್ ಅವರು ಬಿಡುಗಡೆ‌‌ ಮಾಡಿಕೊಟ್ಟಿದ್ದು ನನಗೆ ಬಹಳ ಸಂತೋಷವಾಗಿದೆ.‌ ಅವರಿಗೆ ಅನಂತ ಧನ್ಯವಾದ ಎಂದರು ಪ್ರಮುಖ ಪಾತ್ರಧಾರಿ ನಾಗರಾಜು.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರರ್ ಜಾನರ್‌ನ ಚಿತ್ರ. ಕನ್ನಡದಲ್ಲಿ ಸಾಕಷ್ಟು ಈ ಜಾನರ್ ನ ಚಿತ್ರ ಬಂದಿದೆಯಾದರೂ ಇದು ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ ಇದೊಂದು ಇದು ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಥೆ. ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರ ನಡೆದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂಜೀವ್ ಗಾವಂಡಿ.

ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ಮಾಪಕಿ ಉಮಾ ಧನ್ಯವಾದ ತಿಳಿಸಿದರು. ನಟಿಯರಾದ ಶಾಂತಿ, ಮಂಜುಳ ಹಾಗೂ ವಿತರಕ ಶ್ರೀಧರ್ ಚಿತ್ರದ ಕುರಿತು ಮಾತನಾಡಿದರು.