Spandana Vijay: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ; ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ ಪುತ್ರ ಶೌರ್ಯ
ಕನ್ನಡ ಸುದ್ದಿ  /  ಮನರಂಜನೆ  /  Spandana Vijay: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ; ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ ಪುತ್ರ ಶೌರ್ಯ

Spandana Vijay: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ; ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ ಪುತ್ರ ಶೌರ್ಯ

ಈಡಿಗ ಸಂಪ್ರದಾಯದಂತೆ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಪುತ್ರ ಶೌರ್ಯ ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ್ದಾರೆ.

Spandana Vijay: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ; ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ ಪುತ್ರ ಶೌರ್ಯ
Spandana Vijay: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ; ಅಮ್ಮನ ಅಂತಿಮ ಕಾರ್ಯ ನೆರವೇರಿಸಿದ ಪುತ್ರ ಶೌರ್ಯ

Spandana Vijay: ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಿ ಕಣ್ಣೀರ ವಿದಾಯ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿನ ಮನೆಯಿಂದ ತೆರೆದ ವಾಹನದಲ್ಲಿ ಸಾವಿರಾರು ಮಂದಿಯ ಸಮ್ಮುಖದಲ್ಲಿ ಶ್ರೀರಾಮ್‌ಪುರದಲ್ಲಿನ ಹರಿಶ್ಚಂದ್ರ ಘಾಟ್‌ಗೆ ಪಾರ್ಥೀವ ಶರೀರವನ್ನು ತರಲಾಯಿತು. ಸ್ಪಂದನಾ ಅವರ ಅಂತಿಮ ಕಾರ್ಯಗಳನ್ನು ಪೂರ್ಣಗೊಳಿಸಿ ಭಾವುಕವಾಗಿಯೇ ಅವರನ್ನು ಶಾಶ್ವತವಾಗಿ ಎರಡೂ ಕುಟುಂಬಗಳು ಬೀಳ್ಕೊಟ್ಟವು.

ಪುತ್ರ ಶೌರ್ಯ ಮುದ್ದು ಅಮ್ಮನ ಕೊನೇ ಕ್ಷಣದ ಕಾರ್ಯಗಳಲ್ಲಿ ಪಾಲ್ಗೊಂಡು ಈಡಿಗ ಸಂಪ್ರದಾಯದಂತೆ ವಿಧಿ ವಿಧಾನ ನೆರವೇರಿಸಿದರು. ಪತ್ನಿಯ ಮುಖವನ್ನೇ ನೋಡುತ್ತ ನಿಂತಿದ್ದ ವಿಜಯ್‌ ರಾಘವೇಂದ್ರ ಅಕ್ಷರಶಃ ಮೌನಕ್ಕೆ ಜಾರಿದ್ದರು.

ಮುತ್ತೈದೆಯ ಸಾವಿನ ಹಿನ್ನೆಲೆಯಲ್ಲಿ ಅರಿಶಿಣ, ಕುಂಕುಮ ಹಚ್ಚಿ, ಮದುವೆಯಲ್ಲಿ ಉಟ್ಟಿದ್ದ ಸೀರೆ, ಬಳೆ ನೀಡಿ ಸ್ಪಂದನಾ ಅವರನ್ನು ಹರಿಶ್ಚಂದ್ರ ಘಾಟ್‌ನಲ್ಲಿನ ವಿದ್ಯುತ್‌ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಅಗ್ನಿ ಸ್ಪರ್ಶ ಮಾಡಲಾಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ಸ್ನೇಹಿತರ ಜತೆಗೆ ಬ್ಯಾಂಕಾಕ್‌ ಪ್ರವಾಸಕ್ಕೆಂದು ಹೋದಾಗ, ರಾತ್ರಿ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದರು. ಅವರ ನಿಧನದ ಸುದ್ದಿ ಇಡೀ ಕರ್ನಾಟಕವನ್ನೇ ಅಳಿಸಿತ್ತು. ಆಗಸ್ಟ್‌ 8ರ ರಾತ್ರಿ ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ತರಲಾಗಿತ್ತು. ಅದಾದ ಬಳಿಕ ಇಂದು (ಆ. 9) ಮಧ್ಯಾಹ್ನದ ವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

Whats_app_banner