ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ-sandalwood news special pooja at chalanachitra kalavidara sanga chetan ahimsa opposes rockline venkateshs decision mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ

ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ

ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಚಲನಚಿತ್ರ ಕಲಾವಿದರ ಸಂಘದಲ್ಲಿ ವಿಶೇಷ ಹೋಮ, ಹವನ ನಡೆಸುವುದಾಗಿ ರಾಕ್‌ಲೈನ್‌ ವೆಂಕಟೇಶ್‌ ಹೇಳುತ್ತಿದ್ದಂತೆ, ಅವರ ನಿರ್ಧಾರಕ್ಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ.

ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ
ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್‌ ವೆಂಕಟೇಶ್‌ ನಿರ್ಧಾರಕ್ಕೆ ಚೇತನ್‌ ಅಹಿಂಸಾ ಸಿಡಿಮಿಡಿ

Chetan ahimsa on Rockline venkatesh: ಕನ್ನಡ ಚಿತ್ರೋದ್ಯಮದಲ್ಲಿನ ಇತ್ತೀಚಿನ ಒಂದಷ್ಟು ಬೆಳವಣಿಗೆಗಳು ಚಂದನವನಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿವೆ. ನಿರೀಕ್ಷೆ ಮೂಡಿಸಿದ ಸಿನಿಮಾಗಳು ಸೋತು ಸುಣ್ಣವಾಗುತ್ತಿದ್ದರೆ, ಸ್ಟಾರ್‌ ನಟರ ಸಿನಿಮಾಗಳ ಕೊರತೆಯೂ ಎದ್ದು ಕಂಡಿತ್ತು. ಈ ನಡುವೆ ವಿವಾದಗಳಿಂದಲೂ ಸ್ಯಾಂಡಲ್‌ವುಡ್‌ ಹೊರತಾಗಿಲ್ಲ. ಅದರಲ್ಲೂ ‌ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕಲಾವಿದರ ಸಂಘದ ಕಟ್ಟಡದಲ್ಲಿ ವಿಶೇಷ ಹೋಮ ಹಾಕಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರಕ್ಕೆ ನಟ, ಸಾಮಾಜಿಕ ಹೋರಾಟಗಾರ‌ ಚೇತನ್‌ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಶೇಷ ಪೂಜೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ, ಭಾನುವಾರ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು, "ಕೋವಿಡ್‌ ನಂತರ ಸಿನಿಮಾರಂಗ ಸಾಕಷ್ಟು ಸಮಸ್ಯೆಗಳನ್ನು ನೋಡಿದೆ. ಕೋವಿಡ್‌ ಮುಗಿದ ಬಳಿಕವೇ ಹೋಮ ಮಾಡಿಸಬೇಕು ಎಂಬ ಪ್ಲಾನ್‌ ಇತ್ತು. ಆದರೆ, ಅದು ಮುಂದೂಡುತ್ತಲೇ ಹೋಯಿತು. ಕೋವಿಡ್‌ ಬಳಿಕ ಸಾಕಷ್ಟು ಸಾವು ನೋವುಗಳು ಸಂಭವಿಸಿದವು. ಇದೀಗ ಅದಕ್ಕೆಲ್ಲ ಸಮಯ ಬಂದಿದೆ. ಇದೇ ಆಗಸ್ಟ್‌ 14ರಂದು ಚಿತ್ರರಂಗದ ಏಳಿಗೆ ಮತ್ತು ಉಳಿವಿಗಾಗಿ ಹೋಮ ಮತ್ತು ಪೂಜೆ ನಡೆಯಲಿದೆ. ಈ ವಿಶೇಷ ಕಾರ್ಯಕ್ಕೆ ಚಿತ್ರರಂಗದ ಎಲ್ಲರನ್ನೂ ಆಹ್ವಾನಿಸಿದ್ದೇವೆ" ಎಂದಿದ್ದರು.

ಇದೀಗ ರಾಕ್‌ಲೈನ್‌ ವೆಂಕಟೇಶ್‌ ಅವರ ಈ ನಿರ್ಧಾರಕ್ಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಎಂಥಹ ಅನುಪಯುಕ್ತ ಮತ್ತು ಚಿಂತನೆಯಿಲ್ಲದ ಕೃತ್ಯ. ಮೊದಲು ಬರಹಗಾರರ ಸಂಘವನ್ನು ಸ್ಥಾಪಿಸಿ, ಬಳಿಕ ಹೋಮ ಹಾಕಿಸುವಿರಂತೆ ಎಂದು ತಿವಿದಿದ್ದಾರೆ.

ಹೀಗಿದೆ ಚೇತನ್‌ ಅಹಿಂಸಾ ಪ್ರತಿಕ್ರಿಯೆ..

"ಈ ವಾರ, ಕನ್ನಡ ಚಲನಚಿತ್ರೋದ್ಯಮದ ಕಲಾವಿದರ ಸಂಘವು ಚಲನಚಿತ್ರೋದ್ಯಮದ ಒಳತಿಗಾಗಿ ಪೂಜೆಯನ್ನು ಆಯೋಜಿಸುತ್ತಿದೆ. ಎಂಥಹ ಅನುಪಯುಕ್ತ ಮತ್ತು ಚಿಂತನೆಯಿಲ್ಲದ ಕೃತ್ಯ. ಕನ್ನಡ ಚಲನಚಿತ್ರರಂಗವನ್ನು ನಿಜವಾಗಿ ಉತ್ತಮಗೊಳಿಸಲು, ನಾವು ಬಲವಾದ ಬರಹಗಾರರ ಸಂಘವನ್ನು ಸ್ಥಾಪಿಸಬೇಕು, ಮೀಟೂ ಮತ್ತು ಸ್ಟಾರ್ ಸಂಸ್ಕೃತಿ ಎರಡನ್ನೂ ಕಿತ್ತುಹಾಕಬೇಕು, ಕಾರ್ಮಿಕರಿಗೆ ಪ್ರಯೋಜನಗಳನ್ನು ಒದಗಿಸಬೇಕು, ಮತ್ತು ಗುಣಮಟ್ಟದ, ವಿಷಯ-ಚಾಲಿತ ಚಲನಚಿತ್ರಗಳನ್ನು ತಯಾರಿಸಬೇಕು" ಎಂದಿದ್ದಾರೆ.

ಯಾವಾಗ ಪೂಜೆ, ಏನೆಲ್ಲ ಇರಲಿದೆ..

ಆಗಸ್ಟ್‌ 14ರಂದು ಬೆಳಗ್ಗೆ 8ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಒಟ್ಟು ಮೂರು ರೀತಿಯಲ್ಲಿ ಹೋಮಗಳು ನಡೆಯಲಿವೆ. ಮೊದಲಿಗೆ ಗಣಪತಿ ಹೋಮ ನಡೆಯಲಿದೆ. ಅದಾದ ಬಳಿಕ ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮವೂ ನಡೆಯಲಿದೆ. ಈ ಹೋಮ ಕಾರ್ಯಕ್ರಮಕ್ಕೆ ಎಲ್ಲ ಕಲಾವಿದರಿಗೂ ಆಹ್ವಾನ ನೀಡಲಾಗಿದೆ. ಪೂಜೆ ಬಳಿಕ ಊಟದ ವ್ಯವಸ್ಥೆಯೂ ಇರಲಿದೆ ಎಂದು ರಾಕ್‌ಲೈನ್‌ ತಿಳಿಸಿದ್ದಾರೆ.