ಕನ್ನಡ ಸುದ್ದಿ  /  Entertainment  /  Sandalwood News There Is No Plan To Do A Movie With Rakshit Shetty Says Producer Pushkara Mallikarjunaiah Mnk

‘ರಕ್ಷಿತ್‌ ಶೆಟ್ಟಿಗೆ ಈಗ ನನ್ನ ಅನಿವಾರ್ಯತೆ ಇಲ್ಲ, ಅವರ ಹಿಂದೀಗ ಹತ್ತಿಪ್ಪತ್ತು ನಿರ್ಮಾಪಕರಿದ್ದಾರೆ’; ಪುಷ್ಕರ್‌ ಮಲ್ಲಿಕಾರ್ಜುನಯ್ಯ

ಒಂದು ಸಮಯದಲ್ಲಿ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ ರಕ್ಷಿತ್‌ ಶೆಟ್ಟಿ ಮತ್ತು ನಿರರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಜೋಡಿ, ಒಂದಷ್ಟು ಕಾರಣಗಳಿಂದ ದೂರವಾಗಿಯೇ ತುಂಬ ವರ್ಷಗಳಾಗಿವೆ. ಈಗ ಅದೇ ರಕ್ಷಿತ್‌ ಶೆಟ್ಟಿ ಜತೆಗೆ ಮತ್ತೆ ಸಿನಿಮಾ ಮಾಡ್ತೀರಾ ಎಂದರೆ, ಪುಷ್ಕರ್‌ ನೀಡಿದ ಉತ್ತರ ಹೀಗಿದೆ.

‘ರಕ್ಷಿತ್‌ ಶೆಟ್ಟಿಗೆ ಈಗ ನನ್ನ ಅನಿವಾರ್ಯತೆ ಇಲ್ಲ, ಅವರ ಹಿಂದೆ ಹತ್ತಿಪ್ಪತ್ತು ನಿರ್ಮಾಪಕರಿದ್ದಾರೆ’; ಪುಷ್ಕರ್‌ ಮಲ್ಲಿಕಾರ್ಜುನಯ್ಯ
‘ರಕ್ಷಿತ್‌ ಶೆಟ್ಟಿಗೆ ಈಗ ನನ್ನ ಅನಿವಾರ್ಯತೆ ಇಲ್ಲ, ಅವರ ಹಿಂದೆ ಹತ್ತಿಪ್ಪತ್ತು ನಿರ್ಮಾಪಕರಿದ್ದಾರೆ’; ಪುಷ್ಕರ್‌ ಮಲ್ಲಿಕಾರ್ಜುನಯ್ಯ

Rakshit Shetty: ಸ್ಯಾಂಡಲ್‌ವುಡ್‌ನಲ್ಲಿ ನಟ ರಕ್ಷಿತ್‌ ಶೆಟ್ಟಿ ಸಿನಿಮಾ ಹಿನ್ನೆಲೆಯಿಂದ ಬಂದವರಲ್ಲ. ಕಷ್ಟಪಟ್ಟು ಒಂದಷ್ಟು ಸ್ಟ್ರಗಲ್‌ ಮಾಡಿ, ಗಟ್ಟಿಯಾಗಿ ನೆಲೆನಿಂತಿದ್ದಾರೆ. ಇದೀಗ ಬರೀ ಕನ್ನಡಿಗರಿಗಷ್ಟೇ ಅಲ್ಲದೇ, ಪ್ಯಾನ್‌ ಇಂಡಿಯಾ ಮಟ್ಟದಲ್ಲೂ ಸ್ಟಾರ್‌ ನಟನಾಗಿ ಮಿಂಚುತ್ತಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡುತ್ತಿದ್ದಾರೆ. 777 ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ಸಪ್ತ ಸಾಗರದಾಚೆ ಎಲ್ಲೂ ಸೈಡ್‌ ಎ ಮತ್ತು ಸೈಡ್‌ ಬಿ ಚಿತ್ರಗಳು ಚಿತ್ರಮಂದಿರದಲ್ಲಿಯೂ ಒಳ್ಳೆಯ ಗಳಿಕೆ ಕಂಡವು. ಒಟಿಟಿಯಲ್ಲಿಯೂ ಹಿಟ್‌ ಆದವು. ಅದರಂತೆ ಇದೀಗ ಅವರ ಸಿನಿಮಾ ಮಾಡಲು ನಿರ್ಮಾಪಕರ ದಂಡೇ ಇದೆ!

ಹೌದು, ರಕ್ಷಿತ್‌ ಶೆಟ್ಟಿ ಸಿನಿಮಾಕ್ಕೆ ಬಂಡವಾಳ ಹೂಡಲು ನಾ ಮುಂದೆ ತಾ ಮುಂದೆ ಸಾಕಷ್ಟು ಮಂದಿ ನಿರ್ಮಾಪಕರೀಗ ಕ್ಯೂ ನಲ್ಲಿದ್ದಾರೆ. ಪರಭಾಷೆಯ ನಿರ್ಮಾಪಕರಿಗೂ ರಕ್ಷಿತ್‌ ಬಗ್ಗೆ ಗೊತ್ತು. ಅಲ್ಲಿನವರೂ ಈ ಸಾಲಿನಲ್ಲಿದ್ದಾರೆ. ಇದೀಗ ವಿಷಯ ಏನೆಂದರೆ, ಇದೇ ರಕ್ಷಿತ್‌ ಶೆಟ್ಟಿ ಬಗ್ಗೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ಅವತಾರ ಪುರುಷ ಪಾರ್ಟ್‌ 2 ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ, ಹಳೇ ದಿನಗಳ ಬಗ್ಗೆ ಮಾತನಾಡಿದ್ದಾರೆ. ರಕ್ಷಿತ್‌ ಶೆಟ್ಟಿಗೆ ಈಗ ಮೊದಲಿನಂತೆ ನನ್ನ ಅನಿರ್ವಾಯತೆ ಇಲ್ಲ ಎಂದಿದ್ದಾರೆ. ಅಷ್ಟಕ್ಕೂ ಒಂದು ಕಾಲದ ಆಪ್ತ ಸ್ನೇಹಿತನ ಬಗ್ಗೆ ಪುಷ್ಕರ್‌ ಹೀಗೆ ಹೇಳಿದ್ದಾದರೂ ಯಾಕೆ? ಹೀಗಿದೆ ಕಾರಣ ಓದಿ.

ಒಂದು ಕಾಲದ ಕಿಲಾಡಿ ಜೋಡಿ

ರಕ್ಷಿತ್‌ ಶೆಟ್ಟಿ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಜೋಡಿಯದ್ದು ಒಂದು ಕಾಲದಲ್ಲಿ ಸಾಲು ಸಾಲು ಸಿನಿಮಾಗಳು ಮೂಡಿಬರುತ್ತಿದ್ದವು. ಅಷ್ಟೇ ಒಳ್ಳೆಯ ಹಿಟ್‌ ಸಿನಿಮಾಗಳನ್ನೂ ಈ ಜೋಡಿ ಸ್ಯಾಂಡಲ್‌ವುಡ್‌ಗೆ ನೀಡಿದೆ. ಆದರೆ, ಅವನೇ ಶ್ರೀಮನ್ನಾರಾಯಣ ಸಿನಿಮಾದ ಸೋಲಿನ ಬಳಿಕ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಹದಗೆಟ್ಟಿತ್ತು. ಅದಾದ ಬಳಿಕ ಇಬ್ಬರೂ ಕುಳಿತು ಆ ವ್ಯವಹಾರವನ್ನು ಬಗೆಹರಿಸಿಕೊಂಡು, ದೂರವಾಗಿದ್ದರು. ಈಗ ಮತ್ತೆ ರಕ್ಷಿತ್‌ ಶೆಟ್ಟಿ ಜತೆ ಸಿನಿಮಾ ಮಾಡ್ತೀರಾ ಎಂಬ ಪ್ರಶ್ನೆಗೆ ಪುಷ್ಕರ್‌ ಬಳಿ ಬೇರೆಯದೇ ಉತ್ತರವಿದೆ.

ರಕ್ಷಿತ್‌ ತುಂಬ ಸ್ಟ್ರಾಂಗ್‌ ಟ್ರ್ಯಾಕ್‌ ರೆಕಾರ್ಡ್‌ನಲ್ಲಿದ್ದಾರೆ..

ನೀವು ಮತ್ತೆ ರಕ್ಷಿತ್‌ ಶೆಟ್ಟಿ ಮತ್ತೆ ಒಂದಾಗ್ತೀರಾ? ಎಂಬ ಪ್ರಶ್ನೆಗೆ ಟಿವಿ9ಗೆ ನೀಡಿದ ಸಂದರ್ಶನಲ್ಲಿ ಉತ್ತರಿಸಿರುವ ಪುಷ್ಕರ್, ಹೀಗೆ ಹೇಳಿದ್ದಾರೆ. "ಸೋಲು ಗೆಲುವು ಕೆಲವು ಸಂಬಂಧಗಳನ್ನು ಚೆನ್ನಾಗಿಯೂ ಮಾಡುತ್ತವೆ, ಹಳಸುವುದೂ ಉಂಟು. ಗೆಳೆತನ ಎಂದರೆ ನಾವೇನು ಇಬ್ಬರೂ ದ್ವೇಷ ಮಾಡಿಕೊಂಡು ದೂರ ಆಗಿಲ್ಲ. ಬಗಳ ಗೌರವಯುತವಾಗಿಯೇ ನಾವಿಬ್ಬರು ನಮ್ಮ ನಮ್ಮ ಸ್ಪೇಸ್‌ನಲ್ಲಿದ್ದೇವೆ. ರಕ್ಷಿತ್‌ ಬಗ್ಗೆ ಮಾತನಾಡುವುದಾದರೆ, ರಕ್ಷಿತ್‌ ಸದ್ಯ ತುಂಬ ಸ್ಟ್ರಾಂಗ್‌ ಟ್ರ್ಯಾಕ್‌ ರೆಕಾರ್ಡ್‌ನಲ್ಲಿದ್ದಾರೆ.

ರಕ್ಷಿತ್‌ ಹಿಂದೀಗ ಹತ್ತಿಪ್ಪತ್ತು ನಿರ್ಮಾಪಕರ ಕಾವಲಿದೆ..

"ಅವರ ಹಿಂದೆ ಈಗಾಗಲೇ ಹತ್ತಿಪ್ಪತ್ತು ನಿರ್ಮಾಪಕರ ಕಾವಲಿದೆ. ರೆಡಿ ಇರ್ತಾರೆ. ದುಡ್ಡು ಹಾಕೋಕೆ ನಾವು ರೆಡಿ ಇದ್ದೇವೆ, ಡೇಟ್‌ ಕೊಡು ಎನ್ನುವಷ್ಟು ನಿರ್ಮಾಪಕರಿದ್ದಾರೆ. ಹಾಗಾಗಿ ರಕ್ಷಿತ್‌ಗೆ ಸಡನ್‌ ಆಗಿ ಪುಷ್ಕರ್‌ ಜತೆ ಸಿನಿಮಾ ಮಾಡಬೇಕು ಅಂತ ಅನಿವಾರ್ಯತೆ ಬರೋದಿಲ್ಲ. ಈ ನಡುವೆ ಒಂದುಷ ಎಕ್ಸ್ಟ್ರಾರ್ಡಿನರಿ ಕಥೆ ತಂದು, ನನ್ನ ಬ್ಯಾನರ್‌ನಿಂದ ಶುರುಮಾಡಿ, ಅದು ರಕ್ಷಿತ್‌ಗೆ ಇಷ್ಟ ಆಗಿ ಮುಂದುವರಿದರೆ ಅದು ಸಿನಿಮಾ ಆಗಬಹುದು. ಆದರೆ, ಸದ್ಯಕ್ಕೆ ನನ್ನ ಬಳಿ ಆ ಥರದ ಕಥೆಗಳಿಲ್ಲ. ರಕ್ಷಿತ್‌ಗೂ ಆ ಅನಿವಾರ್ಯತೆ ಇಲ್ಲ. ಮುಂದೊಂದು ದಿನ ಆ ರೀತಿಯ ಎಕ್ಸ್ಟ್ರಾರ್ಡಿನರಿ ಕಥೆ ಬಂದಾಗ ಇಬ್ಬರೂ ಮತ್ತೆ ಒಂದಾಗಬಹುದು" ಎಂದಿದ್ದಾರೆ ಪುಷ್ಕರ್.‌

IPL_Entry_Point