ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ದ್ವಾಪರ ಹಾಡಿನ ರೋಮಾಂಚನ; ಸರಿಗಮಪ ಪ್ರತಿಭೆ ಜಸ್ಕರಣ್ ಸಿಂಗ್‌ ಕಂಠಸಿರಿಗೆ ಚಪ್ಪಾಳೆಯ ಸುರಿಮಳೆ
ಕನ್ನಡ ಸುದ್ದಿ  /  ಮನರಂಜನೆ  /  ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ದ್ವಾಪರ ಹಾಡಿನ ರೋಮಾಂಚನ; ಸರಿಗಮಪ ಪ್ರತಿಭೆ ಜಸ್ಕರಣ್ ಸಿಂಗ್‌ ಕಂಠಸಿರಿಗೆ ಚಪ್ಪಾಳೆಯ ಸುರಿಮಳೆ

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ದ್ವಾಪರ ಹಾಡಿನ ರೋಮಾಂಚನ; ಸರಿಗಮಪ ಪ್ರತಿಭೆ ಜಸ್ಕರಣ್ ಸಿಂಗ್‌ ಕಂಠಸಿರಿಗೆ ಚಪ್ಪಾಳೆಯ ಸುರಿಮಳೆ

Jaskaran Singh Dwapara Song: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಕೃಷ್ಣಂ ಪ್ರಣಯ ಸಖಿ ಗಾಯಕ ಜಸ್ಕರಣ್‌ ಸಿಂಗ್‌ ದ್ವಾಪರ ದಾಟಲು ಹಾಡು ಹಾಡಿದಾಗ ಶಿವರಾಜ್‌ ಕುಮಾರ್‌, ಅನುಶ್ರೀ, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಎಲ್ಲರೂ ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ.

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ದ್ವಾಪರ ದಾಟಲು ಹಾಡಿನ ರೋಮಾಂಚನ ಮೂಡಿಸಿದ ಗಾಯಕ ಜಸ್ಕರಣ್‌ ಸಿಂಗ್‌
ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ದ್ವಾಪರ ದಾಟಲು ಹಾಡಿನ ರೋಮಾಂಚನ ಮೂಡಿಸಿದ ಗಾಯಕ ಜಸ್ಕರಣ್‌ ಸಿಂಗ್‌

Dwapara Datalu Song: ದೇಶ-ವಿದೇಶಗಳಲ್ಲಿ ಈಗ ಕನ್ನಡಿಗರು ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡಿನ ಗುಂಗಿನಲ್ಲಿದ್ದಾರೆ. ಆದರೆ, ಈ ಹಾಡಿಗೆ ಧ್ವನಿಯಾಗಿರುವುದು ಪಂಜಾಬ್‌ ಗಾಯಕ. ಅಂದರೆ, ಕರ್ನಾಟಕದಲ್ಲಿ ಸರಿಗಮಪ ರಿಯಾಲಿಟಿ ಶೋನಲ್ಲಿ ಕನ್ನಡದ ಹಾಡುಗಳ ಮೂಲಕ ಎಲ್ಲರ ಮನಗೆದ್ದಿದ್ದ ಜಸ್ಕರಣ್‌ ಸಿಂಗ್‌ ಈ ಕನ್ನಡ ಹಾಡಿಗೆ ಧ್ವನಿಯಾಗಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಜಸ್ಕರಣ್‌ ಸಿಂಗ್‌ ಧ್ವನಿಯಲ್ಲಿ ಮತ್ತೊಮ್ಮೆ ದ್ವಾಪರ ದಾಟಲು ಹಾಡನ್ನು ಕೇಳುವ ಅವಕಾಶ ದೊರಕಿದೆ.

ವೇದಿಕೆಯ ಹಿಂದೆ ನವಿಲಿನಿಂತಹ ಚಿತ್ತಾರ ಮೂಡುತ್ತ ಇರುವ ಸಂದರ್ಭದಲ್ಲಿ ಜಸ್ಕರಣ್‌ ಸಿಂಗ್‌ ಮಧುರ ಕಂಠದಲ್ಲಿ "ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ" ಎಂದು ಹಾಡಿದಾಗ ಝೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ವೇದಿಕೆಯಲ್ಲಿದ್ದ ಜಡ್ಜ್‌ಗಳು, ವೀಕ್ಷಕರು, ಸ್ಪರ್ಧಿಗಳು ರೋಮಾಂಚನಗೊಂಡಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಕೂಡ ಈ ಹಾಡನ್ನು ತನ್ಮಯದಿಂದ ಆಲಿಸಿದ್ದರು. ಈ ಹಾಡಿಗೆ ಸಂಗೀತ ನೀಡಿರುವ ಅರ್ಜುನ್‌ ಜನ್ಯರ ಮುಖದಲ್ಲಿ ಖುಷಿ ನೂರು ಪಟ್ಟು ಹೆಚ್ಚಾಗಿತ್ತು.

ಸಖಿ ಸಖಿ ನನ್ನ ರೂಪಸಿ ಸಖಿ ಸಖಿ ನಿನ್ನ ಮೋಹಿಸಿ ನೀನೇ ನನ್ನ ಪ್ರೇಯಸಿ ಎಂದು ಜಸ್ಕರಣ್‌ ಸಿಂಗ್‌ ಹಾಡುತ್ತಿದ್ದರೆ ಆಂಕರ್‌ ಅನುಶ್ರೀ ಮತ್ತು ಇತರರು ಚಪ್ಪಾಳೆ ಸುರಿಮಳೆಗೈಯುತ್ತ ಹಾಡಿನ ಧ್ವನಿಗೆ ಬೆರಗಾದರು. "ಜೇನ ದನಿಯೋಳೆ ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ..." ಎಂದಾಗ ಅರ್ಜುನ್‌ ಜನ್ಯ ಅವರ ಮುಖ ಅನುಶ್ರೀಯತ್ತ ನೆಟ್ಟಿದೆ. ಅನುಶ್ರೀಯವರು ತಾನೇ ಹಂಸ ನಡೆಯವಳು ಎನ್ನುವಂತೆ ಮಜವಾದ ಪೋಸ್‌ ನೀಡಿದ್ದಾರೆ.

"ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ ನಾನು ಹುಡುಕಿದ್ದು ನನ್ನ ನಿಲ್ದಾಣ ನೀನೆ ಇನ್ನೇನಿದೆ" ಎಂದು ಜಸ್ಕರಣ್‌ ಸಿಂಗ್‌ ಹಾಡಿದಾಗ ಶಿವಣ್ಣ ಎದ್ದು ಚಪ್ಪಾಳೆ ಹೊಡೆದಿದ್ದಾರೆ. ಉಳಿದವರೆಲ್ಲರೂ ವೇದಿಕೆಯತ್ತ ನಡೆದು ಆ ಹಾಡಿಗೆ ಹೆಜ್ಜೆ ಹಾಕಲು ಪ್ರಯತ್ನಿಸಿದ್ದಾರೆ. "ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ" ಎಂದಾಗ ಚಿನ್ನಾರಿ ಮುತ್ತ ರಾಘವೇಂದ್ರ ರಾಜ್‌ ಕುಮಾರ್‌ ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ.

ಇದಾದ ಬಳಿಕ ಜಸ್ಕರಣ್‌ ಸಿಂಗ್‌ ಅವರು ಅರ್ಜುನ್‌ ಜನ್ಯ ಮತ್ತು ಶಿವರಾಜ್‌ ಕುಮಾರ್‌ ಅವರನ್ನು ವೇದಿಕೆಗೆ ಕರೆದಿದ್ದಾರೆ. ಈ ಸಮಯದಲ್ಲಿ ಶಿವಣ್ಣನ ಕಾಲಿಗೆ ನಮಸ್ಕರಿಸಿ ವಿನಮ್ರತೆ ಪ್ರದರ್ಶಿಸಿದ್ದು ಎಲ್ಲರ ಹೃದಯ ತುಂಬುವಂತೆ ಮಾಡಿದೆ.

ಸರಿಗಮಪ ಪ್ರತಿಭೆ ಜಸ್ಕರಣ್‌ ಸಿಂಗ್‌

ಇದಾದ ಬಳಿಕ ಆಂಕರ್‌ ಅನುಶ್ರೀ ಅವರು ಜಸ್ಕರಣ್‌ ಸಿಂಗ್‌ "ನಮ್ಮ ಸರಿಗಮಪದ ಪ್ರತಿಭೆ" ಎಂದು ಹೆಮ್ಮೆಯಿಂದ ಎಲ್ಲರಿಗೂ ಪರಿಚಯಿಸಿದ್ದಾರೆ. ಝೀ ಕನ್ನಡ ಬಿಡುಗಡೆ ಮಾಡಿರುವ ಈ ಪ್ರಮೋ ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಅದ್ಭುತ ಹಾಡು, ಅದ್ಭುತ ಕಂಠಸಿರಿ ಎಂದು ಮುಕ್ತಮನಸ್ಸಿನಿಂದ ಹೊಗಳಿದ್ದಾರೆ.

Whats_app_banner