ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Sanju Weds Geetha 2: ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಡಬ್ಬಿಂಗ್‌ ಕೆಲಸಕ್ಕೆ ಚಾಲನೆ ನೀಡಿದ ನಟ ಶ್ರೀನಗರ ಕಿಟ್ಟಿ

Sanju weds Geetha 2: ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಡಬ್ಬಿಂಗ್‌ ಕೆಲಸಕ್ಕೆ ಚಾಲನೆ ನೀಡಿದ ನಟ ಶ್ರೀನಗರ ಕಿಟ್ಟಿ

Apr 11, 2024 02:38 PM IST Manjunath B Kotagunasi
twitter
Apr 11, 2024 02:38 PM IST
  • Sanju weds Geetha 2: ನಿರ್ದೇಶಕ ನಾಗಶೇಖರ್‌ ಪ್ರೇಮಕಥೆಯುಳ್ಳ ಹಿಟ್‌ ಸಿನಿಮಾಗಳನ್ನು ಚಂದನವನಕ್ಕೆ ನೀಡಿದ್ದಾರೆ. ಸಂಜು ವೆಡ್ಸ್‌ ಗೀತಾ ಇಂದಿಗೂ ಟಾಪ್‌ ಮ್ಯೂಸಿಕಲ್‌ ಲವ್‌ ಸ್ಟೋರಿ. ಹಾಡುಗಳಿಂದಲೇ ಹೆಚ್ಚು ಹೆಸರು ಮಾಡಿದ್ದ ಆ ಸಿನಿಮಾ, ದಶಕಗಳ ಬಳಿಕ ಅದೇ ಕಥೆಯನ್ನು ಸೀಕ್ವೆಲ್‌ ರೂಪದಲ್ಲಿ ಕಟ್ಟಿಕೊಡಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸಂಜು ವೆಡ್ಸ್‌ ಗೀತಾ ಪಾರ್ಟ್‌ 2 ಸಿನಿಮಾ ಘೋಷಣೆ ಮಾಡಿ, ಶೂಟಿಂಗ್‌ ಕೆಲಸವನ್ನೂ ಮುಗಿಸಿದ್ದಾರೆ. ರಮ್ಯಾ ಬದಲಿಗೆ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್‌ ಜತೆಯಾಗಿದ್ದಾರೆ. ಕಳೆದ ವರ್ಷವೇ ಸೆಟ್ಟೇರಿದ್ದ ಈ ಸಿನಿಮಾ ಈಗಾಗಲೇ ಒಟ್ಟು 3 ಹಂತಗಳಲ್ಲಿ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಇದೀಗ ಶೂಟಿಂಗ್‌ನ ಗ್ಯಾಪ್‌ನಲ್ಲಿಯೇ ಯುಗಾದಿ ಹಬ್ಬದ ದಿನದಂದೇ ಸಾಧು ಕೋಕಿಲ ಅವರ ಲೂಪ್‌ ಸ್ಟುಡಿಯೋದಲ್ಲಿ ಟಾಕಿ ಪೋರ್ಷನ್‌ ಡಬ್ಬಿಂಗ್‌ ಕೆಲಸಕ್ಕೆ ಚಿತ್ರತಂಡ ಚಾಲನೆ ನೀಡಿದೆ.
More