ಕನ್ನಡ ಸುದ್ದಿ  /  ಮನರಂಜನೆ  /  ಶಿವರಾಜ್‌ ಕುಮಾರ್‌ಗೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಆಕ್ಷನ್‌ ಕಟ್‌, ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಶಿವಣ್ಣ ಹೀರೋ

ಶಿವರಾಜ್‌ ಕುಮಾರ್‌ಗೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಆಕ್ಷನ್‌ ಕಟ್‌, ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಶಿವಣ್ಣ ಹೀರೋ

ಶಿವಣ್ಣನಿಗೆ ಆಕ್ಷನ್‌ ಕಟ್‌ ಹೇಳುವ ತೆಲುಗು ನಿರ್ದೇಶಕ ಯಾರು? ತೆಲುಗು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಅವರು ಶಿವರಾಜ್‌ ಕುಮಾರ್‌ ಸಿನಿಮಾಕ್ಕೆ ಡೈರೆಕ್ಷನ್‌ ಮಾಡಲಿದ್ದಾರೆ. ಈಗಾಗಲೇ ತಮಿಳಿನ ವಿಕ್ರಂ ಪ್ರಭು ನಟನೆಯ ಪಾಯಂ ಒಲಿ ನೀ ಎನಕ್ಕು ಎಂಬ ಸಿನಿಮಾ ಡೈರೆಕ್ಷನ್‌ ಮಾಡಿರುವ ಕಾರ್ತಿಕ್‌ ಇದೀಗ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ.

ಶಿವರಾಜ್‌ ಕುಮಾರ್‌ಗೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಆಕ್ಷನ್‌ ಕಟ್‌
ಶಿವರಾಜ್‌ ಕುಮಾರ್‌ಗೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಆಕ್ಷನ್‌ ಕಟ್‌

ಬೆಂಗಳೂರು: ಕನ್ನಡದ ಹ್ಯಾಟ್ರಿಕ್‌ ಶಿವರಾಜ್‌ ಕುಮಾರ್‌ ನಟನೆಯ ಉತ್ತರಕಾಂಡ ಸಿನಿಮಾಕ್ಕಾಗಿ ಎಲ್ಲರೂ ಎದಿರುನೋಡುತ್ತಿದ್ದಾರೆ. ಇದೇ ಸಮಯದಲ್ಲಿ ಶಿವಣ್ಣ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಶಿವರಾಜ್‌ ಕುಮಾರ್‌ ಅವರ ಮುಂದಿನ ಚಿತ್ರವೊಂದಕ್ಕೆ ತೆಲುಗು ಡೈರೆಕ್ಟರ್‌ವೊಬ್ಬರು ಆಕ್ಷನ್‌ ಕಟ್‌ ಹೇಳುತ್ತಿರುವುದು ವಿಶೇಷ. ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಬರ್ತ್‌ಡೇ ಪ್ರಯುಕ್ತ ಚಿತ್ರತಂಡವು ಹೊಸ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಶಿವಣ್ಣ ಮುಂದಿನ ಚಿತ್ರದ ಕುರಿತು ಸುಳಿವು ನೀಡಿದೆ.

ಶಿವಣ್ಣನಿಗೆ ಆಕ್ಷನ್‌ ಕಟ್‌ ಹೇಳುವ ತೆಲುಗು ನಿರ್ದೇಶಕ ಯಾರು?

ತೆಲುಗು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಅವರು ಶಿವರಾಜ್‌ ಕುಮಾರ್‌ ಸಿನಿಮಾಕ್ಕೆ ಡೈರೆಕ್ಷನ್‌ ಮಾಡಲಿದ್ದಾರೆ. ಈಗಾಗಲೇ ತಮಿಳಿನ ವಿಕ್ರಂ ಪ್ರಭು ನಟನೆಯ ಪಾಯಂ ಒಲಿ ನೀ ಎನಕ್ಕು ಎಂಬ ಸಿನಿಮಾ ಡೈರೆಕ್ಷನ್‌ ಮಾಡಿರುವ ಕಾರ್ತಿಕ್‌ ಇದೀಗ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ.

ಪ್ರೊಡಕ್ಷನ್‌ 01

ಸದ್ಯ ಈ ಚಿತ್ರದ ಹೆಸರು ಬಹಿರಂಗವಾಗಿಲ್ಲ. ಇದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿರಲಿದೆ. ಪೋಸ್ಟರ್‌ ಗಮನಿಸಿದರೆ ಶಿವರಾಜ್‌ ಕುಮಾರ್‌ ಭಿನ್ನ ಗೆಟಪ್‌ನಲ್ಲಿ ಕಾಣಿಸುತ್ತಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮುಗಿದಿದೆಯಂತೆ. ಸಂಗೀತಕ್ಕೆ ಸಂಬಂಧಪಟ್ಟ ಕೆಲಸಗಳು ನಡೆಯುತ್ತಿದ್ದು, ಇದೇ ಆಗಸ್ಟ್‌ ತಿಂಗಳಲ್ಲಿ ಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ನಡೆಸುವ ಯೋಜನೆಯಲ್ಲಿ ಚಿತ್ರತಂಡ ಇದೆ.

ಟ್ರೆಂಡಿಂಗ್​ ಸುದ್ದಿ

ಇದು ಬಹುಭಾಷಾ ಸಿನಿಮಾ

ಶಿವರಾಜ್‌ ಕುಮಾರ್‌ ನಟನೆಯ ಇನ್ನೂ ಹೆಸರಿಡದ ಈ ಪ್ರೊಡಕ್ಷನ್‌ 01 ಚಿತ್ರವು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಇನ್ನೂ ಹಲವು ಪ್ರಮುಖ ಕಲಾವಿದರು, ವಿವಿಧ ಭಾಷೆಯ ನಟರು ನಟಿಸುವ ಸೂಚನೆಯಿದೆ.

ಶಿವರಾಜ್‌ ಕುಮಾರ್‌ ಮುಂಬರುವ ಚಿತ್ರಗಳು

ಭೈರವ ರಣಗಲ್‌ ಮತ್ತು ಉತ್ತರಾಕಾಂಡ ಎಂಬೆರಡು ಸಿನಿಮಾಗಳು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭೈರವ ರಣಗಲ್‌ ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಈ ಸಿನಿಮಾ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದೆ. ಉತ್ತರಕಾಂಡ ಸಿನಿಮಾದ ಶೂಟಿಂಗ್‌ ಕೂಡ ನಡೆಯುತ್ತಿದೆ. ಇತ್ತೀಚೆಗೆ ಗೀತಾ ಶಿವರಾಜ್‌ ಕುಮಾರ್‌ ಚುನಾವಣಾ ಪ್ರಚಾರದಲ್ಲಿ ಶಿವಣ್ಣ ಬಿಝಿಯಾಗಿದ್ದರು. ಇದರಿಂದ ಶೂಟಿಂಗ್‌ ಕೊಂಚ ವಿಳಂಬವಾಗಿದೆ ಎನ್ನಲಾಗಿದೆ.

ಶಿವಣ್ಣನ ಸಿನಿಮಾಗಳು

ಶಿವರಾಜ್‌ ಕುಮಾರ್‌ ನಟನೆಯ ಕರಟಕ ಧಮನಕ, ಕ್ಯಾಪ್ಟನ್‌ ಮಿಲ್ಲರ್‌, ಘೋಸ್ಟ್‌, ಜೈಲರ್‌ ಇತ್ತೀಚಿನ ತಿಂಗಳುಗಳಲ್ಲಿ ಬಿಡುಗಡೆಯಾಗಿತ್ತು. ಇದಕ್ಕೂ ಮೊದಲು ಕಬ್ಜಾ, ವೇಧಾ, ಭೈರಾಗಿ, ಜೇಮಸ್‌, ಭಜರಂಗಿ 2, ದ್ರೋಣ, ಆಯುಷ್ಮಾನ್‌ ಭವ, ದಿ ವಿಲನ್‌, ಟಗರು, ಮುಫ್ತಿ, ಮಾಸ್‌ ಲೀಡರ್‌, ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯ, ಗೌತಮಿ ಪುತ್ರ ಸತಕರ್ಣಿ, ಶ್ರೀಕಂಠ, ಸಂತೆಯಲ್ಲಿ ನಿಂತ ಕಬೀರಾ, ಶಿವಲಿಂಗ, ಕಿಲ್ಲಿಂಗ್‌ ವೀರಪ್ಪನ್‌, ವಜ್ರಕಾಯ, ಭಜರಂಗಿ, ಕಡ್ಡಿಪುಡಿ, ಅಂಧರ್‌ ಬಹರ್‌, ಲಕ್ಷ್ಮಿ, ಶಿವ, ಜೋಗಯ್ಯ, ಮೈಲಾರಿ, ಚೆಲುವೆಯೇ ನಿನ್ನೆ ನೋಡಲು, ಸುಗ್ರೀವ, ದೇವರು ಕೊಟ್ಟ ತಂಗಿ, ಭಾಗ್ಯದ ಬಳೆಗಾರ, ಹ್ಯಾಟ್ರಿಕ್‌ ಹೊಡಿ ಮಗ, ನಂದ, ಪರಮೇಶ ಪಾನ್‌ವಾಲ, ಮಾದೇಶ, ಬಂಧು ಬಳಗ, ಸತ್ಯ ಇನ್‌ ಲವ್‌, ಲವಕುಶ, ಗಂಡನ ಮನೆ, ಸಂತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.