ಅರ್ಜುನ್‌ ಜನ್ಯ-ಶಿವರಾಜ್‌ಕುಮಾರ್‌ ಸಿನಿಮಾ ಸೆಟ್‌ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ-sandalwood news swamiji visited to arjun janya directional shivarajkumar starring 45 kannada movie set rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅರ್ಜುನ್‌ ಜನ್ಯ-ಶಿವರಾಜ್‌ಕುಮಾರ್‌ ಸಿನಿಮಾ ಸೆಟ್‌ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ

ಅರ್ಜುನ್‌ ಜನ್ಯ-ಶಿವರಾಜ್‌ಕುಮಾರ್‌ ಸಿನಿಮಾ ಸೆಟ್‌ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ

ಅರ್ಜುನ್‌ ಜನ್ಯ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 45 ಸಿನಿಮಾ ಸೆಟ್‌ಗೆ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ಭೇಟಿ ನೀಡಿ ಚಿತ್ರತಂಡಕ್ಕೆ ಆಶೀರ್ವಾದ ಮಾಡಿದ್ದಾರೆ.

ಅರ್ಜುನ್‌ ಜನ್ಯ-ಶಿವರಾಜ್‌ಕುಮಾರ್‌ ಸಿನಿಮಾ ಸೆಟ್‌ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ
ಅರ್ಜುನ್‌ ಜನ್ಯ-ಶಿವರಾಜ್‌ಕುಮಾರ್‌ ಸಿನಿಮಾ ಸೆಟ್‌ಗೆ ಸ್ವಾಮೀಜಿ ಭೇಟಿ; 45 ಚಿತ್ರಕ್ಕೆ ಸಿಕ್ತು ಆಧ್ಯಾತ್ಮಿಕ ಗುರುಗಳ ಆಶೀರ್ವಾದ

ಸಿನಿಮಾ ನಟರು, ರಾಜಕೀಯ ಗಣ್ಯರು ಶುಭ ಕಾರ್ಯಗಳನ್ನು ಮಾಡುವಾಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದು ಸಾಮಾನ್ಯ. ಇದೀಗ ಶಿವರಾಜ್‌ಕುಮಾರ್‌ ಅಭಿನಯದ 45 ಸಿನಿಮಾಗೆ ಆಧ್ಯಾತ್ಮಿಕ ಗುರುಗಳ ಆಶೀರ್ವಾದ ದೊರೆತಿದೆ. ಸ್ವತ: ಸ್ವಾಮೀಜಿಗಳೇ ಸಿನಿಮಾ ಸೆಟ್‌ಗೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಕೋರಿ ಬಂದಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಚಿತ್ರೀಕರಣ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. 45 ಸಿನಿಮಾ ಚಿತ್ರೀಕರಣ ಕೂಡಾ ಭರದಿಂದ ಸಾಗಿದೆ. ಸದ್ಯಕ್ಕೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡಾ ನಟಿಸುತ್ತಿದ್ದು ಬಹಳ ವರ್ಷಗಳ ನಂತರ ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಒಂದು ಮೊಟ್ಟೆ ಕಥೆ ಖ್ಯಾತಿ ರಾಜ್‌ ಬಿ ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ. ಈ ಮೂವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಮಯದಲ್ಲಿ ಸಿನಿಮಾ ಸೆಟ್‌ಗೆ ಗುರುಗಳು ಭೇಟಿ ನೀಡಿದ್ದಾರೆ.

ಚಿತ್ರದಲ್ಲೂ ಆಧ್ಯಾತ್ಮಿಕ ಅಂಶಗಳಿವೆ ಎಂದ ನಿರ್ಮಾಪಕ ರಮೇಶ್‌ ರೆಡ್ಡಿ

ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು 45 ಸಿನಿಮಾ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿ ಸ್ವಲ್ಪ ಸಮಯ ಶೂಟಿಂಗ್‌ ವೀಕ್ಷಿಸಿದ್ದಾರೆ. ಗುರುಗಳು ಹರಿಧಾಮ ಸಾಯಿ ಟ್ರಸ್ಟ್‌ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಾ ಬಂದಿದ್ದಾರೆ. 45 ಸಿನಿಮಾದಲ್ಲಿ ಆಧ್ಯಾತ್ಮಕ ಗುರುಗಳಿಗೆ ಸಂಬಂಧಿಸಿದ ಕೆಲವೊಂದು ದೃಶ್ಯಗಳಿದ್ದು ಬಹುಶ: ಅವರೂ ಕೂಡಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರಬಹುದು ಎನ್ನಲಾಗುತ್ತಿದೆ. ಗುರುಗಳು ಸೆಟ್‌ಗೆ ಭೇಟಿ ನೀಡಿದ ಸಮಯದಲ್ಲಿ ಶಿವರಾಜ್‌ಕುಮಾರ್‌, ಪತ್ನಿ ಗೀತಾ, ನಟ ಉಪೇಂದ್ರ, ರಾಜ್‌ ಬಿ ಶೆಟ್ಟಿ, ಸಾಹಸ ನಿರ್ದೇಶಕ ರವಿವರ್ಮ, ಅರ್ಜುನ್‌ ಜನ್ಯ, ನಿರ್ಮಾಪಕ ರಮೇಶ್‌ ರೆಡ್ಡಿ ಸೇರಿದಂತೆ ಚಿತ್ರತಂಡದ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.

ವಿವಿಧ ಭಾಷೆಗಳಲ್ಲಿ ತಯಾರಾಗುತ್ತಿರುವ 45 ಸಿನಿಮಾ

ಕಳೆದ ವರ್ಷ ಏಪ್ರಿಲ್‌ನಲ್ಲಿ 45 ಚಿತ್ರಕ್ಕೆ ಮೈಸೂರಿನಲ್ಲಿ ಮುಹೂರ್ತ ನೆರವೇರಿತ್ತು. ಸಿನಿಮಾ ಅರ್ಜುನ್‌ ಜನ್ಯ ನಿರ್ದೇಶನ ಮಾಡುತ್ತಿರುವುದು ಅಲ್ಲದೆ, ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜನೆ ಕೂಡಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಕಡೆ ಸುಮಾರು 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕನ್ನಡ ಹಾಗೂ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡಾ ಒಬ್ಬರಾಗುತ್ತಾರೆ ಎಂದು ಶಿವರಾಜ್‌ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

mysore-dasara_Entry_Point