OTT News: ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂತು ಶಿವಣ್ಣ- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Ott News: ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂತು ಶಿವಣ್ಣ- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ

OTT News: ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂತು ಶಿವಣ್ಣ- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ

ಶಿವರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಬಹುದಿನಗಳಿಂದ ಕಾದಿದ್ದ ಕರಟಕ ದಮನಕ ಸಿನಿಮಾ ಸಹ ಇದೀಗ ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿದೆ. ಮಾರ್ಚ್‌ನಲ್ಲಿ ತೆರೆಕಂಡಿದ್ದ ಈ ಸಿನಿಮಾ ಸುದೀರ್ಘ ನಾಲ್ಕು ತಿಂಗಳ ಬಳಿಕ ಒಟಿಟಿಗೆ ಎಂಟ್ರಿಕೊಟ್ಟಿದೆ.

OTT News: ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂತು ಶಿವಣ್ಣ- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ
OTT News: ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂತು ಶಿವಣ್ಣ- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ

Karataka Damanaka OTT Release: ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮಾರ್ಚ್‌ ತಿಂಗಳಲ್ಲಿ ತೆರೆಗೆ ಬಂದಿತ್ತು ಶಿವರಾಜ್‌ಕುಮಾರ್‌- ಪ್ರಭುದೇವ ಕಾಂಬಿನೇಷನ್‌ನ ಕರಟಕ ದಮನಕ ಸಿನಿಮಾ. ಯೋಗರಾಜ್‌ ಭಟ್ಟರ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ, ಘೋಷಣೆ ಆದಾಗಿನಿಂದಲೂ ಕುತೂಹಲ ಮೂಡಿಸಿತ್ತು. ಆದರೆ, ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೇಲೆ ಹೇಳಿಕೊಳ್ಳುವಂಥ ಯಶಸ್ಸು ಗಿಟ್ಟಿಸಿಕೊಳ್ಳಲಿಲ್ಲ. ಅದಾದ ಮೇಲೆ ಇದೇ ಸಿನಿಮಾ ಒಟಿಟಿಗೆ ಅದ್ಯಾವಾಗ ಆಗಮಿಸಲಿದೆ ಎಂದೇ ಒಟಿಟಿ ವೀಕ್ಷಕ ಕಾದಿದ್ದೇ ಬಂತು ವಿನಃ ಬರಲೇ ಇಲ್ಲ. ಇದೀಗ ನಾಲ್ಕು ತಿಂಗಳ ಬಳಿಕ ಒಟಿಟಿ ಅಂಗಳ ಪ್ರವೇಶಿಸಿದೆ.

ಮಾರ್ಚ್‌ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಕರಟಕ ದಮನಕ ಸಿನಿಮಾವನ್ನು ರಾಕ್‌ಲೈನ್‌ ವೆಂಕಟೇಶ್‌ ತಮ್ಮ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದರು. ಶಿವಣ್ಣ ಮತ್ತು ಪ್ರಭುದೇವ್‌ ಕಾಂಬಿನೇಷನ್‌ನ ಮೊದಲ ಸಿನಿಮಾ ಕಾರಣಕ್ಕೂ ಕರಟಕ ದಮನಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಯಶ ಕಾಣಲಿಲ್ಲ. ಈ ನಡುವೆ ಸಾಕಷ್ಟು ಜನ ಈ ಚಿತ್ರವನ್ನು ಒಟಿಟಿಗೆ ಬಂದ ಮೇಲೆ ನೋಡೋಣ ಎಂದೇ ಕಾಯುತ್ತಿದ್ದರು. ಅದರಂತೆ ಸುದೀರ್ಘ ನಾಲ್ಕು ತಿಂಗಳ ಬಳಿಕ ಸ್ಟ್ರೀಮಿಂಗ್‌ ಆರಂಭಿಸಿದೆ.

ಶಿವಣ್ಣನ ಬರ್ತ್‌ಡೇ ದಿನವೇ ಪ್ರಸಾರ

ಜುಲೈ 12 ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರ ಬರ್ತ್‌ಡೇ. ಹುಟ್ಟುಹಬ್ಬದ ನಿಮಿತ್ತ ಹಲವು ಸಿನಿಮಾಗಳು ಘೋಷಣೆ ಆದರೆ, ಇನ್ನು ಕೆಲವು ಸಿನಿಮಾಗಳಿಂದ ಟೀಸರ್, ಫಸ್ಟ್‌ಲುಕ್‌ಗಳು ಬಿಡುಗಡೆಯಾಗಿದ್ದವು. ಉತ್ತರಕಾಂಡ ಸಿನಿಮಾದ ಮಾಲೀಕನ ಫಸ್ಟ್‌ ಲುಕ್‌ ಬಿಡುಗಡೆಯಾದರೆ, ಭೈರತಿ ರಣಗಲ್‌ ಚಿತ್ರದ ಮೊದಲ ಟೀಸರ್‌ ಝಲಕ್‌ ಹೊರಬಿದ್ದಿತ್ತು. ಇದರ ಜತೆಗೆ ಇದರ ಜತೆಗೆ ಅದೇ ದಿನವೇ ಕರಟಕ ದಮನಕ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ.

ಊರು, ನೀರು, ತರಿನ ಕಥೆ

ಬಿರು ಬೇಸಿಗೆಯ ಕಾಲಕ್ಕೆ ನೀರಿನ ವಿಚಾರವನ್ನೇ ಮುಖ್ಯವಾಗಿಸಿಕೊಂಡು ಎರಡು ಕುತಂತ್ರಿ ನರಿಗಳ ಕುರಿತ ಸಿನಿಮಾ ಮಾಡಿದ್ದರು ನಿರ್ದೇಶಕ ಯೋಗರಾಜ್‌ ಭಟ್.‌ ನಂದಿಕೋಲೂರಿನಲ್ಲಿ ನೀರಿನ ಬವಣೆ ಎದುರಾಗುತ್ತಿದ್ದಂತೆ, ಹಳ್ಳಿ ಜನ ಊರು ತೊರೆದು ಗುಳೆ ಹೊರಡುತ್ತಾರೆ. ಇದೇ ಸಮಯದಲ್ಲಿ ವೀರೂ ಮತ್ತು ಬಾಲು ಜೋಡಿ ಈ ಊರಿಗೆ ಆಗಮಿಸುತ್ತದೆ. ನೀರಿಲ್ಲದ ಊರಲ್ಲಿ ಹೇಗೆ ನೀರು ತರಿಸುತ್ತಾರೆ, ನಿಂತಿದ್ದ ಜಾತ್ರೆಯನ್ನು ಹೇಗೆ ಮತ್ತೆ ಆರಂಭಿಸುತ್ತಾರೆ ಎಂಬುದೇ ಕಥೆಯ ತಿರುಳು. ಊರು, ನೀರು, ತೇರು ಈ ಮೂರರ ಮೇಲೆಯೇ ಇಡೀ ಚಿತ್ರ ಸಾಗುತ್ತದೆ.

ಯಾವ ಒಟಿಟಿಯಲ್ಲಿ ಪ್ರಸಾರ

ಸದ್ಯ ಕರಟಕ ದಮನಕ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ನಾಲ್ಕು ತಿಂಗಳ ಬಳಿಕ ಒಟಿಟಿ ಪ್ರವೇಶಿಸಿದೆ. ಈ ಮೊದಲು ಒಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಿಗೋ, 50 ದಿನಕ್ಕೋ ಒಟಿಟಿಗೆ ಎಂಟ್ರಿಯಾಗುತ್ತವೆ. ಆದರೆ, ಕರಟಕ ದಮನಕ ಸಿನಿಮಾ ಒಟಿಟಿಯಲ್ಲಿ ತೆರೆಕಾಣಲು ಸುದೀರ್ಘ ನಾಲ್ಕು ತಿಂಗಳೇ ಬೇಕಾಯ್ತು.