ಕನ್ನಡ ಸುದ್ದಿ  /  ಮನರಂಜನೆ  /  Kannada Actors Jailed: ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿರುವ ಕನ್ನಡ ಸಿನಿಮಾ ನಟ, ನಟಿಯರಿವರು

Kannada Actors Jailed: ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿರುವ ಕನ್ನಡ ಸಿನಿಮಾ ನಟ, ನಟಿಯರಿವರು

Top 6 Kannada Actors Jailed: ನಟ ದರ್ಶನ್‌ ಮಾತ್ರವಲ್ಲದೆ ಹಲವು ನಟರು, ನಟಿಯರು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ, ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲುವಾಸ ಮಾಡಿರುವ ಕನ್ನಡ ನಟರು, ನಟಿಯರ ವಿವರ ಇಲ್ಲಿದೆ.

Kannada Actors Jailed: ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿರುವ ನಟರು
Kannada Actors Jailed: ಪರಪ್ಪನ ಅಗ್ರಹಾರ ಜೈಲಿನ ರಾಗಿ ಮುದ್ದೆಯೂಟದ ರುಚಿ ನೋಡಿರುವ ನಟರು

ಬೆಂಗಳೂರು: ಸಿನಿಮಾ ಕಲಾವಿದರು ತೆರೆಯ ಮೇಲೆ ಅಪರಾಧ ದೃಶ್ಯಗಳು, ಕೈದಿ ದೃಶ್ಯಗಳಲ್ಲಿ ಕಾಣಿಸಿರಬಹುದು. ಆದರೆ, ಕೆಲವರು ಅನೇಕ ಅಪರಾಧ, ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈ ನೆಲದ ಕಾನೂನಿನನ್ವಯ ಜೈಲು ಶಿಕ್ಷೆ ಅನುಭವಿಸಿದ್ದಾರೆ. ದುನಿಯಾ ವಿಜಯ್‌, ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ ಹಲವು ನಟರು, ನಟಿಯರು ಜೈಲಿನೊಳಗೆ ಹೋಗಿಬಂದಿದ್ದಾರೆ. ಸದ್ಯ ಕನ್ನಡ ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿ ಬ್ಯಾರಕ್‌ನೊಳಗೆ ಇದ್ದಾರೆ. ಇವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನೀಡಲಾಗಿದೆ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾದ, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾಸ ಮಾಡಿರುವ ವಿವಿಧ ನಟರು, ನಟಿಯರ ವಿವರ ತಿಳಿದುಕೊಳ್ಳೋಣ.

ದರ್ಶನ್‌

ಕನ್ನಡ ನಟ ದರ್ಶನ್‌ ಜೈಲು ಸೇರಿರುವುದು ಎರಡನೇ ಬಾರಿ. ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2011ರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಒಂದು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬೇಲ್‌ ಮೇಲೆ ಹೊರಬಂದರು. ಇದೀಗ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಈಡಾಗಿ ಜೈಲು ಸೇರಿದ್ದಾರೆ.

ದುನಿಯಾ ವಿಜಯ್‌

ಕನ್ನಡ ನಟ ದುನಿಯಾ ವಿಜಯ್‌ ಕೂಡ ಸುಮಾರು 9 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಹೊರಬಂದಿದ್ದರು. 2018ರಲ್ಲಿ ಜಿಮ್‌ ತರಬೇತುದಾರ ಮಾರುತಿ ಗೌಡರನ್ನು ಅಪಹರಣ ಮಾಡಿ ಹಲ್ಲೆ ನಡೆಸಿದ ಆರೋಪದಡಿ ಬಂಧನಕ್ಕೆ ಈಡಾಗಿದ್ದರು.

ಟ್ರೆಂಡಿಂಗ್​ ಸುದ್ದಿ

ರಾಗಿಣಿ ದ್ವಿವೇದಿ

ಕನ್ನಡ ನಟಿ ರಾಗಿಣಿ ದ್ವಿವೇದಿ ಅವರು 5 ತಿಂಗಳ ಕಾಲ ಜೈಲಿನಲ್ಲಿದ್ದರು. ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಪ್ಪದ ಬೆಡಗಿ ಖ್ಯಾತಿಯ ಇವರು 2020ರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಈಡಾಗಿದ್ದರು. ಡ್ರಗ್ಸ್‌ ಸೇವನೆ ಮತ್ತು ಸಂಗ್ರಹದ ಆರೋಪದಡಿ ಇವರಿಗೆ ಜಾಮೀನು ಸಿಗಲಿಲ್ಲ. ಐದು ತಿಂಗಳು ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸಿ ಬೇಲ್‌ ಮುಖಾಂತರ ಹೊರಬಂದರು.

ಸಂಜನಾ ಗರ್ಲಾನಿ

ಕನ್ನಡ ನಟಿ ಸಂಜನಾ ಗರ್ಲಾನಿ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಮೂರು ತಿಂಗಳು ಹೋಗಿಬಂದಿದ್ದರು. ಗಂಡಹೆಂಡತಿ ಸಿನಿಮಾ ಖ್ಯಾತಿಯ ಇವರ ಮೇಲೂ ಮಾದಕ ದ್ರವ್ಯಕ್ಕೆ ಸಂಬಂಧಪಟ್ಟ ಕೇಸ್‌ ದಾಖಲಾಗಿತ್ತು. ಡ್ರಗ್ಸ್‌ ಸೇವನೆ, ಸಂಗ್ರಹ, ಪೂರೈಕೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಆರೋಗ್ಯದ ಕಾರಣದಿಂದ ಬೇಲ್‌ ಪಡೆದು ಹೊರಬಂದರು.

ಪವಿತ್ರಾ ಗೌಡ

ಕನ್ನಡ ನಟಿ ಪವಿತ್ರಾ ಗೌಡ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದು, ನ್ಯಾಯಾಂಗ ಬಂಧನಲ್ಲಿದ್ದಾರೆ. ಇವರು ಕೂಡ ಪರಪ್ಪನ ಅಗ್ರಹಾರದ ಜೈಲುವಾಸ ಮಾಡಿದ ಕನ್ನಡ ನಟ-ನಟಿಯರ ಸಾಲಿಗೆ ಸೇರಿದ್ದಾರೆ.

ಮರಿಯಾ ಮೋನಿಕಾ ಸುಸೈರಾಜ್‌

ಕನ್ನಡ ನಟಿ ಮರಿಯಾ ಮೋನಿಕಾ ಸುಸೈರಾಜ್‌ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. 2008ರಲ್ಲಿ ಮುಂಬೈನಲ್ಲಿ ಬಂಧನಕ್ಕೆ ಈಡಾಗಿದ್ದರು. ನೀರಜ್‌ ಗ್ರೋವರ್‌ ಎಂಬವರನ್ನು ತನ್ನ ಪ್ರಿಯತಮ ಜಯರಾಮ್‌ ಮ್ಯಾಥ್ಯೂ ಜತೆ ಸೇರಿ ಕೊಲೆ ಮಾಡಿದ ಆರೋಪ ಇವರ ಮೇಲಿತ್ತು. ಸಾಕ್ಷ್ಯ ನಾಶ ಮಾಡಿರುವ ಕಾರಣಕ್ಕೆ ಇವರು ಜೈಲು ಶಿಕ್ಷೆ ಅನುಭವಿಸಿದ್ದರು. ಇವರ ಬಾಯ್‌ಫ್ರೆಂಡ್‌ಗೆ 13 ವರ್ಷ ಶಿಕ್ಷೆ ವಿಧಿಸಲಾಗಿತ್ತು.

ಸ್ಯಾಂಡಲ್‌ವುಡ್‌ನ ಕಥೆ ಹೀಗಿದ್ದರೆ ಬಾಲಿವುಡ್‌ನಲ್ಲಿ ಸಂಜಯ್‌ ದತ್‌, ಸಲ್ಮಾನ್‌ ಖಾನ್‌, ರಾಜ್‌ ಕುಂದ್ರಾ, ರಾಜ್‌ಪಾಲ್‌ ಯಾದವ್‌, ವಿಜಯ್‌ ರಾಜ್‌, ಫರ್ಧಿನ್‌ ಖಾನ್‌, ಶೈನಿ ಅಹುಜಾ, ಮೋನಿಕಾ ಬೇಡಿ ಸೇರಿದಂತೆ ಸಾಕಷ್ಟು ನಟನಟಿಯರು ಜೈಲು ಶಿಕ್ಷೆ ಅನುಭವಿಸಿದ್ದಾರೆ.