ರಮ್ಯಾ ಮೇಲೆ ಕೇಸ್ ದಾಖಲಿಸಲು ಬಯಸಿದ ದೂದ್‌ಪೇಡ ದಿಗಂತ್; ಮೋಹಕತಾರೆ ಮೇಲೇಕೆ ದಿ ಜಡ್ಜ್‌ಮೆಂಟ್ ಸಿನಿಮಾ ನಟನಿಗೆ ಮುನಿಸು
The Judgement Kannada Movie: ದೂದ್‌ಪೇಡ ದಿಗಂತ್ ನಟನೆಯ ದಿ ಜಡ್ಜ್‌ಮೆಂಟ್ ಸಿನಿಮಾ ಈ ವಾರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ನಾನು ನಿಜ ಜೀವನದಲ್ಲಿ ವಕೀಲನಾಗಿದ್ದರೆ ಮೋಹಕತಾರೆ ರಮ್ಯಾ ಮೇಲೆ ಕೇಸ್ ಹಾಕ್ತಿದ್ದೆ" ಎಂದು ಹೇಳಿದ್ದಾರೆ.
ಬೆಂಗಳೂರು: ದಿಗಂತ್ ನಟನೆಯ ದಿ ಜಡ್ಜ್‌ಮೆಂಟ್ ಸಿನಿಮಾ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲೆಡೆ ಐಪಿಎಲ್ ಫೈನಲ್‌ನ ಹವಾ ತುಂಬಿರುವ ಸಮಯದಲ್ಲಿ ದೂದ್‌ಪೇಡ ದಿಗಂತ ನಟನೆಯ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ದಿಗಂತ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. "ನಿಜ ಜೀವನದಲ್ಲಿ ನೀವು ಲಾಯರ್ ಆಗಿದ್ದರೆ ಯಾರ ಮೇಲೆ ಕೇಸ್ ಹಾಕ್ತಾ ಇದ್ದೀರಿ?" ಎಂಬ ಗೌರೀಶ್ ಅಕ್ಕಿ ಪ್ರಶ್ನೆಗೆ "ಮೋಹಕತಾರೆ ರಮ್ಯಾರ ಮೇಲೆ" ಎಂದು ದಿಗಂತ್ ಉತ್ತರಿಸಿದ್ದಾರೆ.
ದಿ ಜಡ್ಜ್‌ಮೆಂಟ್ ಪ್ರಚಾರದಲ್ಲಿ ದಿಗಂತ್
ಕನ್ನಡದ ಸಿನಿಮಾ ದಿ ಜಡ್ಜ್‌ಮೆಂಟ್ ಪ್ರಚಾರ ನಿಮಿತ್ತ ದಿಗಂತ್ ಅವರು ಗೌರೀಶ್ ಅಕ್ಕಿ ಸ್ಟುಡಿಯೋಗೆ ಸಂದರ್ಶನ ನೀಡಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮತ್ತು ಮೇಘನಾ ಗಾಂವ್ಕರ್ ನಟಿಸಿದ್ದಾರೆ. ನೀವು ನಿಜ ಜೀವನದಲ್ಲಿ ಲಾಯರ್ ಆಗಿದ್ದರೆ ಯಾರ ಮೇಲೆ ಕೇಸ್ ಹಾಕ್ತಾ ಇದ್ದೀರಿ? ಎಂಬ ಪ್ರಶ್ನೆಗೆ ನಾನು ರಮ್ಯಾ ಅವರ ಮೇಲೆ ಕೇಸ್ ಹಾಕ್ತಾ ಇದ್ದೆ ಎಂದಿದ್ದಾರೆ. ಯಾಕೆ ಕಾಂಗ್ರೆಸ್ ಬಿಟ್ರಿ, ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ರೆಸ್ಪಾನ್ಸಿಬಿಲಿಟಿ ಯಾಕೆ ಬಿಟ್ರಿ ಎಂದು ಕೇಳ್ತಾ ಇದ್ದೆ ಎಂದಿದ್ದಾರೆ. "ಜನರಿಗೆ ಅವರ ಮೇಲೆ ಒಂದು ಹೋಪ್ಸ್ ಇತ್ತು. ಅದಕ್ಕೆ ಅವರನ್ನು ಕೇಳ್ತಾ ಇದ್ದೆ" ಎಂದು ಅವರು ಹೇಳಿದ್ದಾರೆ.
ಐಂದ್ರಿತಾ ರೇಗೆ ಬೈಕ್ ಕಲಿಸಲು ಪ್ರಯತ್ನಿಸಿದೆ
ನಟಿ ಐಂದಿತ್ರಾ ರೇಗೆ ಬೈಕ್ ಕಲಿಸಲು ಪ್ರಯತ್ನಿಸಿದೆ. ಆಗಲಿಲ್ಲ. ಬೆಂಗಳೂರು ಟ್ರಾಫಿಕ್‌ನಲ್ಲಿ ಕಷ್ಟ ಎಂದು ದಿಗಂತ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೇಘನಾ ಗಾಂವ್ಕರ್ ಕೂಡ ನನಗೂ ಬೈಕ್ ಅಂದ್ರೆ ಭಯ ಎಂದಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಅವರು ರವಿಚಂದ್ರನ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. "ನನಗೆ ಅವರ ಜತೆ ಪತ್ನಿ ಪಾತ್ರಕ್ಕಿಂತ ಗರ್ಲ್‌ಫ್ರೆಂಡ್ ಪಾತ್ರ ಸಿಕ್ಕರೆ ಚೆನ್ನಾಗಿತ್ತು ಅನಿಸುತ್ತೆ. ರವಿ ಸರ್ ಚಾರ್ಮ್ ಎಲ್ಲರಿಗೂ ಗೊತ್ತು. ನನಗೆ ಆಫರ್ ಬಂದಾಗ ಈ ಪಾತ್ರಕ್ಕೆ ನಾನು ಸೂಟ್ ಆಗ್ತೀನಾ ಅನಿಸಿತ್ತು. ಅವರ ಜತೆ ಅವಕೆಲವು ದಿನಗಳ ಶೂಟಿಂಗ್ ಮಾತ್ರ ಇತ್ತು. ಅವರು ಶೂಟಿಂಗ್‌ನಲ್ಲಿ ಅದ್ಭುತ ಗೆಳೆಯನಂತೆ ಇದ್ರು. ಅವರ ಜತೆ ಕುಳಿತಾಗ ಅವರು ನಮ್ಮ ಮಾತು ಕೇಳುತ್ತಿದ್ದರು. ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಅವರ ಜತೆ ನಟಿಸಿದ್ದು ಒಳ್ಳೆಯ ಅನುಭವ. ಅವರ ಜತೆ ಇನ್ನೊಂದು ಸಿನಿಮಾ ಮಾಡಬೇಕೆಂಬ ಆಸೆ ಹುಟ್ಟಿತು" ಎಂದು ಮೇಘನಾ ಗಾಂವ್ಕರ್ ಹೇಳಿದ್ದಾರೆ.
ರವಿಚಂದ್ರನ್ ಸಿನಿಮಾ ಪ್ರೀತಿ
"ನನಗೆ ರವಿಚಂದ್ರನ್ ಸರ್ ಚೈಲ್ಡ್‌ವುಡ್ ಹೀರೋ. ಈ ಸಿನಿಮಾದ ಆಫರ್ ಬಂದಾಗ ರವಿ ಸರ್ ಇದ್ದಾರೆ ಎಂದಾಗ ಒಪ್ಪಿಕೊಂಡೆ. ಬಳಿಕ ನನ್ನ ಕಥೆ ಹೇಳಿದೆ. ನನ್ನ ಕಥೆ ಕೇಳಿದ ಬಳಿಕ ನನ್ನ ಪಾತ್ರ ಇಷ್ಟವಾಯಿತು. ಅನಿಲ್ ಕ್ಯಾರೆಕ್ಟರ್ ಕುತೂಹಲಕಾರಿಯಾಗಿದೆ. ಹೀಗಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದ್ದೆ. ಆ ಪಾತ್ರ ನೋಡಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಉತ್ತರಕಾಂಡದಲ್ಲಿ ನನಗೆ ಪ್ರಮುಖ ಪಾತ್ರ ದೊರಕಿತು. ಈ ಸಿನಿಮಾದಲ್ಲಿ ರವಿಚಂದ್ರನ್ ಮುಖ್ಯಪಾತ್ರ. ನನಗೆ ರವಿಚಂದ್ರನ್ ಜತೆ ಮೊದಲ ನಟನೆ ಇದು. ಈ ಸಿನಿಮಾದಲ್ಲಿ ಜತೆಗೆ ನಟಿಸಿದೆವು. ಅವರ ಜತೆ ಕೂತ್ರೆ ನಗಿಸ್ತಾ ಇರ್ತಾರೆ. ಅವರು ಸಿನಿಮಾವನ್ನು ತುಂಬಾ ಇಷ್ಟಪಡ್ತಾರೆ. ಅವರ ಪ್ಯಾಷನ್ ನನಗೆ ಇಷ್ಟವಾಯ್ತು. ಸಿನಿಮಾವನ್ನು ಅವರು ತುಂಬಾ ಪ್ರೀತಿ ಮಾಡ್ತಾರೆ" ಎಂದು ದಿಗಂತ್ ಶೂಟಿಂಗ್ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಹೀಗೆ, ಗೌರೀಶ್ ಅಕ್ಕಿ ಚಾನೆಲ್‌ನಲ್ಲಿ ಸಾಕಷ್ಟು ವಿಚಾರಗಳ ಕುರಿತು ದಿಗಂತ್ ಮತ್ತು ಮೇಘನಾ ಗಾಂವ್ಕರ್ ಮಾತನಾಡಿದ್ದಾರೆ.