ಸ್ಪಂದನ ವಿಜಯ ರಾಘವೇಂದ್ರ ಮರೆಯಾಗಿ ಒಂದು ವರ್ಷ; ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ, ಚಿನ್ನ....
ಕನ್ನಡ ಸುದ್ದಿ  /  ಮನರಂಜನೆ  /  ಸ್ಪಂದನ ವಿಜಯ ರಾಘವೇಂದ್ರ ಮರೆಯಾಗಿ ಒಂದು ವರ್ಷ; ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ, ಚಿನ್ನ....

ಸ್ಪಂದನ ವಿಜಯ ರಾಘವೇಂದ್ರ ಮರೆಯಾಗಿ ಒಂದು ವರ್ಷ; ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ, ಚಿನ್ನ....

Spandana Vijay Raghavendra death anniversary: ಕನ್ನಡ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಒಂದು ವರ್ಷದ ಹಿಂದೆ ಹಠಾತ್‌ ನಿಧನರಾಗಿದ್ದರು. ಇಂದು ಸ್ಪಂದನ ವಿಜಯ ರಾಘವೇಂದ್ರ ಅವರ ಪುಣ್ಯ ತಿಥಿ. ಅಗಲಿದ ತನ್ನ ಪ್ರೀತಿಯ ಪತ್ನಿಯನ್ನು ನೆನೆದು ವಿಜಯ ರಾಘವೇಂದ್ರ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಪಂದನ ವಿಜಯ ರಾಘವೇಂದ್ರ ಮರೆಯಾಗಿ ಒಂದು ವರ್ಷ; ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ
ಸ್ಪಂದನ ವಿಜಯ ರಾಘವೇಂದ್ರ ಮರೆಯಾಗಿ ಒಂದು ವರ್ಷ; ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ

ಬೆಂಗಳೂರು: ಕನ್ನಡ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಒಂದು ವರ್ಷದ ಹಿಂದೆ ಹಠಾತ್‌ ನಿಧನರಾಗಿದ್ದರು. ಇಂದು ಸ್ಪಂದನ ವಿಜಯ ರಾಘವೇಂದ್ರ ಅವರ ಪುಣ್ಯ ತಿಥಿ. ಅಗಲಿದ ತನ್ನ ಪ್ರೀತಿಯ ಪತ್ನಿಯನ್ನು ನೆನೆದು ವಿಜಯ ರಾಘವೇಂದ್ರ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಚಿನ್ನ... ಮೌನದಲ್ಲಿ ಅರಳಿದ ನಗು ನಿನ್ನದು… ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು" ಎಂದು ಬರೆದು ಸ್ಪಂದನ ಫೋಟೋ ಹಂಚಿಕೊಂಡಿದ್ದಾರೆ.

ಮಡದಿಯ ನೆನೆದು ವಿಜಯ್‌ ರಾಘವೇಂದ್ರ ಭಾವುಕ

ಸ್ಪಂದನಾ ಮತ್ತು ವಿಜಯ್‌ ರಾಘವೇಂದ್ರ ಅನೇಕ ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಲವ್‌ ಮ್ಯಾರೇಜ್‌ ಮೂಲಕ ಅನ್ಯೋನ್ಯವಾಗಿ ದಾಂಪತ್ಯ ನಡೆಸುತ್ತಿದ್ದ ಇವರ ಬದುಕಿನ ಮೇಲೆ ಕಳೆದ ವರ್ಷ ಕೆಟ್ಟ ಕಣ್ಣು ಬಿದ್ದಿತ್ತು. ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಅಲ್ಲಿಯೇ ಮೃತಪಟ್ಟಿದ್ದರು. ಕಡಿಮೆ ರಕ್ತದೊತ್ತಡದಿಂದ ಅಥವಾ ಹೃದಯಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಹಠಾತ್‌ ಪತ್ನಿಯ ಅಗಲಿಕೆಯಿಂದ ವಿಜಯ್‌ ರಾಘವೇಂದ್ರ ಕುಸಿದುಹೋಗಿದ್ದರು. ಇನ್‌ಸ್ಟಾಗ್ರಾಂನಲ್ಲಿ ಆಗಾಗ ತನ್ನ ಪತ್ನಿಯನ್ನು ನೆನೆದು ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತ ಇದ್ದಾರೆ. ಇದೀಗ ಪತ್ನಿಯ ಪುಣ್ಯತಿಥಿಯ ಸಮಯದಲ್ಲಿ "ಚಿನ್ನ... ಮೌನದಲ್ಲಿ ಅರಳಿದ ನಗು ನಿನ್ನದು… ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು" ಎಂದು ಬರೆದುಕೊಂಡು ತನ್ನ ಪ್ರೀತಿಯ ಪತ್ನಿಯನ್ನು ನೆನೆಸಿಕೊಂಡಿದ್ದಾರೆ.

ತನ್ನ ಪತ್ನಿಯನ್ನು ನೆನೆದು ವಿಜಯ್‌ ರಾಘವೇಂದ್ರ ಈ ಹಿಂದೆಯೂ ಹಲವು ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. "ತಂಗಾಳಿ ಬೀಸುವ ಉಸಿರು ನೀನು… ನೆನಪನ್ನು ನನಸಾಗಿಸುವ ಮಿಡಿತ ನೀನು… ನಗುವನ್ನೇ ಬದುಕಾಗಿಸುವ ಕಣ್ಣ ಬೆಳಕು ನೀನು" ಎಂದು ಬರೆದಿದ್ದರು. "ನನ್ನ ಜೀವದ ಎಂದೂ ಬಾಡದ ಹೂವು ಐ ಲವ್ ಯೂ… ಚಿನ್ನ!" "ನಿನ್ನ ಪ್ರೀತಿಯ ಬೆಳಕು ಬೆಳಗಲಿ ಕಳೆದ ಕ್ಷಣಗಳು ನೆನಪಾಗಿ ಬದುಕಲಿ ಚಿನ್ನ… ನಿನ್ನ ನಗು ಒಲವಿನ ಜ್ಯೋತಿಯಾಗಲಿ" "ಹರುಷದ ಬೆಳಕು ಸದಾ ಬೆಳಗಲಿ ಭರವಸೆಯ ಜ್ಯೋತಿ ಜೊತೆಯಲಿರಲಿ!" "ಮಾಸಗಳು ಕಳೆದರೂ ಮಾಸದ ಹೃದಯದೊಳಗಿನ ಈ ಮಂದಹಾಸ …" ಎಂದೆಲ್ಲ ಭಾವುಕವಾಗಿ ಪೋಸ್ಟ್‌ ಮಾಡುತ್ತಿದ್ದರು.

ಬ್ಯಾಂಕಾಕ್‌ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ಸ್ಪಂದನಾ ಕೊನೆಯುಸಿರೆಳೆದಿದ್ದರು. ಈ ಘಟನೆ ಇಡೀ ಕರುನಾಡನ್ನೇ ದಿಗ್ಬ್ರಮೆಗೆ ದೂಡಿತ್ತು. ಕೆಲವರ ಪ್ರಕಾರ ಕಡಿಮೆ ರಕ್ತದೊತ್ತಡದಿಂದ ಸ್ಪಂದನಾ ಮೃತಪಟ್ಟಿದ್ದರು. ಆದರೆ, ಖಚಿತ ಕಾರಣ ಬಹಿರಂಗವಾಗಿರಲಿಲ್ಲ. ಪ್ರೀತಿಸಿ ಮದುವೆಯಾಗಿದ್ದ ವಿಜಯ್‌ ರಾಘವೇಂದ್ರ ಅಕ್ಷರಶಃ ನಲುಗಿ ಹೋಗಿದ್ದರು. ಇದೀಗ ಅದೇ ಪ್ರೀತಿಸಿದ ಜೀವ ಜತೆಗಿಲ್ಲದೆ ಒಂದು ವರ್ಷ ಕಳೆದಿದೆ. ಹೀಗೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ಸಾಂತ್ವನದ ಕಾಮೆಂಟ್‌ಗಳೇ ನೆಟ್ಟಿಗರಿಂದ ಹರಿದು ಬಂದಿವೆ. ಅತ್ತಿಗೆ ಇಲ್ಲವಾಗಿ ಒಂದು ವರ್ಷಗಳು ಕಳೆದಿವೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯ್‌ ರಾಘವೇಂದ್ರ ಸಿನಿಮಾಗಳು

ಸದ್ಯ ವಿಜಯ ರಾಘವೇಂದ್ರ ಅವರು ರಿಪ್ಪನ್‌ ಸ್ವಾಮಿ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಇದಕ್ಕೂ ಮೊದಲು ಗ್ರೇ ಗೇಮ್ಸ್‌, ಜೋಗ್‌ 101, ಕೇಸ್‌ ಆಫ್‌ ಕೊಂಡಾಣ ಚಿತ್ರದಲ್ಲಿ ಈ ವರ್ಷ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಮಾರಿಚಿ, ಕದ್ದ ಚಿತ್ರ, ಓ ಮನಸ್ಸೇ, ಸಾವಿತ್ರಿ, ರಾಘು, ಕನಸಿನ ಸರ, ಕೇಸ್‌ ನಂಬರ್‌ 18, ಯದಾ ಯದಾ ಹಿ ಧರ್ಮಸ್ಯ, ಪರದೇಶಿ ಸನ್‌ ಆಫ್‌ ಲಂಡನ್‌, ರಾಜ ಲವ್ಸ್‌ ರಾಧೆ, ಕಿಸ್ಮತ್‌, ಜಾನಿ, ಮಾಸ್‌ ಲೀಡರ್‌, ಟಾಸ್‌, ಹ್ಯಾಪಿ ನ್ಯೂ ಇಯರ್‌, ಎರಡು ಕನಸು, ಚೌಕ, ಶ್ರೀಕಂಠ, ನನ್ನ ನಿನ್ನ ಪ್ರೇಮ ಕಥೆ, ಅಪೂರ್ವ, ರಣತಂತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಜಯ ರಾಘವೇಂದ್ರ ನಟಿಸಿದ್ದಾರೆ.

 

Whats_app_banner