ಕನ್ನಡ ಸುದ್ದಿ  /  ಮನರಂಜನೆ  /  ಕಲುಷಿತವಾಯ್ತು ವಿದ್ಯಾದೇಗುಲ, ಬಾಳಿ ಬದುಕಬೇಕಿದ್ದ ಜೀವ ಮಣ್ಣಾಯ್ತು; ನೇಹಾ ಹತ್ಯೆ ಬಗ್ಗೆ ನಟ ಶಿವಣ್ಣ, ದರ್ಶನ್‌ ಏನಂದ್ರು?

ಕಲುಷಿತವಾಯ್ತು ವಿದ್ಯಾದೇಗುಲ, ಬಾಳಿ ಬದುಕಬೇಕಿದ್ದ ಜೀವ ಮಣ್ಣಾಯ್ತು; ನೇಹಾ ಹತ್ಯೆ ಬಗ್ಗೆ ನಟ ಶಿವಣ್ಣ, ದರ್ಶನ್‌ ಏನಂದ್ರು?

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ವ್ಯಾಪಿ ಸುದ್ದಿಯಾಗುತ್ತಿದೆ. ಈ ನಡುವೆ ಚಂದನವನದ ಸೆಲೆಬ್ರಿಟಿಗಳೂ ಈ ಸಾವಿಗೆ ಮರುಗಿದ್ದಾರೆ. ನಟ ಶಿವಣ್ಣ, ದರ್ಶನ್‌ ಸಹ ಹಂತಕನಿಗೆ ಉಗ್ರ ಶಿಕ್ಷೆಯಾಗಲಿ ಎಂದು ಧ್ವನಿಗೂಡಿಸಿದ್ದಾರೆ.

ಕಲುಷಿತವಾಯ್ತು ವಿದ್ಯಾದೇಗುಲ, ಬಾಳಿ ಬದುಕಬೇಕಿದ್ದ ಜೀವ ಮಣ್ಣಾಯ್ತು; ನೇಹಾ ಹತ್ಯೆ ಬಗ್ಗೆ ನಟ ಶಿವಣ್ಣ, ದರ್ಶನ್‌ ಏನಂದ್ರು?
ಕಲುಷಿತವಾಯ್ತು ವಿದ್ಯಾದೇಗುಲ, ಬಾಳಿ ಬದುಕಬೇಕಿದ್ದ ಜೀವ ಮಣ್ಣಾಯ್ತು; ನೇಹಾ ಹತ್ಯೆ ಬಗ್ಗೆ ನಟ ಶಿವಣ್ಣ, ದರ್ಶನ್‌ ಏನಂದ್ರು?

Neha Hiremath Case: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದ ನೇಹಾ ಹಿರೇಮಠ ಕೊಲೆಗೆ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಪ್ರತಿಭಟನೆಗಳು ಕಾವು ಪಡೆದುಕೊಂಡಿವೆ. ರಾಜ್ಯವ್ಯಾಪಿ ಮಾತ್ರವಲ್ಲದೆ, ರಾಷ್ಟ್ರ ಮಟ್ಟದಲ್ಲೂ ಈ ಸುದ್ದಿ ಸದ್ದು ಮಾಡುತ್ತಿದೆ. ರಾಜಕೀಯ ರೂಪುರೇಷೆ ಪಡೆದು ಬಗೆಬಗೆ ಬಣ್ಣ ಪಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರದ ಮೇಲೆ ವಿಪಕ್ಷ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸುತ್ತಿದೆ. ಈ ನಡುವೆ ಸಿನಿಮಾ ಮಂದಿಯಿಂದಲೂ ಹತ್ಯೆಗೈದ ಆರೋಪಿಗೆ ಉಗ್ರ ಶಿಕ್ಷೆ ವಿಧಿಸುವ ಪಟ್ಟು ಹಿಡಿದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಸ್ಯಾಂಡಲ್‌ವುಡ್‌ನ ಸಾಕಷ್ಟು ಮಂದಿ ನೇಹಾ ಹಿರೇಮಠ ಅವರ ಹತ್ಯೆಯನ್ನು ಖಂಡಿಸಿದ್ದಾರೆ. ಧ್ರುವ ಸರ್ಜಾ, ರಕ್ಷಿತಾ ಪ್ರೇಮ್‌, ಕಾವ್ಯಾ ಶಾಸ್ತ್ರಿ, ಪ್ರಿಯಾ ಸವಡಿ ಈ ಬಗ್ಗೆ ಮಾತನಾಡಿದ್ದಾರೆ. ಈಗ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಹ ಧ್ವನಿ ಯೆತ್ತಿದ್ದಾರೆ. ಆಂಕರ್‌ ಅನುಶ್ರೀ ಸಹ ಮನದ ನೋವನ್ನು ಸೋಷಿಯಲ್‌ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾರು ಏನಂದ್ರು?

ಆ ತಾಯಿಯ ಆಕ್ರಂದನ ನೋಡಲಾಗ್ತಿಲ್ಲ..

ನಟ ಶಿವರಾಜ್‌ಕುಮಾರ್‌ ನೇಹಾ ಹತ್ಯೆ ಬಗ್ಗೆ X ವೇದಿಕೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. “ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ” ಎಂದಿದ್ದಾರೆ.

ಬಾಳಿ ಬದುಕಬೇಕಿದ್ದ ಜೀವ ಮಣ್ಣಾಯ್ತು..

ನಟ ದರ್ಶನ್‌ ಸಹ ಈ ಘಟನೆಯನ್ನು ಖಂಡಿಸಿದ್ದಾರೆ. “ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ” ಎಂದಿದ್ದಾರೆ.

ಕಲುಷಿತವಾಯ್ತು ವಿದ್ಯಾ ದೇಗುಲ

ಆಂಕರ್‌ ಅನುಶ್ರೀ ಕೂಡ ಮರುಕ ವ್ಯಕ್ತಪಡಿಸಿದ್ದಾರೆ. "ಒಳ್ಳೇ ಬುದ್ದಿ ಹೇಳಿಕೊಡುವ ವಿದ್ಯಾ ದೇಗುಲವೇ ಕಲುಷಿತವಾಯ್ತು .. ಸಮಾಜದಲ್ಲಿ ಬಾಳಿ ಬದುಕಬೇಕಾದ ಒಂದು ಹೆಣ್ಣಿನ ಜೀವ ಮಣ್ಣಾಯ್ತು .... ಇದಕ್ಕೆ ಉತ್ತರ ಒಂದೇ .... " ನ್ಯಾಯ " ಆ ಕಣ್ಣಿರಿಗೆ ಉತ್ತರ " ನ್ಯಾಯ " ಎಂದಿದ್ದಾರೆ.

ಕಾರುಣ್ಯ ರಾಮ್‌ ಏನಂದ್ರು?

ಮನಸ್ಸಿನಲ್ಲಿ ಹೆಚ್ಚು ಆತಂಕ ಹೆಣ್ಣು ಮಕ್ಕಳಿಗೆ ಸುರಕ್ಷಿತೆ ಇದಿಯಾ,ನೇಹಾ ಹಿರೇಮಠ್ ರ ಹತ್ಯೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಹಾಗು ಪೋಷಕರಿಗೆ ಆತಂಕವನ್ನುಂಟು ಮಾಡಿದೆ, ಈ ಹೀನ ಕೃತ್ಯವನ್ನು ಮಾಡಿರುವ ಪಾಪಿ ಫೆಯಾಜ್ ಗೆ ಅತ್ಯಂತ ಕ್ರೂರವಾದ ಶಿಕ್ಷೆಯಾಗಬೇಕು,ನೇಹಾ ರವರ ಆತ್ಮಕ್ಕೆ ಶಾಂತಿ ಸಿಗಲಿ,ಓಂ ಶಾಂತಿಃ

IPL_Entry_Point