Spandana Vijay: ಸ್ಪಂದನಾ ಸಮಾಧಿಗೆ ಹಾಲು ತುಪ್ಪ ಅರ್ಪಣೆ; ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿಗೆ ತೆರಳಿದ ಕುಟುಂಬ
ಕನ್ನಡ ಸುದ್ದಿ  /  ಮನರಂಜನೆ  /  Spandana Vijay: ಸ್ಪಂದನಾ ಸಮಾಧಿಗೆ ಹಾಲು ತುಪ್ಪ ಅರ್ಪಣೆ; ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿಗೆ ತೆರಳಿದ ಕುಟುಂಬ

Spandana Vijay: ಸ್ಪಂದನಾ ಸಮಾಧಿಗೆ ಹಾಲು ತುಪ್ಪ ಅರ್ಪಣೆ; ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿಗೆ ತೆರಳಿದ ಕುಟುಂಬ

ವಿಜಯ್‌ ರಾಘವೇಂದ್ರ ಪತ್ನಿ ನಿಧನರಾಗಿ ಐದು ದಿನಗಳಾದವು. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ಸ್ಪಂದನಾ ಅವರ ಐದನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಅಸ್ಥಿಯನ್ನು ಪಡೆದು ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ.

Spandana Vijay: ಸಮಾಧಿಗೆ ಹಾಲು ತುಪ್ಪ ಬಿಟ್ಟು ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿಗೆ ತೆರಳಿದ ಸ್ಪಂದನಾ ಕುಟುಂಬ
Spandana Vijay: ಸಮಾಧಿಗೆ ಹಾಲು ತುಪ್ಪ ಬಿಟ್ಟು ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣದ ಕಾವೇರಿ ನದಿಗೆ ತೆರಳಿದ ಸ್ಪಂದನಾ ಕುಟುಂಬ

Spandana Vijay: ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರ ನಿಧನವಾಗಿ ಐದು ದಿನಗಳ ಪೂರ್ಣವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಐದನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಶ್ರೀರಾಮ್‌ಪುರದ ಹರಿಶ್ಚಂದ್ರ ಘಾಟ್‌ನಲ್ಲಿನ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ಮುಗಿಸಿದ್ದಾರೆ. ಬಳಿಕ ಮಡಿಕೆಗೆ ಅಸ್ಥಿ ತುಂಬಿ ಅದಕ್ಕೂ ಪೂಜೆ ಸಲ್ಲಿಸಿದ ಕುಟುಂಬಸ್ಥರು, ವಿವಿಧ ಬಗೆಯ ಖಾದ್ಯಗಳನ್ನಿಟ್ಟು ನೈವೇದ್ಯ ಅರ್ಪಿಸಿದ್ದಾರೆ.

ಹಾಲು ತುಪ್ಪ ಬಿಡುವ ಕಾರ್ಯ ಮುಗಿದ ಬಳಿಕ ಅಸ್ಥಿ ಪಡೆದು ಶ್ರೀರಂಗಪಟ್ಟಣದತ್ತ ಇಡೀ ಕುಟುಂಬ ತೆರಳಿದೆ. ಸ್ಪಂದನಾ ತಂದೆ ಶಿವರಾಮ್‌, ಪತಿ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಸೇರಿ ಎರಡೂ ಕುಟುಂಬಗಳ 40ಕ್ಕೂ ಅಧಿಕ ಮಂದಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲಿನ ಕಾವೇರಿ ನದಿಯ ಬಳಿ ಅಸ್ಥಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಿದ್ದಾರೆ.

ಸೋಮವಾರ (ಆಗಸ್ಟ್‌ 7) ವಿದೇಶದಲ್ಲಿ ಹೃದಯಾಘಾತದಿಂದ ನಿಧನರಾದ ಸ್ಪಂದನಾ ಅವರನ್ನು ನಿಧನದ ಎರಡು ದಿನಗಳ ಬಳಿಕ ಬೆಂಗಳೂರಿಗೆ ಪಾರ್ಥೀವ ಶರೀರವನ್ನು ತರಲಾಗಿತ್ತು. ಮಲ್ಲೇಶ್ವರದ ತಂದೆ ಶಿವರಾಮ್‌ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಟ್ಟು ಆಗಸ್ಟ್‌ 9ರ ಸಂಜೆ ವೇಳೆಗೆ ಈಡಿಗ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು.

ನೈವೇದ್ಯ ಸೇವಿಸಿದ ಕಾಗೆಗಳು

ಹರಿಶ್ಚಂದ್ರ ಘಾಟ್‌ನಲ್ಲಿ ಸ್ಮಶಾನದಲ್ಲಿ ಸ್ಪಂದನಾ ಅವರ ಸಮಾಧಿ ಮತ್ತು ಅಸ್ಥಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಸ್ಪಂದನಾಗೆ ಇಷ್ಟವಾಗುವ ಬಗೆಬಗೆ ಖಾದ್ಯಗಳನ್ನು ಸಮಾಧಿ ಮುಂದಿಟ್ಟು, ಕುಟುಂಬಸ್ಥರೆಲ್ಲರೂ ಹಾಲು ತುಪ್ಪ ಅರ್ಪಿಸಿದರು. ಹೀಗೆ ನೈವೇದ್ಯ ಇಟ್ಟ ತಕ್ಷಣವೇ ಗುಂಪಾಗಿ ಬಂದ ಕಾಗೆಗಳು ನೈವೇದ್ಯ ಸೇವಿಸಿವೆ.

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner