KGF Vs Rangastalam: ಕೆಜಿಎಫ್‌ ವರ್ಸಸ್‌ ರಂಗಸ್ಥಲಂ; ಯಶ್‌, ರಾಮ್‌ಚರಣ್‌ ಇವರಿಬ್ಬರಲ್ಲಿ ಜಪಾನ್‌ ಜನ ಕೈಹಿಡಿದಿದ್ದು ಯಾರನ್ನು?
ಕನ್ನಡ ಸುದ್ದಿ  /  ಮನರಂಜನೆ  /  Kgf Vs Rangastalam: ಕೆಜಿಎಫ್‌ ವರ್ಸಸ್‌ ರಂಗಸ್ಥಲಂ; ಯಶ್‌, ರಾಮ್‌ಚರಣ್‌ ಇವರಿಬ್ಬರಲ್ಲಿ ಜಪಾನ್‌ ಜನ ಕೈಹಿಡಿದಿದ್ದು ಯಾರನ್ನು?

KGF Vs Rangastalam: ಕೆಜಿಎಫ್‌ ವರ್ಸಸ್‌ ರಂಗಸ್ಥಲಂ; ಯಶ್‌, ರಾಮ್‌ಚರಣ್‌ ಇವರಿಬ್ಬರಲ್ಲಿ ಜಪಾನ್‌ ಜನ ಕೈಹಿಡಿದಿದ್ದು ಯಾರನ್ನು?

ಜಪಾನ್‌ನಲ್ಲಿ ಭಾರತೀಯ ಸಿನಿಮಾರಂಗದ ಎರಡು ಯಶಸ್ವಿ ಸಿನಿಮಾಗಳು ಮುಖಾಮುಖಿಯಾಗಿವೆ. ರಾಮ್‌ಚರಣ್‌ ನಟನೆಯ ರಂಗಸ್ಥಲಂ ಮತ್ತು ಯಶ್‌ ಅಭಿನಯದ ಕೆಜಿಎಫ್‌ ಸರಣಿ. ಈ ಎರಡು ಸಿನಿಮಾಗಳಲ್ಲಿ ಜಪಾನಿಗರ ಬಹುಮತ ಸಿಕ್ಕಿದ್ದು ಯಾರಿಗೆ?

ಕೆಜಿಎಫ್‌ ವರ್ಸಸ್‌ ರಂಗಸ್ಥಲಂ; ಯಶ್‌, ರಾಮ್‌ಚರಣ್‌ ಇವರಿಬ್ಬರಲ್ಲಿ ಜಪಾನ್‌ ಜನ ಕೈಹಿಡಿದಿದ್ದು ಯಾರನ್ನು?
ಕೆಜಿಎಫ್‌ ವರ್ಸಸ್‌ ರಂಗಸ್ಥಲಂ; ಯಶ್‌, ರಾಮ್‌ಚರಣ್‌ ಇವರಿಬ್ಬರಲ್ಲಿ ಜಪಾನ್‌ ಜನ ಕೈಹಿಡಿದಿದ್ದು ಯಾರನ್ನು?

KGF Vs Rangastalam: ಕನ್ನಡಿಗರು ಖುಷಿಪಡುವ ಮತ್ತು ಹೆಮ್ಮೆ ಪಡುವ ವಿಚಾರ ಏನೆಂದರೆ, ದೂರದ ಜಪಾನ್‌ನಲ್ಲಿ ಕನ್ನಡದ ಸಿನಿಮಾ ಕೆಜಿಎಫ್‌ ಎರಡೂ ಪಾರ್ಟ್‌ ಬಿಡುಗಡೆ ಆಗಿದೆ. ಮೊನ್ನೆ ಶುಕ್ರವಾರ (ಜುಲೈ 14) ಜಪಾನ್‌ ದೇಶದ ಹಲವು ನೂರಾರು ಸ್ಕ್ರೀನ್‌ಗಳಲ್ಲಿ ಕೆಜಿಎಫ್‌ ಮೊದಲ ಮತ್ತು ಚಾಪ್ಟರ್‌ 2 ಸಿನಿಮಾ ರಿಲೀಸ್‌ ಆಗಿ ಮೆಚ್ಚುಗೆ ಪಡೆದಿದೆ. ಇದರ ಜತೆಗೆ ತೆಲುಗಿನ ರಾಮ್‌ಚರಣ್‌ ತೇಜ ನಟನೆಯ ರಂಗಸ್ಥಲಂ ಸಿನಿಮಾ ಸಹ ಅದೇ ದಿನ ರಿಲೀಸ್‌ ಆಗಿದೆ. ಆ ಚಿತ್ರಕ್ಕೂ ಜಪಾನಿಗರಿಂದ ಬಹುಪರಾಕ್‌ ಸಿಕ್ಕಿದೆ. ಹಾಗಾದರೆ ಈ ಸಿನಿಮಾಗಳ ಪೈಕಿ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದು ಬೀಗಿದ್ಯಾರು?

ರಾಮ್‌ಚರಣ್‌ ತೇಜ ಮತ್ತು ಸಮಂತಾ ಅಭಿನಯದ ರಂಗಸ್ಥಲಂ ಸಿನಿಮಾ ಭಾರತದಲ್ಲಿ ಸೂಪರ್‌ ಹಿಟ್‌ ಆದ ಸಿನಿಮಾ ಸಾಲಿನಲ್ಲಿದೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಈ ಸಿನಿಮಾ ಕಮಾಲ್‌ ಮಾಡಿದ್ದು ಗೊತ್ತಿರುವ ವಿಚಾರ. ಅದೇ ರೀತಿ ಕೆಜಿಎಫ್‌ 2 ಸಿನಿಮಾ ಬಗ್ಗೆಯೂ ಹೆಚ್ಚು ಹೇಳಲು ಏನೂ ಉಳಿದಿಲ್ಲ. ಆದರೆ, ಕೆಜಿಎಫ್‌ ಸಿನಿಮಾ ಪ್ಯಾನ್‌ ಇಂಡಿಯಾ ಬಿಡುಗಡೆಯಾಗಿ ದೇಶವ್ಯಾಪಿ ಸದ್ದು ಮಾಡಿತು. ರಂಗಸ್ಥಲಂ ಸೌತ್‌ನ ಹಲವು ಭಾಷೆಗಳಿಗೆ ಡಬ್‌ ಆಗಿ ರಿಲೀಸ್‌ ಆಗಿತ್ತು. ಇದೀಗ ಈ ಎರಡೂ ಸಿನಿಮಾಗಳು ಜಪಾನ್‌ ಬಾಕ್ಸ್‌ ಆಫೀಸ್‌ನಲ್ಲಿ ಮುಖಾಮುಖಿಯಾಗಿವೆ.

ಕೆಜಿಎಫ್‌ ವರ್ಸಸ್‌ ರಂಗಸ್ಥಲಂ

ಭಾರತದಲ್ಲಿ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಬರೋಬ್ಬರಿ 1200 ಕೋಟಿ ಪ್ಲಸ್‌ ಗಳಿಕೆ ಕಂಡಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾಕ್ಕೆ ಇಡೀ ದೇಶದ ಸಿನಿಮಾ ಮಂದಿ ಫಿದಾ ಆಗಿದ್ದರು. ಅದರ ಪಾಪ್ಯುಲಾರಿಟಿ ಆಧಾರದ ಮೇಲೆಯೇ ಜಪಾನ್‌ನಲ್ಲಿಯೂ ರಿಲೀಸ್‌ ಆಗಿದೆ. ಕೆಜಿಎಫ್‌ ಚಾಪ್ಟರ್‌ 1 ಮತ್ತು ಚಾಪ್ಟರ್‌ 2 ತೆರೆಕಂಡಿದೆ. ಈ ನಡುವೆ ಈ ಸಿನಿಮಾಕ್ಕೆ ಜಪಾನ್‌ ನಾಡಲ್ಲಿ ಸ್ಪರ್ಧೆಯೊಡ್ಡಿದ್ದು 2018ರಲ್ಲಿ ಬಿಡುಗಡೆ ಆಗಿದ್ದ ರಾಮ್‌ಚರಣ್‌ ಅಭಿನಯದ ರಂಗಸ್ಥಲಂ ಸಿನಿಮಾ. ಈಗ ಈ ಎರಡೂ ಸಿನಿಮಾಗಳ ಪೈಕಿ ಜಪಾನ್‌ನಲ್ಲಿ ಗೆದ್ದು ಬೀಗಿದ್ದು ಮಾತ್ರ ರಂಗಸ್ಥಲಂ!

ಆರ್‌ಆರ್‌ಆರ್‌ ಕ್ರೇಜ್‌ಗೆ ಗೆದ್ದ ರಂಗಸ್ಥಲಂ

'ರಂಗಸ್ಥಲಂ' ಚಿತ್ರದಲ್ಲಿ ಚಿಟ್ಟಿ ಬಾಬು ಪಾತ್ರದಲ್ಲಿ ರಾಮ್‌ಚರಣ್‌ ಗಮನಸೆಳೆದಿದ್ದರು. ಇದೀಗ ಚಿಟ್ಟಿಬಾಬು ಜಪಾನ್ ಪ್ರೇಕ್ಷಕರನ್ನೂ ಆಕರ್ಷಿಸುತ್ತಿದ್ದಾನೆ. ಅದಕ್ಕೆ ಕಾರಣ; ಆರ್‌ಆರ್‌ಆರ್‌ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಕೆಲ ತಿಂಗಳ ಹಿಂದಷ್ಟೇ ಜಪಾನ್‌ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ ಅಲ್ಲಿನ ಸಿನಿಮಾ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಆರ್‌ಆರ್‌ಆರ್‌ ಕ್ರೇಜ್‌ ಅನ್ನೇ ಎನ್‌ಕ್ಯಾಶ್‌ ಮಾಡಿಕೊಂಡ ನಿರ್ಮಾಪಕರು ರಂಗಸ್ಥಲಂ ಸಿನಿಮಾ ಜಪಾನ್‌ನಲ್ಲಿ ರಿಲೀಸ್‌ ಮಾಡಿದ್ದರು. ಈ ಎರಡು ಸಿನಿಮಾಗಳ ಪೈಕಿ ಕಲೆಕ್ಷನ್‌ ವಿಚಾರದಲ್ಲಿ ರಂಗಸ್ಥಲಂ ಸಿನಿಮಾ ಗೆದ್ದಿದೆ ಎಂದು ತೆಲುಗಿನ ಕೆಲ ವೆಬ್‌ಸೈಟ್‌ಗಳು ವರದಿ ಮಾಡಿವೆ. ಕಲೆಕ್ಷನ್‌ ಅಂಕಿ ಅಂಶ ಇನ್ನಷ್ಟೇ ಹೊರಬರಬೇಕಿದೆ.

Whats_app_banner