ಸೋನಾಲ್‌ ತರುಣ್‌ ಕಲ್ಯಾಣ: ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿ, ತರುಣ್‌ ಫೋಟೋಗೆ ಕೇಕ್‌ ತಿನ್ನಿಸೋದ್ರಲ್ಲಿ ಸೋನಾಲ್‌ಗೆ ಖುಷಿ-sandalwood news sonal monteiro tharun sudhir marriage tarun busy giving invitation sonal cake party ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸೋನಾಲ್‌ ತರುಣ್‌ ಕಲ್ಯಾಣ: ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿ, ತರುಣ್‌ ಫೋಟೋಗೆ ಕೇಕ್‌ ತಿನ್ನಿಸೋದ್ರಲ್ಲಿ ಸೋನಾಲ್‌ಗೆ ಖುಷಿ

ಸೋನಾಲ್‌ ತರುಣ್‌ ಕಲ್ಯಾಣ: ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿ, ತರುಣ್‌ ಫೋಟೋಗೆ ಕೇಕ್‌ ತಿನ್ನಿಸೋದ್ರಲ್ಲಿ ಸೋನಾಲ್‌ಗೆ ಖುಷಿ

Sonal Monteiro Tharun Sudhir Marriage: ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್‌ ಡೈರೆಕ್ಟರ್‌-ಆಕ್ಟ್ರೇಸ್‌ ಜೋಡಿ ತರುಣ್‌ ಸುಧೀರ್‌ ಸೋನಾಲ್‌ ಮೊಂಥೆರೋ ಮದುವೆಗೆ ಇನ್ನು ಹೆಚ್ಚು ದಿನವಿಲ್ಲ. ಸೆಲೆಬ್ರಿಟಿಗಳಿಗೆ, ಆತ್ಮೀಯರಿಗೆ ಮದುವೆ ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿಯಾಗಿದ್ದಾರೆ. ತರುಣ್‌ ಫೋಟೋಗೆ ಸೋನಾಲ್‌ ಕೇಕ್‌ ತಿನ್ನಿಸುವ ವಿಡಿಯೋ ನೋಡಿದ್ದೀರಾ?

ಸೋನಾಲ್‌ ತರುಣ್‌ ಕಲ್ಯಾಣ: ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿ, ತರುಣ್‌ ಫೋಟೋಗೆ ಕೇಕ್‌ ತಿನ್ನಿಸೋದ್ರಲ್ಲಿ ಸೋನಾಲ್‌ಗೆ ಖುಷಿ
ಸೋನಾಲ್‌ ತರುಣ್‌ ಕಲ್ಯಾಣ: ಆಮಂತ್ರಣ ನೀಡೋದ್ರಲ್ಲಿ ತರುಣ್‌ ಸುಧೀರ್‌ ಬಿಝಿ, ತರುಣ್‌ ಫೋಟೋಗೆ ಕೇಕ್‌ ತಿನ್ನಿಸೋದ್ರಲ್ಲಿ ಸೋನಾಲ್‌ಗೆ ಖುಷಿ

ಬೆಂಗಳೂರು: ಇದೇ ಆಗಸ್ಟ್‌ 10-11ರಂದ ಸೋನಲ್‌ ಮೊಂಥೆರೋ ಜತೆ ತರುಣ್‌ ಸುಧೀರ್‌ ಮದುವೆ. ಕಾಟೇರ ನಿರ್ದೇಶಕನಿಗೆ ಈಗ ಬಿಡುವೇ ಇಲ್ಲ. ಯಾರಿಗೆಲ್ಲ ಮದುವೆ ಆಮಂತ್ರಣ ಕೊಡಬೇಕು, ಯಾರಿಗೆ ಆಮಂತ್ರಣ ಕೊಡಲು ಮರೆತು ಹೋಗಿದೆ ಎನ್ನುವ ಚಿಂತೆ ಅವರಿಗೆ. ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ ನಿರ್ದೇಶಕನಿಗೆ ಪರಿಚಿತರು ಒಬ್ಬರೇ ಇಬ್ಬರೇ, ಕೊನೆಕ್ಷಣದ ಗಡಿಬಿಡಿಯಲ್ಲಿ ಯಾರಿಗಾದರೂ ಮದುವೆ ಆಮಂತ್ರಣ ಕೊಡಲು ಮರೆತು ಹೋದ್ರೆ ಏನ್ಕತೆ. ನಿನ್ನೆಯಂತೂ ತರುಣ್‌ ಸಾಕಷ್ಟು ಗಣ್ಯರನ್ನು ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ.

‌ಯಶ್‌ಗೆ ಮದುವೆ ಆಮಂತ್ರಣ ನೀಡಿದ ತರುಣ್‌ ಸುಧೀರ್

ನಟ ಯಶ್‌ ಈ ವೀಕೆಂಡ್‌ನಲ್ಲಿ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಲಿದ್ದಾರೆ. ಧರ್ಮಸ್ಥಳ ದೇಗುಲಕ್ಕೆ ಯಶ್‌ ಭೇಟಿ ನೀಡಿದ್ದರು. ಬುಧವಾರ ಯಶ್‌ನ ಭೇಟಿಯಾದ ತರುಣ್‌ ಸುಧೀರ್‌ ಮದುವೆಗೆ ತಪ್ಪದೇ ಬನ್ನಿ ಎಂದು ಆಮಂತ್ರಣ ನೀಡಿದ್ದಾರೆ.

ದಿನಕರ್‌ ತೂಗುದೀಪಗೆ ಮದುವೆ ಆಮಂತ್ರಣ

ಇತ್ತೀಚೆಗೆ ತರುಣ್‌ ತೂಗುದೀಪ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್‌ರನ್ನು ಭೇಟಿಯಾಗಿದ್ದರು. ಆದರೆ, ಅಲ್ಲಿ ಮದುವೆ ಆಮಂತ್ರಣ ಕೊಟ್ಟಿದ್ದಾರೋ ಇಲ್ವೋ ಎನ್ನುವ ಕುರಿತು ಖಚಿತತೆ ಇಲ್ಲ. ಆದರೆ, ಔಪಚಾರಿಕವಾಗಿ ಮದುವೆಗೆ ಬನ್ನಿ ಎಂದು ದರ್ಶನ್‌ರನ್ನು ಆಹ್ವಾನಿಸಿದ್ದಾರೆ. "ಖಂಡಿತಾ ಬರ್ತಿನಿ" ಎಂದು ದರ್ಶನ್‌ ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಾರ್ಜ್‌ ಶೀಟ್‌ ಇನ್ನೂ ಸಲ್ಲಿಕೆ ಆಗಿಲ್ಲ. ಹೀಗಾಗಿ ದರ್ಶನ್‌ಗೆ ಹೊರಬರುವಂತೆ ಇಲ್ಲ. ಇದೇ ಸಂದರ್ಭದಲ್ಲಿ ತರುಣ್‌ ಸುಧೀರ್‌ ಅವರು ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಅವರನ್ನು ಭೇಟಿಯಾಗಿ ಮದುವೆಯಾಗಿ ಆಮಂತ್ರಣ ನೀಡಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಆಮಂತ್ರಣ

ಬುಧವಾರ ತರುಣ್‌ ಸುದೀಪ್‌ ಅವರು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನೂ ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ. ಸ್ಯಾಂಡಲ್‌ವುಡ್‌ ಮತ್ತು ರಾಜಕೀಯ ಗಣ್ಯರಿಗೆ ನಿರ್ದೇಶಕ ತರುಣದ ಸುಧೀರ್‌ ಮದುವೆ ಆಮಂತ್ರಣ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ನಟಿ ರಚಿತಾ ರಾಮ್‌, ನಾದಬ್ರಹ್ಮ ಹಂಸಲೇಖ, ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್‌ ದಂಪತಿಗೆ, ಆರಾಧನಾ ರಾಮ್‌ ಮತ್ತು ಮಾಲಾಶ್ರೀ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ದಂಪತಿಗೆ, ರಿಯಲ್‌ ಸ್ಟಾರ್‌ ಉಪೇಂದ್ರಗೆ, ಕಿಚ್ಚ ಸುದೀಪ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ತನ್ನ ಆತ್ಮೀಯರಿಗೆ, ಪರಿಚಿತರಿಗೆ, ಕರ್ನಾಟಕದ ಪ್ರಮುಖಗರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ವಿವಿಧ ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ತರುಣ್‌ ಫೋಟೋಗೆ ಕೇಕ್‌ ತಿನ್ನಿಸಿದ ಸೋನಾಲ್‌

ಇನ್ನೊಂದೆಡೆ ಸೋನಾಲ್‌ ಕೂಡ ಮದುವೆ ಬಿಝಿಯಲ್ಲಿದ್ದಾರೆ. ತನ್ನ ಆತ್ಮೀಯರಿಗೆ ಆಮಂತ್ರಣ ತಲುಪಿಸಿದ್ದಾರೆ. ಇದೇ ಸಮಯದಲ್ಲಿ ಕೆಲವು ದಿನದ ಹಿಂದೆ ಬ್ಯಾಚುಲರ್‌ ಪಾರ್ಟಿ ಕೂಡ ನಡೆಸಿದ್ದರು. ಇವರ ಅಮ್ಮ ಮತ್ತು ತಂಗಿ ಸರ್‌ಪ್ರೈಸ್‌ ಬರ್ತ್‌ಡೇ ಪಾರ್ಟಿ ಹಮ್ಮಿಕೊಂಡಿದ್ದರು. ಅಲ್ಲಿ ತರುಣ್‌ ಫೋಟೋಗೂ ಸೋನಾಲ್‌ ಕೇಕ್‌ ತಿನ್ನಿಸಿದ್ದರು.

ತರುಣ್‌ ಸುಧೀರ್‌ ಸೋನಾಲ್‌ ಮದುವೆ ದಿನಾಂಕ

ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್‌ ಮತ್ತು ಬ್ಯೂಟಿಫುಲ್‌ ಹೀರೋಯಿನ್‌ ನಡುವೆ ಮದುವೆ ನಡೆಯಲಿದೆ. ಆಗಸ್ಟ್ 10 -11ರಂದು ಬೆಂಗಳೂರಿನಲ್ಲಿ ಇವರಿಬ್ಬರ ಶುಭ ವಿವಾಹ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ವಿವಾಹ ನಡೆಯಲಿದೆ.