ಕನ್ನಡ ಸುದ್ದಿ  /  Entertainment  /  Sandalwood News Spoorthi Dina Late Kannada Actor Puneeth Rajkumar Birthday Celebrataion Today Pcp

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆನಪು: ಸಮಾದಿ ಬಳಿ ಜನಸಾಗರ, ಸ್ಪೂರ್ತಿ ದಿನದಂದು ಅಭಿಮಾನಿಗಳಿಗೆ ಯುವ ಕಡೆಯಿಂದ ಬಿರಿಯಾನಿ

ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ಹುಟ್ಟುಹಬ್ಬದ ಸವಿನೆನಪಿನ ಈ ದಿನ (ಮಾರ್ಚ್‌ 17) ಅಪ್ಪು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪ ಸ್ಮಾರಕಕ್ಕೆ ಆಗಮಿಸುತ್ತಿದ್ದಾರೆ. ಎಲ್ಲೆಡೆ ಅಪ್ಪು ಹುಟ್ಟುಹಬ್ಬವನ್ನು ಸ್ಪೂರ್ತಿದಿನವಾಗಿ ಆಚರಿಸಲಾಗುತ್ತಿದೆ.

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆನಪು: ಸಮಾದಿ ಬಳಿ ಜನಸಾಗರ
ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆನಪು: ಸಮಾದಿ ಬಳಿ ಜನಸಾಗರ

ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ಹುಟ್ಟುಹಬ್ಬದ ಸವಿನೆನಪಿನ ಈ ದಿನ (ಮಾರ್ಚ್‌ 17) ಅಪ್ಪು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪ ಸ್ಮಾರಕಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕೇಕ್‌ ಕತ್ತರಿಸಿ ಫ್ಯಾನ್ಸ್‌ ಸಂಭ್ರಮಿಸಲು ಆರಂಭಿಸಿದ್ದಾರೆ. ಅಪ್ಪು ಕುಟುಂಬದವರೂ ಸಮಾದಿ ಬಳಿ ಆಗಮಿಸಲಿದ್ದಾರೆ. ಇಂದು ಲಕ್ಷಾಂತರ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಸಮಾದಿ ಬಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಅಪ್ಪು ಹುಟ್ಟುಹಬ್ಬ ಸ್ಪೂರ್ತಿ ದಿನ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ಅಪ್ಪು ಅಭಿಮಾನಿಗಳು ಇಂದು ಸ್ಪೂರ್ತಿ ದಿನವಾಗಿ ಆಚರಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಸ್ಪೂರ್ತಿ ದಿನ ಪೋಸ್ಟರ್‌ಗಳು, ಹುಟ್ಟುಹಬ್ಬದ ಶುಭಾಶಯಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಜನರು ಸ್ಪೂರ್ತಿ ದಿನದ ಶುಭಾಶಯ ಹಂಚುತ್ತಿದ್ದಾರೆ.

ಯುವ ಕಡೆಯಿಂದ ಚಿಕನ್‌ ಬಿರಿಯಾನಿ ವ್ಯವಸ್ಥೆ

ಯುವ ರಾಜ್‌ಕುಮಾರ್‌ ಅಪ್ಪು ಹುಟ್ಟುಹಬ್ಬದ ಸವಿನೆನಪಿಗೆ ಸಾಥ್‌ ನೀಡುತ್ತಿದ್ದಾರೆ. ಇಂದು ಅಪ್ಪು ಅಭಿಮಾನಿಗಳನ್ನು ಹಲವು ಕಡೆ ಭೇಟಿಯಾಗುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಒಂದು ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫ್ಯಾನ್ಸ್‌ ಆಗಮಿಸುವ ನಿರೀಕ್ಷೆಯಿದೆ. ಯುವ ರಾಜ್‌ಕುಮಾರ್‌ ಎಲ್ಲರಿಗೂ ಚಿಕನ್‌ ಬಿರಿಯಾನಿ ವ್ಯವಸ್ಥೆ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆನಪು

ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಸವಿನೆನಪನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸದಾಶಿವನಗರದಲ್ಲಿರುವ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಬರ್ತ್‌ಡೇ ಆಚರಣೆ ಶುರುವಾಗಿತ್ತು. ಸಮಾದಿ ಬಳಿಗೆ ನಿನ್ನೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಯುವ ರಾಜ್‌ಕುಮಾರ್‌ ಆಗಮಿಸಿದ್ದರು.

ಜಾಕಿ ಸಿನಿಮಾ ವೀಕ್ಷಣೆ

ಇಂದು ಅಪಾರ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಮರುಬಿಡುಗಡೆಗೊಂಡಿರುವ ಜಾಕಿ ಸಿನಿಮಾ ವೀಕ್ಷಿಸಲಿದ್ದಾರೆ. ಇಂದು ಯುವ ರಾಜ್‌ಕುಮಾಆರ್‌ ಅವರು ಬೆಂಗಳೂರಿನ ನರ್ತಕಿ ಮತ್ತು ಪ್ರಸನ್ನ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇತ್ತೀಚೆಗೆ ಮರುಬಿಡುಗಡೆಗೊಂಡಿರುವ ಜಾಕಿ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಹಲವು ಕೋಟಿ ಗಳಿಕೆ ಮಾಡುವ ಸೂಚನೆ ಇದೆ. ಸಿನಿಮಾ ರಿಲೀಸ್‌ ಆಗಿ ಹತ್ತು ವರ್ಷದ ಬಳಿಕ ಮರುಬಿಡುಗಡೆಗೊಂಡಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ.

ರಾಜ್ಯ ಹೊರರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿರುವ ಅಪ್ಪು ಅಭಿಮಾನಿಗಳು ಸ್ಪೂರ್ತಿ ದಿನವನ್ನು ಆಚರಿಸುತ್ತಿದ್ದಾರೆ. ಮೈಸೂರಿನ ಮೈಸೂರಿನ ಅಗ್ರಹಾರ ಸರ್ಕಲ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ 49 ಅಡಿ ಎತ್ತರದ ಕಟೌಟ್‌ ನಿಲ್ಲಿಸಲಾಗುತ್ತಿದೆ. ಇಂದು ತೀರ್ಥಹಳ್ಳಿಯ ಕುಪ್ಪಳಿ ಸಮೀಪ ಪುನೀತ್‌ ನೆನಪಿನೋತ್ಸವ ಕಾರ್ಯಕ್ರಮ ಆರಂಭವಾಗಿದೆ. ಇಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿಂದು ಬೆಳಗ್ಗೆ 10:30 ಗೆ ಅಣ್ಣಾವ್ರ ಪುಣ್ಯಭೂಮಿಯಿಂದ ಪ್ರಸನ್ನ ಚಿತ್ರಮಂದಿರದವರೆಗೂ ಬೈಕ್ ರಾಲಿ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪು ಫ್ಯಾನ್ಸ್‌ ಮಾಹಿತಿ ನೀಡಿದ್ದಾರೆ.

IPL_Entry_Point