ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಹೀಗಿದೆ ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್‌
ಕನ್ನಡ ಸುದ್ದಿ  /  ಮನರಂಜನೆ  /  ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಹೀಗಿದೆ ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್‌

ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಹೀಗಿದೆ ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್‌

ಆಗಸ್ಟ್‌ 10 ಮತ್ತು 11ರಂದು ನಿರ್ದೇಶಕ ತರುಣ್‌ ಸುಧೀರ್‌ ಮತ್ತು ನಟಿ ಸೋನಲ್‌ ಮೊಂತೆರೋ ಜೋಡಿ ಬಾಳ ಬಂಧನಕ್ಕೆ ಬಲಗಾಲಿಡಲಿದೆ. ಈಗಾಗಲೇ ತಯಾರಿ ನಡೆದಿದ್ದು, ಈ ಜೋಡಿಯ ಲಗ್ನ ಪತ್ರಿಕೆ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಷ್ಟಕ್ಕೂ ಅಂಥದ್ದೇನಿದೆ? ಇಲ್ಲಿದೆ ವಿವರ.

ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಹೀಗಿದೆ ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್‌
ತರುಣ್ ಸುಧೀರ್‌-‌ ಸೋನಲ್‌ ಲಗ್ನ ಪತ್ರಿಕೆಯನ್ನು ಮಣ್ಣಲ್ಲಿ ಹೂತರೆ ಹೂವಿನ ಗಿಡ ಹುಟ್ಟುತ್ತೆ! ಹೀಗಿದೆ ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್‌

Tharun Sudhir Sonal wedding: ನಟ, ನಿರ್ದೇಶಕ ತರುಣ್‌ ಸುಧೀರ್‌, ಒಂಟಿ ಲೈಫ್‌ಗೆ ಗುಡ್‌ಬೈ ಹೇಳಿ ಜಂಟಿಯಾಗಲು ಹೊರಟಿದ್ದಾರೆ. ಅದರಂತೆ, ಇನ್ನೇನು ಕೆಲವೇ ದಿನಗಳಲ್ಲಿ ನಟಿ ಸೋನಲ್‌ ಮೊಂತೆರೋ ಅವರ ಜತೆಗೆ ಬಾಳ ಬಂಧನಕ್ಕೆ ಬಲಗಾಲಿಡಿದ್ದಾರೆ. ಈಗಾಗಲೇ ಮದುವೆಯ ದಿನಾಂಕ ನಿಗದಿಯಾಗಿದ್ದು, ಲಗ್ನ ಪತ್ರಿಕೆಗಳೂ ಪ್ರಿಂಟ್‌ ಆಗಿವೆ. ಆಮಂತ್ರಣವನ್ನೂ ನೀಡುತ್ತಿದೆ ಈ ಜೋಡಿ. ಆದರೆ, ಲಗ್ನ ಪತ್ನಿಕೆ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ ತರುಣ್‌ ಸುಧೀರ್.‌ ಏನದು? ತರುಣ್‌ ಸುಧೀರ್-‌ ಸೋನಲ್‌ ಮೊಂತೆರೋ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹೂತರೆ, ಅದು ಹೂವಿನ ಗಿಡವಾಗಿ ನಿಮಗೆ ಹೂವು ನೀಡುತ್ತೆ!

ಹೌದು, ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ಕೊಟ್ಟು ತಮ್ಮ ಮದುವೆಗೆ ಬನ್ನಿ ಎಂದು ಆಹ್ವಾನ ನೀಡುತ್ತಿದೆ. ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲಾನ್ ಮಾಡಿ ಪ್ರೇಕ್ಷಕರನ್ನು ಖುಷಿ ಪಡಿಸುವ ನಿರ್ದೇಶಕ ತರುಣ್, ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನೂ ಸೂಪರ್ ಆಗಿಯೇ ಪ್ಲಾನ್ ಮಾಡಿದ್ದಾರೆ.

ಸೀಡ್‌ ಬಾಲ್‌ ಮೂಲಕ ಪರಿಸರ ಕಾಳಜಿ

ಸಾಮಾನ್ಯವಾಗಿ ಸೆಲಬ್ರೆಟಿಗಳು ಲಗ್ನ ಪತ್ರಿಕೆ ಜತೆ ಒಂದು ಗಿಡಕೊಟ್ಟು ತಮ್ಮ ವಿವಾಹಕ್ಕೆ ಕರೆಯುವುದು ಸಹಜ. ಆದರೆ ತರುಣ್ ಸುಧೀರ್ ಮತ್ತು ಸೋನಾಲ್ ತಮ್ಮ ವಿವಾಹ ಪತ್ರಿಕೆಯನ್ನು ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ. ತರುಣ್ ನೀಡುತ್ತಿರುವ ಈ ಆಮಂತ್ರಣದಲ್ಲಿ ಮದುವೆ ವಿವರದ ಹಾಳೆ, ಒಂದು ಖಾಲಿ ಪುಸ್ತಕ, ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ.

ಲಗ್ನ ಪತ್ರಿಕೆ ಹೂತರೆ ಸಸಿಯಾಗುತ್ತೆ..

ಮದುವೆ ಮುಗಿದ ನಂತರ ಪತ್ರಿಕೆಯನ್ನು ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ. ಏಕೆಂದರೆ ಲಗ್ನ ಪತ್ರಿಕೆಯನ್ನು ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆತೆ ಗಿಡವಾಗಿ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತ್ರ ಅದು ಮಣ್ಣು ಸೇರಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿ ರೂಪಿಸಿದೆ ಈ ಜೋಡಿ.

ಮದುವೆ ಯಾವಾಗ, ಎಲ್ಲಿ?

ಆಗಸ್ಟ್ 10ರಂದು ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ. ಈಗಾಗಲೇ ಮದುವೆ ಹಿನ್ನೆಲೆಯಲ್ಲಿ ಸಕಲ ಸಿದ್ದತೆಗಳು ಶುರುವಾಗಿವೆ. ಬೆಂಗಳೂರಿನ ಮೈಸೂರು ರಸ್ತೆ, ಆರ್‌ವಿ ಕಾಲೇಜ್‌ ಬಳಿಯ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನೆರವೇರಲಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿ ಆಗಲಿದೆ.

Whats_app_banner