Saripodhaa Sanivaaram: ಬೆಂಗಳೂರಿಗೆ ಸರಿಪೋದಾ ಶನಿವಾರಂ ಚಿತ್ರದ ಪ್ರಚಾರಕ್ಕೆಂದು ಬಂದ ನಾನಿ; ತೆಲುಗು ನಟನ ನೋಡಲು ಜನವೋ ಜನ-sandalwood news tollywood actor nani came to bengaluru to promote the upcoming movie saripodhaa sanivaaram mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Saripodhaa Sanivaaram: ಬೆಂಗಳೂರಿಗೆ ಸರಿಪೋದಾ ಶನಿವಾರಂ ಚಿತ್ರದ ಪ್ರಚಾರಕ್ಕೆಂದು ಬಂದ ನಾನಿ; ತೆಲುಗು ನಟನ ನೋಡಲು ಜನವೋ ಜನ

Saripodhaa Sanivaaram: ಬೆಂಗಳೂರಿಗೆ ಸರಿಪೋದಾ ಶನಿವಾರಂ ಚಿತ್ರದ ಪ್ರಚಾರಕ್ಕೆಂದು ಬಂದ ನಾನಿ; ತೆಲುಗು ನಟನ ನೋಡಲು ಜನವೋ ಜನ

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದರು.

ಟಾಲಿವುಡ್‌ ನಟ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಆಗಸ್ಟ್‌ 30ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದರು.
ಟಾಲಿವುಡ್‌ ನಟ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಆಗಸ್ಟ್‌ 30ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದರು.

Saripodhaa Sanivaaram Movie: ದಸರಾ, ಹಾಯ್‌ ನಾನ್ನ ಸಿನಿಮಾಗಳ ಯಶಸ್ಸಿನ ಗುಂಗಿನಲ್ಲಿರುವ ಟಾಲಿವುಡ್‌ ನಟ ನಾನಿ, ಇದೀಗ ಮತ್ತೊಂದು ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಆ ಚಿತ್ರವೇ ಸರಿಪೋದಾ ಸಾಟರ್ಡೇ. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸೌತ್‌ನ ಇತರ ಭಾಷೆಗಳಿಗೂ ಡಬ್‌ ಆಗಿ ಆಯಾ ರಾಜ್ಯಗಳಲ್ಲಿ ತೆರೆಗೆ ಬರಲಿದೆ. ಇದೀಗ ಇದೇ ಸಿನಿಮಾ ಕನ್ನಡದಲ್ಲಿ ಸೂರ್ಯಾಸ್‌ ಸಾಟರ್ಡೇ ಡಬ್‌ ಆಗಿ ಆಗಸ್ಟ್‌ 29ರಂದು ರಿಲೀಸ್‌ ಆಗಲಿದೆ. ಈ ನಡುವೆ ಇತ್ತೀಚೆಗಷ್ಟೇ ಬೆಂಗಳೂರಿಗೂ ಬಂದಿದ್ದ ನಟ ನಾನಿ, ಸಿನಿಮಾ ಪ್ರಚಾರ ಮಾಡಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದರು. ಪ್ರಚಾರದ ಅಂಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಾನಿ, ಕನ್ನಡ ಸಿನಿಮಾಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ 29ಕ್ಕೆ 'ಸೂರ್ಯನ ಸಾಟರ್ಡೆ' ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದರು.

ಶಿವಣ್ಣನನ್ನು ಭೇಟಿಯಾದ ನಾನಿ

ನಾನಿ ದೊಡ್ಮನೆಗೂ ವಿಸಿಟ್ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕಥೆ ನಡೆಸಿದ್ದಾರೆ. ಈ ಹಿಂದೆ ನಾನಿ ನಟನೆಯ ಹಾಯ್ ನಾನ್ನ ಸಿನಿಮಾವನ್ನು ನೋಡಿ ಶಿವಣ್ಣ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸೂರ್ಯನ ಸಾಟರ್ಡೇ ಚಿತ್ರಕ್ಕೂ ಶಿವಣ್ಣ ಬೆಂಬಲ ನೀಡಿದ್ದಾರೆ.

‘ಸೂರ್ಯನ ಸಾಟರ್ಡೆ’ ಚಿತ್ರವನ್ನ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ನಾನಿಗೆ ಎರಡನೇ ಬಾರಿಗೆ ವಿವೇಕ್ ಆತ್ರೇಯಾ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದೆ ಅಂಟೆ ಸುಂದರಾನಿಕಿ ಸಿನಿಮಾವನ್ನ ವಿವೇಕ್ ಆತ್ರೇಯಾ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ನಾನಿನೇ ಹೀರೋ ಆಗಿದ್ದರು. ಇದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಇರೋ ಹಾಸ್ಯಮಯ ಚಿತ್ರವಾಗಿತ್ತು. ಇದೀಗ ಸೂರ್ಯನ ಸಾಟರ್ಡೆ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಹಿಂಗೆ ಎಲ್ಲ ಭಾಷೆಯಲ್ಲಿಯೇ ರಿಲೀಸ್ ಆಗುತ್ತದೆ.

ಸೂರ್ಯನ ಸಾಟರ್ಡೆ ಸಿನಿಮಾವನ್ನ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ನಿರ್ಮಾಣ ಮಾಡಿದ್ದಾರೆ. ನಾನಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದು, ಎಸ್ ಜೆ ಸೂರ್ಯ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಆಗಸ್ಟ್ 29 ತೆರೆಗೆ ಬರ್ತಿರುವ ಚಿತ್ರಕ್ಕೆ ಮುರಳಿ ಜಿ ಕ್ಯಾಮರಾವರ್ಕ್ ಮಾಡಿದ್ದಾರೆ. ಜೇಕ್ಸ್ ಬಿಜೋಯ್ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ಹ್ಯಾಟ್ರಿಕ್‌ ಗೆಲುವು ಪಡೀತಾರಾ ನಾನಿ ಕಾದು ನೋಡಬೇಕು.