ಕನ್ನಡ ಸುದ್ದಿ  /  Entertainment  /  Sandalwood News Top 10 Best Movies Of Golden Star Ganesh Mungarumale To Baana Daariyalli Kannada Cinema News Pcp

Ganesh Movies: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 10 ಚಿತ್ರಗಳು, ಇವುಗಳಲ್ಲಿ ನಿಮಗೆ ಯಾವುದು ಇಷ್ಟ

Ganesh movies kannada list: ಸ್ಯಾಂಡಲ್‌ವುಡ್‌ನ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ರುಕ್ಮಿಣಿ ವಸಂತ್‌ ನಟನೆಯ ಬಾನ ದಾರಿಯಲ್ಲಿ (Baana daariyalli) ಸಿನಿಮಾ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೇ ಸಂದರ್ಭದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಚಿತ್ರಗಳಲ್ಲಿ ಅತ್ಯುತ್ತಮವೆನಿಸುವ 10 ಚಿತ್ರಗಳನ್ನು ಇಲ್ಲಿ ನೆನಪಿಸಿಕೊಳ್ಳೋಣ.

Ganesh Movies: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 10 ಅತ್ಯುತ್ತಮ ಚಿತ್ರಗಳು
Ganesh Movies: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 10 ಅತ್ಯುತ್ತಮ ಚಿತ್ರಗಳು

ಮುಂಗಾರು ಮಳೆ ಗಣೇಶ್‌ ಅವರು ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ ಅಭೂತಪೂರ್ವ ಗೆಲುವು ಕಂಡ ಚಿತ್ರ. ಅದಾದ ಬಳಿಕ ಹಲವು ಚಿತ್ರಗಳು ತೆರೆಕಂಡರೂ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಅವರೇ ಒಂದೆಡೆ ಹೇಳಿದಂತೆ ಸಿನಿಮಾದಲ್ಲಿ ಸೋಲು ಎನ್ನುವುದು ಏನು ಎನ್ನುವುದನ್ನು ಮುಂಗಾರು ಮಳೆಯ ನಂತರದ ಸಿನಿಮಾಗಳು ತಿಳಿಸಿದ್ದವು ಎಂದಿದ್ದರು. ಹೀಗಿದ್ದರೂ, ಗಣೇಶ್‌ ನಟನೆಯ ಬಹುತೇಕ ಸಿನಿಮಾಗಳು ಮುಂಗಾರು ಮಳೆಯಂತಹ ಭಾರೀ ಯಶಸ್ಸು ಕಾಣದೆ ಇದ್ದರೂ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದವು. ಇಲ್ಲಿ ಗಣೇಶ್‌ ನಟನೆಯ ಪ್ರಮುಖ 10 ಸಿನಿಮಾಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ನಿಮಗೆ ಯಾವ ಚಿತ್ರ ಇಷ್ಟ ಎಂದು ನೆನಪಿಸಿಕೊಳ್ಳಿ.

ಟ್ರೆಂಡಿಂಗ್​ ಸುದ್ದಿ

1. ಮುಂಗಾರು ಮಳೆ

ಗಣೇಶ್‌ ಪೂಜಾ ಗಾಂಧಿ ನಟನೆಯ ಮುಂಗಾರು ಮಳೆ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಚಿತ್ರ. ಯೋಗರಾಜ್‌ ಭಟ್‌ ನಿರ್ದೇಶನ, ಕತೆ ಚಿತ್ರಕತೆ ಇರುವ ಈ ಸಿನಿಮಾ ನವಿರಾದ ಲವ್‌ ಸ್ಟೋರಿ. ಈ ಚಿತ್ರಕ್ಕೆ ಜಯಂತ್‌ ಕಾಯ್ಕಿಣಿ ಬರೆದ ಹಾಡುಗಳು ಮೋಡಿ ಮಾಡುವಂತದ್ದು.

 

2. ಚೆಲುವಿನ ಚಿತ್ತಾರ

ಗಣೇಶ್‌ ಮತ್ತು ಅಮೂಲ್ಯ ನಟನೆಯ ಚೆಲುವಿನ ಚಿತ್ತಾರವೂ ಸೂಪರ್‌ಹಿಟ್‌ ಸಿನಿಮಾವೆಂದೇ ಹೇಳಬಹುದು. ಇಲ್ಲಿ ನಟಿ ಅಮೂಲ್ಯರ ನಟನೆಯೂ ಕನ್ನಡಿಗರ ಗಮನ ಸೆಳೆದಿತ್ತು. ಐಶು- ಮಾದೇಶನ ಲವ್‌ ಸ್ಟೋರಿಯನ್ನು ಎಲ್ಲರೂ ಇಷ್ಟಪಟ್ಟಿದ್ದರು.

3. ಗಾಳಿಪಟ

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಗಾಳಿಪಟವೂ ತಕ್ಕಮಟ್ಟಿಗೆ ಯಶಸ್ಸು ಪಡೆದ ಚಿತ್ರ. ಗಣೇಶ್‌ ಜತೆಗೆ ದಿಗಂತ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

4. ಮಳೆಯಲಿ ಜೊತೆಯಲಿ

ಪ್ರೀತಂ ಗುಬ್ಬಿ ನಿರ್ದೇಶಿಸಿದ ಮಳೆಯಲಿ ಜೊತೆಯಲಿ ಚಿತ್ರವೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ನವಿರಾದ ಲವ್‌ ಸ್ಟೋರಿ. ಗಣೇಶ್‌ ಪತ್ನಿ ಶಿಲ್ಪಾ ಗಣೇಶ್‌ ನಿರ್ಮಾಣ ಸಂಸ್ಥೆಯಾದ ಗೋಲ್ಡನ್‌ ಮೂವಿಸ್‌ನಡಿ ಈ ಚಿತ್ರ ಬಿಡುಗಡೆಯಾಗಿತ್ತು.

5. ಶೈಲೋ

ಗಣೇಶ್‌ ನಟನೆಯ ಈ ಚಿತ್ರವು ಬಹುತೇಕರಿಗೆ ನೆನಪಿರಬಹುದು. 2021ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಭಾಮ ನಟಿಸಿದ್ದರು. ಇದು ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ. ಈ ಸಿನಿಮಾವೂ ನವಿರಾದ ಪ್ರೇಮಕತೆ ಹೊಂದಿದ್ದು, ದುರಂತ ಅಂತ್ಯವನ್ನೂ ಹೊಂದಿದೆ.

6. ಶ್ರಾವಣಿ ಸುಬ್ರಹ್ಮಣ್ಯ

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಹಲವು ಪ್ಲಾಪ್‌ ಸಿನಿಮಾಗಳ ನಡುವೆ ಶ್ರಾವಣಿ ಸುಬ್ರಹ್ಮಣ್ಯ ತುಸು ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ಗಣೇಶ್‌ ಜತೆ ಮತ್ತೆ ನಟಿಸಿದ್ದರು.

7. ಸ್ಟೈಲ್‌ ಕಿಂಗ್‌

ಗಣೇಶ್‌ ನಟನೆಯ ಪ್ರಮುಖ ಚಿತ್ರಗಳಲ್ಲಿ ಸ್ಟೈಲ್‌ ಕಿಂಕ್‌ ಕೂಡ ಒಂದು. ಇದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್‌ ಮಾಡಲಿಲ್ಲ.

8. ಝೂಮ್‌

ಗಣೇಶ್‌ ಜತೆಗೆ ರಾಧಿಕಾ ಪಂಡಿತ್‌ ನಟಿಸಿದ ಈ ಚಿತ್ರವು ಗಮನ ಸೆಳೆದಿತ್ತು.

9. ಮುಂಗಾರು ಮಳೆ 2

ಮುಂಗಾರು ಮಳೆ 2 ಚಿತ್ರದಲ್ಲಿ ಗಣೇಶ್‌ ಜತೆ ರವಿಚಂದ್ರನ್‌ ನಟಿಸಿದ್ದರು. ಈ ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಪಡೆದಿತ್ತು.

10. ಮುಗುಳುನಗೆ

ಗಣೇಶ್‌ ಅವರ ಮ್ಯಾನರಿಸಂಗೆ ತಕ್ಕಂತೆ ಬಿಡುಗಡೆಯಾದ ಇನ್ನೊಂದು ಸಿನಿಮಾ. ಇದು 2017ರಲ್ಲಿ ಬಿಡುಗಡೆಯಾಗಿತ್ತು.

ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸಿದ್ದು, ಕೆಲವು ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಹಲವು ಪ್ಲಾಪ್‌ ಸಿನಿಮಾಗಳ ಬಳಿಕ ಇಂದು ಬಿಡುಗಡೆಯಾದ ಬಾಲ ದಾರಿಯಲ್ಲಿ ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಗಣೇಶ್‌ಗೆ ಮರುಹುಟ್ಟು ನೀಡುವುದೇ ಕಾದು ನೋಡಬೇಕಿದೆ.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.