ಕನ್ನಡ ಸುದ್ದಿ  /  Entertainment  /  Sandalwood News South Actress Meena Sagar Broke Her Silence About Her Second Marriage Again Mnk

Meena: ‘ಸಾಕು ಮಾಡಿ ಈ ನಿಮ್ಮ ಕೆಲಸ, ದುಡ್ಡು ಸಿಗುತ್ತೆ ಅಂತ ಇಷ್ಟೊಂದು ನಿಕೃಷ್ಟ ಮಟ್ಟಕ್ಕಿಳಿಯಬೇಡಿ’; ನಟಿ ಮೀನಾ ಸಿಡಿಮಿಡಿ

ನಟಿ ಮೀನಾ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬಗ್ಗೆ ಹರಡುತ್ತಿರುವ ನೆಗೆಟಿವ್‌ ವಿಚಾರಗಳ ಬಗ್ಗೆ ಮತ್ತೆ ಮೌನ ಮುರಿದಿದ್ದಾರೆ. ಹಣಕ್ಕಾಗಿ ಜನ ಸುಳ್ಳನ್ನೂ ಸತ್ಯ ಎಂದೇ ಬಿಂಬಿಸುತ್ತಿದ್ದಾರೆ. ಅದು ನನ್ನ ಬಾಳಲ್ಲೂ ನಡೆಯುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ ಮೀನಾ.

Meena: ‘ಸಾಕು ಮಾಡಿ ಈ ನಿಮ್ಮ ಕೆಲಸ, ದುಡ್ಡು ಸಿಗುತ್ತೆ ಅಂತ ಇಷ್ಟೊಂದು ನಿಕೃಷ್ಟ ಮಟ್ಟಕ್ಕಿಳಿಯಬೇಡಿ’; ನಟಿ ಮೀನಾ ಸಿಡಿಮಿಡಿ
Meena: ‘ಸಾಕು ಮಾಡಿ ಈ ನಿಮ್ಮ ಕೆಲಸ, ದುಡ್ಡು ಸಿಗುತ್ತೆ ಅಂತ ಇಷ್ಟೊಂದು ನಿಕೃಷ್ಟ ಮಟ್ಟಕ್ಕಿಳಿಯಬೇಡಿ’; ನಟಿ ಮೀನಾ ಸಿಡಿಮಿಡಿ

Meena on Second Marriage: ಬಹುಭಾಷಾ ನಟಿ ಮೀನಾ, ಒಂದು ಕಾಲದಲ್ಲಿ ಇಡೀ ಸೌತ್‌ ಸಿನಿಮಾರಂಗವನ್ನೇ ಆಳಿದವರು. ಬಾಲ ನಟಿಯಾಗಿ ಚಿತ್ರೋದ್ಯಮ ಪ್ರವೇಶಿಸಿ, ಸ್ಟಾರ್‌ ನಾಯಕರಿಗೆ ನಟಿಯಾಗಿ ಬಣ್ಣ ಹಚ್ಚಿ ಸೂಪರ್‌ಸ್ಟಾರ್ ಪಟ್ಟ ಪಡೆದುಕೊಂಡವರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಜತೆಗೆ ಹಿಂದಿಯಲ್ಲೂ ಗುರುತಿಸಿಕೊಂಡಿದ್ದಾರೆ ಮೀನಾ. ವಯಸ್ಸು 50ರ ಸನಿಹ ಬಂದರೂ, ಚಿತ್ರೋದ್ಯಮದಲ್ಲಿ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವ ಇದೇ ನಟಿ ಬದುಕಲ್ಲಿ ಬಿರುಗಾಳಿ ಬೀಸಿತ್ತು. ಪತಿ ವಿದ್ಯಾಸಾಗರ್‌ ಅಕಾಲಿಕ ಸಾವು ದೊಡ್ಡ ನೋವನ್ನು ತಂದಿತ್ತು. ಆಡುವವರ ಬಾಯಿಗೂ ಸುದ್ದಿ ಸಿಕ್ಕಿತ್ತು.

ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ 2022ರಲ್ಲಿ ಶ್ವಾಸಕೋಶದ ಸೋಂಕಿನಿಂದ ನಿಧನರಾದರು. ಅವರ ನಿಧನದ ಬಳಿಕ ಮೀನಾ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳೇ ಹರಿದಾಡಲಾರಂಭಿಸಿದವು. ಪತಿ ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಸುರಿಸುತ್ತಿದ್ದ ಸಂದರ್ಭದಲ್ಲಿ, ಮೀನಾ ಎರಡನೇ ಮದುವೆ ಆಗಲಿದ್ದಾರೆ ಎಂಬ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದ್ದವು. ಅದರಲ್ಲೂ ಕಾಲಿವುಡ್‌ ನಟ ಧನುಷ್‌ ಅವರನ್ನು ಮದುವೆಯಾಗಲಿದ್ದಾರೆ ಎಂದೂ ಹೇಳಲಾಗಿತ್ತು. ಉದ್ಯಮಿಯೊಬ್ಬರನ್ನೂ ಎರಡನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಮೈಲೇಜ್‌ ಪಡೆದಿತ್ತು.

ಈ ಹಿಂದೆಯೇ ಬೇಸರಗೊಂಡಿದ್ದ ಮೀನಾ..

ಹೀಗೆ ಸುಳ್ಳು ಸುದ್ದಿಗಳು ಹರಡುತ್ತಿದ್ದಂತೆ, ಮೌನ ಮುರಿದಿದ್ದ ಮೀನಾ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಬಾಯಿಗೆ ಬಂದಿದ್ದನ್ನು ಮಾತನಾಡಬೇಡಿ, ಅನಿಸಿದ್ದನ್ನು ಬರೆಯಬೇಡಿ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಆದರೆ, ನಟಿ ಇಷ್ಟೊಂದು ಬೇಡಿಕೊಂಡರೂ ಅದೇ ರೀತಿಯ ವಿಚಾರಗಳು ಮತ್ತೆ ಹೆಚ್ಚು ಸದ್ದು ಮಾಡುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ನಟಿಯ ಹೆಸರನ್ನು ಇಂಥದ್ದಕ್ಕೇ ಬಳಿಸಿಕೊಳ್ಳುತ್ತಿದ್ದಾರೆ. ಅಪಪ್ರಚಾರದ ಸರಕಾಗಿ ಹರಿಬಿಡುತ್ತಿದ್ದಾರೆ. ಇದೆಲ್ಲವನ್ನು ನೋಡಿ ಬೇಸತ್ತ ಮೀನಾ ಮತ್ತೆ ಮೌನ ಮುರಿದಿದ್ದಾರೆ. ಯೂಟ್ಯೂಬ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಳ್ಳು ಸುದ್ದಿ ಬರೆಯುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಸುಳ್ಳನ್ನೇ ವೈಭವೀಕರಿಸಬೇಡಿ..

"ಅಲ್ಲ, ನಿಮಗೆ ಹಣ ಸಿಗುತ್ತೆ ಎಂದಾದರೆ, ನೀವು ಏನನ್ನಾದರೂ ಬರೆಯುತ್ತೀರಾ? ಹಾಗಾದರೆ, ಸಾಮಾಜಿಕ ಜಾಲತಾಣಗಳು ದಿನದಿಂದ ದಿನಕ್ಕೆ ಹದಗೆಡುತ್ತಿವೆ. ಸುಳ್ಳನ್ನೇ ವೈಭವೀಕರಿಸುವ ಕೆಲಸವಾಗುತ್ತಿದೆ. ಹಾಗಾಗಿ ಆ ಹುಳುಕನ್ನು ಹುಡುಕಿ, ಸತ್ಯಗಳನ್ನು ಅರಿತು ಬರೆಯಿರಿ. ಹಾಗೆ ಮಾಡಿದರೆ, ಒಂದು ರೀತಿಯಲ್ಲಿ ಅದು ಎಲ್ಲರಿಗೂ ಒಳ್ಳೆಯದು. ನನ್ನಂತೆ ಒಂಟಿಯಾಗಿ ಬದುಕುವ ಅನೇಕ ಮಹಿಳೆಯರು ದೇಶದಲ್ಲಿದ್ದಾರೆ. ನಮ್ಮ ತಂದೆ-ತಾಯಿ ಮತ್ತು ಮಗಳ ಭವಿಷ್ಯದ ಬಗ್ಗೆ ಸ್ವಲ್ಪ ಯೋಚಿಸಿ" ಎಂದು ಇತ್ತೀಚೆಗೆ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮದುವೆ ನಿಶ್ಚಯವಾದ್ರೆ, ನಾನೇ ಹೇಳುವೆ..

ಎರಡನೇ ಮದುವೆ ಬಗ್ಗೆಯೂ ಮಾತನಾಡಿರುವ ಮೀನಾ, "ಸದ್ಯಕ್ಕೆ ನನಗೆ ಎರಡನೇ ಮದುವೆ ಆಗುವ ಯಾವುದೇ ಯೋಚನೆ ಇಲ್ಲ. ಭವಿಷ್ಯದಲ್ಲಿ ಏನೆಲ್ಲ ಆಗುತ್ತದೆ? ಯಾವೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂಬುದು ನನಗೂ ತಿಳಿದಿಲ್ಲ. ನಾನು ಈಗಲೇ ಹೇಗೆ ಅವರ ಹೇಳಲಿ? ನಾನು ಎರಡನೇ ಮದುವೆಯಾಗಲು ಬಯಸಿದರೆ, ಖಂಡಿತವಾಗಿಯೂ ಅದನ್ನು ಸಾರ್ವಜನಿಕವಾಗಿ ಘೋಷಿಸುತ್ತೇನೆ. ಅಲ್ಲಿಯವರೆಗೆ ಈ ರೀತಿಯ ಗಾಸಿಪ್‌ಗಳನ್ನು ಸೃಷ್ಟಿ ಮಾಡಬೇಡಿ. ನನ್ನ ಬಗ್ಗೆ ನೀವ್ಯಾರೂ ಇಷ್ಟೊಂದು ಕಾಳಜಿ ತೋರಿಸುವುದೂ ಬೇಡ" ಎಂದು ಮೀನಾ ಹೇಳಿಕೊಂಡಿದ್ದಾರೆ.

IPL_Entry_Point