ಕನ್ನಡ ಸುದ್ದಿ  /  ಮನರಂಜನೆ  /  Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Choo mantar Kannada Movie: ಶರಣ್ , ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಅಭಿನಯದ, ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ದೇಶನದ ಛೂ ಮಂತರ್‌ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ. ಈ ಸಿನಿಮಾದ ಮೂಲಕ ಶರಣ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊರಹೊಮ್ಮಲಿದ್ದಾರೆ.

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌?
Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌?

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ಯಾಂಡಲ್‌ವುಡ್‌ ನಟ ಶರಣ್‌ ನಟನೆಯ ಬಹುನಿರೀಕ್ಷಿತ ಛೂ ಮಂತರ್‌ ಸಿನಿಮಾ ಈ ವಾರ ಬಿಡುಗಡೆಯಾಗಬೇಕಿತ್ತು. ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಪ್ಯಾನ್‌ ಇಂಡಿಯಾ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ದೇಶದಲ್ಲಿ ಈಗ ಚುನಾವಣಾ ಬಿಸಿ ಇರುವ ಕಾರಣ ಈ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಒಂದಿಷ್ಟು ದಿನ ತಡವಾಗಿ ರಿಲೀಸ್‌ ಮಾಡಲು ಯೋಜಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, "ಕರ್ವ" ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ಹೆಸರಾಂತ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಛೂ‌ ಮಂತರ್" ಚಿತ್ರ ಇದೇ ಮೇ 10 ರಂದು ಬಿಡುಗಡೆಯಾಗಬೇಕಿತ್ತು.

ಚಿತ್ರವನ್ನು ವೀಕ್ಷಿಸಿರುವ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ವಿತರಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಹಾರರ್ ಚಿತ್ರವಾಗಿದ್ದು, ಉತ್ತಮವಾಗಿ ಮೂಡಿಬಂದಿದೆ ಎಲ್ಲಾ ಭಾಷೆಗಳ ಜನರು ನೋಡುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ ಎಂದು ಹಲವು ವಿತರಕರು ಹೇಳಿದ್ದಾರೆ.

ಈಗ ದೇಶಾದ್ಯಂತ ಚುನಾವಣೆ ಕೂಡ ನಡೆಯುತ್ತಿದೆ. ಹಾಗಾಗಿ, ಸರಿಯಾದ ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಿ ಎಂದು ವಿತರಕರು ಸಲಹೆ ನೀಡಿದ್ದಾರೆ. ಈ ಕಾರಣಗಳಿಂದ ನಮ್ಮ ಚಿತ್ರವನ್ನು ಮೇ 10 ರಂದು ಬಿಡುಗಡೆ ಮಾಡುತ್ತಿಲ್ಲ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತವೆ ಎಂದು ನಿರ್ಮಾಪಕ ತರುಣ್ ಶಿವಪ್ಪ ಮಾಹಿತಿ ನೀಡಿದ್ದಾರೆ.

ಛೂ ಮಂತರ್‌ ಸಿನಿಮಾದಲ್ಲಿ ಶರಣ್ , ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ "ಛೂ ಮಂತರ್" ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ಸಿನಿಮಾದ ಮೂಲಕ ಶರಣ್‌ ಅವರು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಲಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಛೂ ಮಂತರ್‌ ರಿಲೀಸ್‌ ಆಗಲಿದೆ. ಈ ಸಿನಿಮಾ ಯಶಸ್ಸು ಗಳಿಸಿದರೆ ಶರಣ್‌ ಲಕ್‌ ಬದಲಾಗುವ ನಿರೀಕ್ಷೆಯಿದೆ.

ಶರಣ್‌ ಅಭಿನಯದ ಸಿನಿಮಾಗಳು

ಕನ್ನಡ ನಟ ಶರಣ್‌ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅವತಾರ ಪುರುಷ ಇತ್ತೀಚೆಗೆ ರಿಲೀಸ್‌ ಆಗಿದೆ. ಅಧ್ಯಕ್ಷ ಇನ್‌ ಅಮೆರಿಕಾ, ವಿಕ್ಟರಿ 2, ರಾಂಬೋ 2, ಸತ್ಯ ಹರಿಶ್ಚಂದ್ರ, ರಾಜ್‌ ವಿಷ್ಣು, ನಟರಾಜ್‌ ಸರ್ವವೀಶ್‌, ಜೈ ಮಾರುತಿ 800, ಬುಲೆಟ್‌ ಬಸ್ಯ, ರಾಜರಾಜೇಂದ್ರ, ಅಧ್ಯಕ್ಷ, ಮಾಣಿಕ್ಯ, ಜೈ ಲಿಲಿತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶರಣ್‌ ನಟಿಸಿದ್ದಾರೆ.

ವಿಕ್ಟರಿ, ಬುಲ್‌ಬುಲ್‌, ನೀನಂದ್ರಿ ಇಷ್ಟ ಕಣೋ, ವರದ ನಾಯಕ, ಈ ಭೂಮಿ ಆ ಬಾನು, ರಾಂಬೋ, ಲಕ್ಕಿ, ಪಾರಿಜಾತ, ಅರಕ್ಷಕ, ಭದ್ರ, ಜಾನಿ ಮೇರಾ ನಾಮ್‌, ಕೂಲ್‌, ಮತ್ತೊಂದು ಮದುವೆನಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಟನಾಗಿ ನಟಿಸಿದ್ದಾರೆ. ಇತ್ತೀಚಿಗೆ ಇವರು ಹೀರೋ ಆಗಿ ನಟಿಸಿದ್ದ ಹಲವು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆದಿವೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point