ಕನ್ನಡ ಸುದ್ದಿ  /  ಮನರಂಜನೆ  /  Bhavana Menon: ‘ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ’; ಕೊನೆಗೂ ಮೌನ ಮುರಿದ ‘ಜಾಕಿ’ ಭಾವನಾ ಮೆನನ್‌

Bhavana Menon: ‘ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ’; ಕೊನೆಗೂ ಮೌನ ಮುರಿದ ‘ಜಾಕಿ’ ಭಾವನಾ ಮೆನನ್‌

ಜಾಕಿ ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಭಾವನಾ ಮೆನನ್‌, ಚಿತ್ರರಂಗದಲ್ಲಿ ದಶಕಗಳನ್ನು ಕಳೆದರೂ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗ ಇದೇ ನಟಿ ತಮ್ಮ ಗರ್ಭಪಾತದ ದಿನಗಳ ಬಗ್ಗೆಯೂ ಮೌನ ಮುರಿದಿದ್ದಾರೆ.

Bhavana Menon: ‘ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ’; ಕೊನೆಗೂ ಮೌನ ಮುರಿದ ‘ಜಾಕಿ’ ಭಾವನಾ ಮೆನನ್‌
Bhavana Menon: ‘ಒಂದಲ್ಲ ಎರಡಲ್ಲ ನಾಲ್ಕು ಬಾರಿ ಅಬಾರ್ಷನ್‌! ನಾನು ಸತ್ತೇ ಹೋಗಿದ್ದೆ’; ಕೊನೆಗೂ ಮೌನ ಮುರಿದ ‘ಜಾಕಿ’ ಭಾವನಾ ಮೆನನ್‌

Bhavana Menon: ಭಾವನಾ ಮೆನನ್‌ ಯಾರಿಗೆ ಗೊತ್ತಿಲ್ಲ ಹೇಳಿ. ಸೌತ್‌ನ ಸ್ಟಾರ್‌ ನಟಿ. ಬಹುಭಾಷೆಯಲ್ಲಿ ತಮ್ಮದೇ ಆದ ನಟನೆ ಮತ್ತು ಅಂದ ಚೆಂದದ ಮೂಲಕವೇ ಗಮನ ಸೆಳೆದ ನಟಿ. ಮೂಲ ಮಲಯಾಳಿಯಾದರೂ, ಕನ್ನಡಿಗರಿಗೂ ಈ ನಟಿ ಮನೆಯವಳಿದ್ದಂತೆ. ನಮ್ಮ ನೆಲದ ಹೆಣ್ಣುಮಗಳು ಅನ್ನೋ ಮಟ್ಟಿಗೆ ಕರುನಾಡ ಮನೆ ಮಂದಿಯನ್ನು ಸೆಳೆದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬರಿ ನಟನೆಯಷ್ಟೇ ಅಲ್ಲ ಒಂದಷ್ಟು ಕಾಂಟ್ರವರ್ಸಿ, ಗಾಸಿಪ್‌ಗಳಿಂದಲೂ ಭಾವನಾ ಆಗಾಗ ಸುದ್ದಿಯ ಮುನ್ನೆಲೆಯಲ್ಲಿರುತ್ತಾರೆ.

ಟ್ರೆಂಡಿಂಗ್​ ಸುದ್ದಿ

2002ರಲ್ಲಿ ಮಲಯಾಳಂನ ನಮ್ಮಲ್‌ ಸಿನಿಮಾ ಮೂಲಕ ಶುರುವಾದ ಭಾವನಾ ಮೆನನ್ ಅವರ ಸಿನಿಮಾ ಜರ್ನಿ, ಅದಾದ ಬಳಿಕ ತಮಿಳು, ಕನ್ನಡ, ತೆಲುಗಿಗೂ ವ್ಯಾಪಿಸಿತು. 2010ರಲ್ಲಿ ದುನಿಯಾ ಸೂರಿ ನಿರ್ದೇಶನದ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಜಾಕಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಅಂಗಳ ತಲುಪಿದ ಭಾವನಾ, ಚೊಚ್ಚಲ ಸಿನಿಮಾ ಮೂಲಕವೇ ಲಕ್ಕಿ ನಾಯಕಿ ಎಂಬ ವಿಶೇಷಣದ ಜತೆಗೆ ಚಂದನವನಕ್ಕೆ ಆಗಮಿಸಿದರು. ಅದಾದ ಮೇಲೆ ವಿಷ್ಣುವರ್ಧನ, ರೋಮಿಯೋ, ಬಚ್ಚನ್‌ ಯಾರೇ ಕೂಗಾಡಲಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು.

ಕದ್ದು ಮುಚ್ಚಿ ಮದುವೆ, ಗರ್ಭಪಾತ ವದಂತಿ

ಹೀಗೆ ಸೌತ್‌ನ ಚಿತ್ರೋದ್ಯಮದಲ್ಲಿ ಬಿಜಿಯಾಗಿರುವಾಗಲೇ ಇದೇ ಭಾವನಾ ಬಗ್ಗೆ ಬಗೆಬಗೆ ಗಾಸಿಪ್‌ಗಳೂ ಹರಿದಾಡಲಾರಂಭಿಸಿದವು. ಮಲಯಾಳಿ ನಟ ಅನೂಪ್‌ ಮೆನನ್‌ ಜತೆಗೆ ಭಾವನಾ ಮದುವೆಯೂ ಆಯಿತೆಂದು ಪುಕಾರು ಹಬ್ಬಿಸಿದರು. ಅಷ್ಟೇ ಅಲ್ಲ ಒಂದಲ್ಲ ಎರಡಲ್ಲ ನಾಲ್ಕೈದು ಸಲ ಗರ್ಭಪಾತವೂ ಆಗಿದೆ ಎಂದೂ ವದಂತಿಗಳು ಹರಿದಾಡಿದವು. ಆ ಸಮಯದಲ್ಲಿಯೇ ಭಾವನಾ ಮೆನನ್‌ ಸತ್ತೇ ಹೋದರು ಎಂದೂ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಆ ಬಗ್ಗೆ ಸ್ಪಷ್ಟನೆ ನೀಡಿ ನೀಡಿಯೇ ಸುಸ್ತಾಗಿ ಹೋಗಿದ್ದರು ಭಾವನಾ. ಈಗ ಮತ್ತೆ ಅದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನಡಿಕರ್‌ ಪ್ರಚಾರದ ವೇಳೆ ಗಾಸಿಪ್‌ ನೆನಪು

ಸದ್ಯ ಮಲಯಾಳಂನಲ್ಲಿ ನಡಿಕರ್‌ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಟೀವಿನೋ ಥಾಮಸ್‌ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನೇನು ನಾಳೆ (ಮೇ 3) ಆ ಚಿತ್ರ ಬಿಡುಗಡೆಯಾಗುತ್ತಿದೆ. ಹೀಗಿರುವಾಗಲೇ ಈ ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗಿರುವಾಗ ಏಳೆಂಟು ವರ್ಷಗಳ ಹಿಂದೆ ಹರಿದಾಡಿದ್ದ ಗಾಸಿಪ್‌ಗಳ ಬಗ್ಗೆ ಮತ್ತೆ‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಖ ಎತ್ತಿಕೊಂಡು ಹೋಗದ ಪರಿಸ್ಥಿತಿಯೇ ನಿರ್ಮಾಣವಾಗಿತ್ತು. ಅಷ್ಟೊಂದು ಕೆಟ್ಟದಾಗಿ ಜನ ನನ್ನನ್ನು ಬಿಂಬಿಸಿದ್ದರು ಎಂದು ನಗುತ್ತಲೇ ಹೇಳಿದ್ದಾರೆ ಭಾವನಾ.

ನಾನು ಸತ್ತೇ ಹೋದೆ ಎಂಬ ಪುಕಾರು ಹಬ್ಬಿಸಿದ್ರು

"ನನ್ನ ಮತ್ತು ಅನೂಪ್‌ ಮೆನನ್‌ ಮದುವೆ ಆಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದರು. ಹಲವು ಬಾರಿ ಅಬಾರ್ಷನ್‌ ಆಯ್ತು, ನಾನು ಸತ್ತೆ ಎಂದೇ ವದಂತಿ ಹರಡಿತು. ಹೊರಗೆ ಹೇಳಲಾಗದ ಎಷ್ಟೋ ವಿಷಯಗಳನ್ನು ನಾನು ಕೇಳಿದ್ದೇನೆ. ನಾನು ಅಮೆರಿಕಕ್ಕೆ ಹೋಗಿ ಗರ್ಭಪಾತ ಮಾಡಿಸಿಕೊಂಡೆ. ಆಲುವಾದಲ್ಲಿ ಗರ್ಭಪಾತ, ಕೊಚ್ಚಿಯಲ್ಲಿ ಗರ್ಭಪಾತ, ಚೆನ್ನೈನಲ್ಲಿ ಗರ್ಭಪಾತ ಹೀಗೆ ನಾಲ್ಕೈದು ಸಲ ಗರ್ಭಪಾತವಾಯ್ತು ಎಂದಿದ್ದರು. ಅಬಾರ್ಷನ್‌ನಿಂದಲೇ ಸತ್ತೆ ಎಂದೂ ಹೇಳಿದರು. ಆದರೆ, ಈಗ ಅದರ ಬಗ್ಗೆ ಏನನ್ನೂ ಕೇಳಬೇಡಿ. ಈಗ ಆ ಮಾತುಗಳನ್ನು ಕೇಳಲು ನನ್ನಿಂದಾಗದು. ಆ ಸಮಯದಲ್ಲಿ ಇಂಥ ಮಾತು ಕೇಳಲು ಆಘಾತ ಎನಿಸುತ್ತಿತ್ತು. ಈಗ ಹಾಗೆ ಅನಿಸುವುದಿಲ್ಲ ಎಂದಿದ್ದಾರೆ ಭಾವನಾ.‌

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕನ್ನಡದಲ್ಲಿ ಉತ್ತರಕಾಂಡ ಚಿತ್ರಕ್ಕೂ ಭಾವನಾ ನಾಯಕಿಯಾಗಿದ್ದಾರೆ. ಪಿಂಕ್‌ ನೋಟ್‌, ಹಂಟ್‌, ದಿ ಡೋರ್‌ ಸಿನಿಮಾ ಕೆಲಸಗಳಲ್ಲಿ ಭಾವನಾ ಬಿಜಿಯಾಗಿದ್ದಾರೆ.

IPL_Entry_Point