ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಭೈರತಿ ರಣಗಲ್‌ ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ ಆಗೋದು ಡೌಟ್‌; ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ನಿರಾಶೆಯ ಸುದ್ದಿ

Bhairathi Ranagal: ಭೈರತಿ ರಣಗಲ್‌ ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ ಆಗೋದು ಡೌಟ್‌; ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ನಿರಾಶೆಯ ಸುದ್ದಿ

Bhairathi Ranagal Movie: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗುವುದು ಸಂದೇಹ ಎನ್ನಲಾಗಿದೆ. ಮುಫ್ತಿ ಸಿನಿಮಾದ ಪ್ರಿಕ್ವೇಲ್‌ನ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ. ಈ ಕುರಿತು ವಿಶೇಷ ವರದಿ ಇಲ್ಲಿದೆ.

Bhairathi Ranagal: ಭೈರತಿ ರಣಗಲ್‌ ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ ಆಗೋದು ಡೌಟ್‌
Bhairathi Ranagal: ಭೈರತಿ ರಣಗಲ್‌ ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ ಆಗೋದು ಡೌಟ್‌

ಬೆಂಗಳೂರು: ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾ ನಟನೆಯ ಭೈರತಿ ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆ ದಿನವೇ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಬೇಕಿದ್ದ ಭೈರತಿ ರಣಗಲ್‌ ಚಿತ್ರ ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಡಿಜಿಟಲ್‌ ಮಾಧ್ಯಮ ಒಟಿಟಿಪ್ಲೇ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಶಿವರಾಜ್‌ ಕುಮಾರ್‌ ಅವರು ಇತ್ತೀಚಿನ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಪರ ಪ್ರಚಾರ ಕಾರ್ಯದಲ್ಲಿ ಬಿಝಿ ಇದ್ದ ಕಾರಣ ಶೂಟಿಂಗ್‌ ಕೆಲಸವು ಈ ಹಿಂದೆ ಅಂದುಕೊಂಡಂತೆ ನಡೆದಿಲ್ಲ. ಹೀಗಾಗಿ, ಭೈರತಿ ರಣಗಲ್‌ ಸಿನಿಮಾ ರಿಲೀಸ್‌ ಮುಂದಕ್ಕೆ ಹೋಗಬಹುದು. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ವರ್ಷಕ್ಕೆ 2-3 ಸಿನಿಮಾ ಮಾಡುವ ಕೆಲವೇ ಕೆಲವು ಕನ್ನಡ ನಟರಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಒಬ್ಬರು. ಈ ವರ್ಷ ಸ್ವಾತಂತ್ರ್ಯ ದಿನದಂದು ಭೈರತಿ ರಣಗಲ್‌ ರಿಲೀಸ್‌ ಮಾಡಲು ಉದ್ದೇಶಿಸಲಾಗಿತ್ತು. ಆಗಸ್ಟ್‌ 15ರಂದು ಭೈರತಿ ರಣಗಲ್‌ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಜತೆ ನೇರ ಪೈಪೋಟಿ ನಡೆಸುವ ಸೂಚನೆ ಇತ್ತು. ಆದರೆ, ಕಳೆದ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಹೊಸ ವದಂತಿ ಕೇಳಿಬರುತ್ತಿದೆ. ನರ್ತನ್‌ ನಿರ್ದೇಶನದ ಈ ಭೈರತಿ ರಣಗಲ್‌ ಸಿನಿಮಾ ಅಂದುಕೊಂಡಂತೆ ಆಗಸ್ಟ್‌ 15ರಂದು ರಿಲೀಸ್‌ ಆಗುವುದು ಡೌಟ್‌ ಎಂದು ಹೇಳಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಭೈರತಿ ರಣಗಲ್‌ ಬಿಡುಗಡೆ ದಿನಾಂಕ

ಮೂಲಗಳ ಪ್ರಕಾರ ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ವಿಳಂಬವಾಗಲಿದೆ. ಶಿವರಾಜ್‌ ಕುಮಾರ್‌ ಅವರು ಶೂಟಿಂಗ್‌ ಶೆಡ್ಯೂಲ್‌ನಲ್ಲಿ ಏರುಪೇರಾಗಿರುವುದು ಇದಕ್ಕೆ ಪ್ರಮುಖ ಕಾರಣ. ಶಿವಣ್ಣ ತನ್ನ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಪತ್ನಿ ಪರ ಚುನಾವಣಾ ಪ್ರಚಾರಕ್ಕೆ ಸಾಕಷ್ಟು ದಿನ ತೆರಳಿದ್ದರು. ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಮೂಲಗಳ ಪ್ರಕಾರ ಸಿನಿಮಾದ ಪ್ರಮುಖ ಶೂಟಿಂಗ್‌ಗೆ ನಿರ್ದೇಶಕ ನರ್ತನ್‌ಗೆ ಇನ್ನೂ ಕನಿಷ್ಠ ಒಂದು ತಿಂಗಳು ಬೇಕಿದೆ. ಜತೆಗೆ, ಸಿನಿಮಾಕ್ಕೆ ಸಂಬಂಧಪಟ್ಟ ಇನ್ನಷ್ಟು ಕೆಲಸಗಳೂ ಬಾಕಿ ಉಳಿದಿವೆ.

ಭೈರತಿ ರಣಗಲ್‌ ಬಿಡುಗಡೆ ಹೊಸ ದಿನಾಂಕ ಯಾವಾಗ?

ಆಗಸ್ಟ್‌ 15ಕ್ಕೆ ಅಂದುಕೊಂಡಂತೆ ಭೈರತಿ ರಣಗಲ್‌ ಬಿಡುಗಡೆಯಾಗದೆ ಇದ್ದರೆ ಇನ್ಯಾವಾಗ ರಿಲೀಸ್‌ ಆಗಲಿದೆ ಎಂಬ ಕುತೂಹಲ ಶಿವಣ್ಣನ ಅಭಿಮಾನಿಗಳಲ್ಲಿ ಇರಬಹುದು. ಚಿತ್ರತಂಡವು ಸೆಪ್ಟೆಂಬರ್‌ 27ರಂದು ಭೈರತಿ ರಣಗಲ್‌ ರಿಲೀಸ್‌ ಮಾಡಿದ್ರೆ ಹೇಗೆ ಎಂದು ಆಲೋಚಿಸುತ್ತಿದೆ ಎನ್ನಲಾಗಿದೆ. ಆದರೆ, ಜೂನಿಯರ್‌ ಎನ್‌ಟಿಆರ್‌ ನಟನೆಯ ದೇವರ ಸಿನಿಮಾವೂ ಸೆಪ್ಟೆಂಬರ್‌ 21ರಂದು ರಿಲೀಸ್‌ ಆಗಲಿದೆ. ಇದರ ಬದಲು ಅಕ್ಟೋಬರ್‌ 11ಗೆ ರಿಲೀಸ್‌ ಮಾಡೋಣ ಎಂದರೆ ಅಂದು ಕನ್ನಡದ ಮಾರ್ಟಿನ್‌ ಸಿನಿಮಾ ರಿಲೀಸ್‌ ಆಗುವ ಸೂಚನೆ ಇದೆ. ಹೀಗಾಗಿ, ಯಾವ ದಿನ ಬಿಡುಗಡೆ ಮಾಡೋದೆಂದು ಚಿತ್ರತಂಡ ಲೆಕ್ಕಾಚಾರ ಮಾಡುತ್ತಿದೆ. ಇದೇ ಸಮಯದಲ್ಲಿ ಶಿವರಾಜ್‌ ಕುಮಾರ್‌ ಅವರು ರೋಹಿತ್‌ ಪದಕಿ ನಿರ್ದೇಶಣದ ಉತ್ತರಾಕಾಂಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣನ ಜತೆ ಡಾಲಿ ಧನಂಜಯ್‌ ಕೂಡ ನಟಿಸುತ್ತಿದ್ದಾರೆ.