ಕನ್ನಡ ಸುದ್ದಿ  /  Entertainment  /  Sandalwood News Sidlingu Movie Sequel Actress Ramya Not In Sidlingu 2 Yogi And Sonugowda Movie Pcp

ಸಿದ್ಲಿಂಗು 2ನಲ್ಲಿ ಮೋಹಕತಾರೆ ರಮ್ಯಾ ಬದಲು ಸೋನುಗೌಡ; ರಮ್ಯಾ ಇಲ್ಲದೆ ಇದ್ರೂ ಆಂಡಾಳಮ್ಮ ಇರ್ತಾರೆ ಅಂದ್ರು ಲೂಸ್‌ ಮಾದ ಯೋಗಿ

Sidlingu 2 Movie: ಹಲವು ವರ್ಷಗಳ ಬಳಿಕ ಸೂಪರ್‌ಹಿಟ್‌ ಸಿದ್ಲಿಂಗು ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ಬದಲು ಸೋನು ಗೌಡ ನಟಿಸಲಿದ್ದಾರೆ. ಲೂಸ್‌ ಮಾದ ಯೋಗಿ ನಟನೆಯ ಸಿದ್ಲಿಂಗು ಸೀಕ್ವೆಲ್‌ ಕುರಿತು ನಿರ್ದೇಶಕ ವಿಜಯ್‌ ಪ್ರಸಾದ್‌ ಸಾಕಷ್ಟು ಅಪ್‌ಡೇಟ್‌ ನೀಡಿದ್ದಾರೆ.

ಸಿದ್ಲಿಂಗು 2ನಲ್ಲಿ ಮೋಹಕತಾರೆ ರಮ್ಯಾ ಬದಲು ಸೋನುಗೌಡ
ಸಿದ್ಲಿಂಗು 2ನಲ್ಲಿ ಮೋಹಕತಾರೆ ರಮ್ಯಾ ಬದಲು ಸೋನುಗೌಡ

ಸ್ಯಾಂಡಲ್‌ವುಡ್‌ನಲ್ಲಿ ವಿಜಯ್‌ ಪ್ರಸಾದ್‌ ನಿರ್ದೇಶನದ ಸಿದ್ಲಿಂಗು 2 ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಕುರಿತು ಇದೀಗ ಚಿತ್ರತಂಡ ಒಂದಿಷ್ಟು ಮಾಹಿತಿ ನೀಡಿದೆ. ವಿಶೇಷವಾಗಿ ತೋತಾಪುರಿ, ಪೆಟ್ರೋಮ್ಯಾಕ್ಸ್‌ನಲ್ಲಿರುವಂತೆ ಸಿದ್ಲಿಂಗು 2ನಲ್ಲಿ ಡಬಲ್‌ ಮೀನಿಂಗ್‌ ಇರೋದಿಲ್ಲ ಎಂದು ಚಿತ್ರತಂಡ ಮಾಹಿತಿ ನೀಡಿದೆ. ನಾಯಕ ಲೂಸ್‌ಮಾದ, ನಾಯಕಿ ಸೋನುಗೌಡ, ನಿರ್ದೇಶಕ ವಿಜಯ್‌ ಪ್ರಸಾದ್‌ ಈ ಸಿನಿಮಾದ ಕುರಿತು ಏನಂದ್ರು ಎಂಬ ವಿವರ ಪಡೆಯೋಣ ಬನ್ನಿ.

ರಮ್ಯ ಸ್ಥಾನದಲ್ಲಿ ಸೋನುಗೌಡ

"ಸಿದ್ಲಿಂಗು ಸಿನಿಮಾವು ನನ್ನ ಕರಿಯರ್‌ಗೆ ಮಹತ್ವದ ತಿರುವು ಕೊಟ್ಟ ಸಿನಿಮಾವಾಗಿದೆ. ಇದೀಗ ಈ ಸಿನಿಮಾದ ಸೀಕ್ವೆಲ್‌ ಬರ್ತಾ ಇರೋದು ಖುಷಿಯ ವಿಚಾರವಾಗಿದೆ. ಹದಿನೈದು ವರ್ಷದ ಗೆಳತಿ ಸೋನು ಗೌಡ ಜತೆ ಇಲ್ಲಿಯವರೆಗೆ ಸಿನಿಮಾ ಮಾಡುವಂತಹ ಅವಕಾಶಗಳು ದೊರಕಲೇ ಇಲ್ಲ. ಇದೀಗ ಇವರ ಜತೆ ಒಟ್ಟಾಗಿ ಕೆಲಸ ಮಾಡುತ್ತಿರುವುದು ಖುಷಿ ತರುವಂತಹ ವಿಚಾರ. ರಮ್ಯಾ ಅವರು ಇರೋದಿಲ್ಲ. ಆಂಡಾಳಮ್ಮನನ್ನು ಬಿಡೋದಿಲ್ಲ" ಎಂದು ನಾಯಕ ನಟ ಲೂಸ್‌ಮಾದ ಯೋಗಿ ಹೇಳಿದ್ದಾರೆ.

ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಪಾತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಡೈರೆಕ್ಟರ್, ಸಿದ್ಲಿಂಗು-2ಗೆ ಆಫರ್ ಮಾಡಿದ್ದು ನಿಜಕ್ಕೂ ಸರ್ಪ್ರೈಸ್‌ ಆಗಿತ್ತು. ಕಲಾವಿದೆಯಾಗಿ ನಾನು ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತೇನೆ. ನನಗೆ ಈ ಅವಕಾಶ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದು ನಾಯಕಿ ಸೋನುಗೌಡ ಹೇಳಿದ್ದಾರೆ.

ಸಿದ್ಲಿಂಗು 2ಗೆ ಮುಹೂರ್ತ

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಚಿತ್ರಗಳ ಬಳಿಕ ಚೇಷ್ಠೆಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ವಿಜಯ್ ಪ್ರಸಾದ್ ಫುಲ್‌ಸ್ಟಾಪ್‌ ಇಟ್ಟಿದ್ದಾರೆ. ಇದೀಗ ಸಿದ್ಲಿಂಗು ಸೀಕ್ವೆಲ್ ಸಿನಿಮಾನ ಕೈಗೆತ್ತಿಕೊಂಡಿದ್ದಾರೆ. ಲೂಸ್ಮಾದ ಯೋಗಿ ಜೊತೆಗೇನೇ ಸಿನಿಮಾ ಶುರು ಮಾಡ್ತಿರೋ ಪ್ರಸಾದ್, ಅಧಿಕೃತವಾಗಿ ನಿರ್ಮಾಪಕರ ಮನೆದೇವರ ಆಲಯದಲ್ಲಿ ಮುಹೂರ್ತ ಕೂಡ ನೆರವೇರಿಸಿದ್ದಾರೆ.

ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಅವ್ರು ತಮ್ಮ ನಿಹಾರಿಕಾ ಫಿಲಂಸ್ ಬ್ಯಾನರ್‌ನಡಿ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಸಿದ್ಲಿಂಗು ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ವಿಜಯ್ ಪ್ರಸಾದ್ ಅವರೇ ಸಿದ್ಲಿಂಗು ಸೀಕ್ವೆಲ್‌ಗೂ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಬ್ಬಿಗೆರೆ ಬಳಿ ಇರೋ ಶೆಟ್ಟಿಹಳ್ಳಿ ವಾರ್ಡ್ನ ನಿವಾಸಿಯಾದ ಶ್ರೀಹರಿ ರೆಡ್ಡಿ ಅವ್ರ ಮನೆದೇವ್ರ ಆಲಯದಲ್ಲಿ ಸಿನಿಮಾ ಮುಹೂರ್ತ ಕಂಡಿದೆ. ನಂತ್ರ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಮಾಧ್ಯಮಗಳಿಗೆ ಒಂದಷ್ಟು ಮಾಹಿತಿ ನೀಡಿದೆ.

ಉಳಿದಂತೆ ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದೆ. ಯೋಗಿ, ಸೋನುಗೌಡ ಮಾತ್ರವಲ್ಲದೆ ಪದ್ಮಜಾ ರಾಜ್, ಆಂಟೊನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

IPL_Entry_Point