ಕನ್ನಡ ಸುದ್ದಿ  /  ಮನರಂಜನೆ  /  ಭಾರತ ವಿಶ್ವಕಪ್‌ ಗೆಲ್ಲುತ್ತಿದ್ದಂತೆ, ಜೈಲಲ್ಲಿರುವ ದರ್ಶನ್‌ಗೆ ಧನ್ಯವಾದ ಹೇಳುತ್ತಿದ್ದಾರೆ ನೆಟ್ಟಿಗರು!; ಕಾರಣ ಕೇಳಿದ್ರೆ ನೀವೂ ಅಚ್ಚರಿಪಡ್ತೀರ

ಭಾರತ ವಿಶ್ವಕಪ್‌ ಗೆಲ್ಲುತ್ತಿದ್ದಂತೆ, ಜೈಲಲ್ಲಿರುವ ದರ್ಶನ್‌ಗೆ ಧನ್ಯವಾದ ಹೇಳುತ್ತಿದ್ದಾರೆ ನೆಟ್ಟಿಗರು!; ಕಾರಣ ಕೇಳಿದ್ರೆ ನೀವೂ ಅಚ್ಚರಿಪಡ್ತೀರ

ದರ್ಶನ್‌ ಜೈಲಿನಲ್ಲಿದ್ದಾರೆ, ಅವರಿಗ್ಯಾಕೆ ನೆಟ್ಟಿಗರು ಧನ್ಯವಾದ ಹೇಳುತ್ತಿದ್ದಾರೆ? ಈ ವಿಚಾರ ಕೊಂಚ ಅಚ್ಚರಿ ಎನಿಸಬಹುದು. ಆದರೆ, ಇದರ ಹಿಂದೆ ಬಲವಾದ ಕಾರಣವೊಂದಿದೆ.

ಭಾರತ ವಿಶ್ವಕಪ್‌ ಗೆಲ್ಲುತ್ತಿದ್ದಂತೆ, ಜೈಲಲ್ಲಿರುವ ದರ್ಶನ್‌ಗೆ ಧನ್ಯವಾದ ಹೇಳುತ್ತಿದ್ದಾರೆ ನೆಟ್ಟಿಗರು!; ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರ
ಭಾರತ ವಿಶ್ವಕಪ್‌ ಗೆಲ್ಲುತ್ತಿದ್ದಂತೆ, ಜೈಲಲ್ಲಿರುವ ದರ್ಶನ್‌ಗೆ ಧನ್ಯವಾದ ಹೇಳುತ್ತಿದ್ದಾರೆ ನೆಟ್ಟಿಗರು!; ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರ

Darshan Thoogudeepa: ಕೊಲೆ ಆರೋಪದಡಿ ನಟ ದರ್ಶನ್‌ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ರವಾನಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾಗಿತ್ತು ಎಂಬ ಗಂಭೀರ ಆರೋಪ ದರ್ಶನ್‌ ಮತ್ತವರ ಸಹಚರರ ಮೇಲಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ನ ಮುಂದಿನ ಆದೇಶದ ವರೆಗೂ ಎಲ್ಲರೂ ಸದ್ಯ ಜೈಲಿನಲ್ಲಿದ್ದಾರೆ. ಈ ನಡುವೆ ದರ್ಶನ್‌ ಅವರ ಆಪ್ತರು ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗಲೇ ಜೈಲು ಸೇರಿರುವ ನಟ ದರ್ಶನ್‌ಗೆ ನೆಟ್ಟಿಗರು ಧನ್ಯವಾದವನ್ನೂ ಹೇಳುತ್ತಿದ್ದಾರೆ!

ದರ್ಶನ್‌ ಜೈಲಿನಲ್ಲಿದ್ದಾರೆ, ಅವರಿಗ್ಯಾಕೆ ನೆಟ್ಟಿಗರು ಧನ್ಯವಾದ ಹೇಳುತ್ತಿದ್ದಾರೆ? ಈ ವಿಚಾರ ಕೊಂಚ ಅಚ್ಚರಿ ಎನಿಸಿದರೂ, ನಿಜವೂ ಹೌದು. ಅಂದರೆ ನೆಟ್ಟಿಗರು ದರ್ಶನ್‌ ಅವರಿಗೆ ಧನ್ಯವಾದ ಹೇಳುವುದಕ್ಕೆ ಕಾರಣ; ಭಾರತ ಈ ಸಲದ ಟಿ20 ವಿಶ್ವಕಪ್‌ ಜಯಿಸಿದ್ದು. ಅರೇ ದರ್ಶನ್‌ ಜೈಲು ಸೇರಿದ್ದಕ್ಕೂ, ಭಾರತ ವಿಶ್ವಕಪ್‌ ಗೆದ್ದಿದ್ದಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ? ಇಲ್ಲಿಯೇ ಇದೆ ನೋಡಿ ಉತ್ತರ.

ಟ್ರೆಂಡಿಂಗ್​ ಸುದ್ದಿ

2011ರ ಏಪ್ರಿಲ್‌ನಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಟೀಮ್‌ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್‌ ಎತ್ತಿ ಹಿಡಿದಿತ್ತು. ಮಹೇಂದ್ರ ಸಿಂಗ್‌ ಧೋನಿ ವಿನ್ನಿಂಗ್‌ ಶಾಟ್‌ ಹೊಡೆಯುವ ಮೂಲಕ ಬಹುಕೋಟಿ ಭಾರತೀಯರ ಕನಸನ್ನು ನನಸು ಮಾಡಿದ್ದರು. ಅದಾಗಿ ಅದೇ 2011ರ ಸೆಪ್ಟಂಬರ್‌ ತಿಂಗಳಲ್ಲಿ ನಟ ದರ್ಶನ್‌, ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು. ಈ ಎರಡು ಘಟನೆಗಳು ನಡೆದಿದ್ದು 2011ರಲ್ಲಿ ಎಂಬ ಕಾರಣಕ್ಕೆ ನೆಟ್ಟಿಗರು ಇದೀಗ ದರ್ಶನ್‌ಗೆ ಧನ್ಯವಾದ ಹೇಳುತ್ತಿದ್ದಾರೆ.

2011ರಲ್ಲಿ ದರ್ಶನ್‌ ಜೈಲು ಪಾಲಾಗಿದ್ದರು. ಅದೇ ವರ್ಷ ಭಾರತ ಏಕದಿನ ವಿಶ್ವಕಪ್‌ ಎತ್ತಿಹಿಡಿಯಿತು. ಇದೀಗ ಅದೇ ದರ್ಶನ್‌ ಕೊಲೆ ಆರೋಪದಲ್ಲಿ ಮತ್ತೆ ಜೈಲು ಸೇರಿದ್ದಾರೆ. ದರ್ಶನ್‌ ಜೈಲಿನಲ್ಲಿರುವಾಗಲೇ ಈ ಸಲದ ಟಿ20 ವಿಶ್ವಕಪ್‌ ಪಂದ್ಯವನ್ನೂ ಭಾರತ ಗೆದ್ದಿದೆ. ಆ ಒಂದು ಕಾರಣಕ್ಕೆ ದರ್ಶನ್‌ ಜೈಲಿನಲ್ಲಿರುವುದಕ್ಕೇ ಭಾರತ ಮತ್ತೊಂದು ವಿಶ್ವಕಪ್‌ ಗೆದ್ದಿದೆ ಎನ್ನುತ್ತ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ ನೆಟ್ಟಿಗರು.

ಭಾರತಕ್ಕೆ ಎರಡನೇ ಟಿ20 ವಿಶ್ವಕಪ್‌

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಲದಿಂದ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಅದ್ಭುತ ಪ್ರದರ್ಶನ ನೀಡಿದರು. ಬಳಿಕ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಸೋಲನಭವಿಸಿತು.