Rain Songs: ಹೊರಗೆ ಧೋ ಎಂದು ಮಳೆ ಸುರಿಯುವಾಗ ಮೈಮರೆತು ಕೇಳಬಹುದಾದ ಮಳೆಗೆ ಸಂಬಂಧಪಟ್ಟ 7 ಕನ್ನಡ ಚಿತ್ರಗೀತೆಗಳಿವು, ಮಳೆ ಹಾಡಿಗೆ ಮೈಮರೆಯಿರಿ
Karnataka Rains: ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಸಾಕಷ್ಟು ಜನರು ಹೆಡ್‌ಫೋನ್ ಹಾಕುತ್ತ ಮಳೆ ಹಾಡುಗಳನ್ನು ಎಂಜಾಯ್ ಮಾಡುತ್ತಿರಬಹುದು. ಮಳೆಗೆ ಸಂಬಂಧಪಟ್ಟಂತೆ ಸಾಕಷ್ಟು ಕನ್ನಡ ಚಿತ್ರಗೀತೆಗಳಿವೆ (Kannada Rain Film Songs). ಮಳೆಗೆ ಸಂಬಂಧಪಟ್ಟ ಜಾನಪದ ಗೀತೆಗಳು, ಭಾವಗೀತೆಗಳು ಇವೆ. ಹೊರಗೆ ಧೋ ಎಂದು ಮಳೆ ಸುರಿಯಲಿ, ಬನ್ನಿ ನಾವು ಮಳೆ ಹಾಡು ಕೇಳೋಣ.
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಜೋರಾಗಿ ಬೀಸುವ ಮಳೆಯನ್ನು ಕಂಡು ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಸುರಿ" ಎಂದು ಹಾಡುವವರು ಇರಬಹುದು. ಕೃಷಿಗೆ ನೀರಿಲ್ಲದೆ ಪರಿತಪಿಸುವ ಕೃಷಿಕರಂತೂ ಹುಯ್ಯೊ ಹುಯ್ಯೊ ಮಳೆರಾಯ ಎಂದು ಹಾಡಬಹುದು. ಮಾಯದಂತ ಮಳೆ ಬಂತಣ್ಣ ಎಂದು ಹಾಡುವವರೂ ಇರಬಹುದು. ನಿಂಬಿಯ ಬನಾದ ಮ್ಯಾಗಳ ಚಂದ್ರಮ ಎಂಬ ಹಾಡು ಕೇಳುತ್ತ ಮೈಮರೆಯಬಹುದು. ಮುಗಿಲ ಮಾರಿಗೆ ರಾಗರತಿಯಾ ಎಂಬ ಹಾಡಿಗೆ ಕಿವಿಯಾಗಿ ಭಾವಲೋಕದಲ್ಲಿ ತೇಳುತ್ತ ಇರಬಹುದು. ಒಟ್ಟಾರೆ ಮಳೆಗೆ ಸಂಬಂಧಪಟ್ಟಂತೆ ಕನ್ನಡ ಚಿತ್ರಗೀತೆಗಳು, ಕನ್ನಡ ಭಾವಗೀತೆಗಳು, ಕನ್ನಡ ಜನಪದ ಗೀತೆಗಳು ಸಾಕಷ್ಟಿದ್ದು, ಈ ಮಳೆಗಾಲದಲ್ಲಿ ಇಂತಹ ಹಾಡುಗಳ ಮೂಲಕ ಸಂಭ್ರಮ ಹೆಚ್ಚಿಸಿಕೊಳ್ಳಬಹುದು.
ಮಳೆಗೆ ಸಂಬಂಧಪಟ್ಟ ಕನ್ನಡ ಚಿತ್ರಗೀತೆಗಳು
ಕನ್ನಡದಲ್ಲಿ ಮಳೆಗೆ ಸಂಬಂಧಪಟ್ಟ ಹಲವು ಎವರ್‌ಗ್ರೀನ್ ಚಿತ್ರಗೀತೆಗಳಿವೆ. ಕೆಲವು ಹಳೆಯ ಚಿತ್ರಗೀತೆಗಳಂತೂ ಮತ್ತೆಮತ್ತೆ ಕೇಳಿಸಬೇಕೆನಿಸುವಂತೆ ಇರುತ್ತವೆ. ಬನ್ನಿ ಕನ್ನಡ ಮಳೆ ಹಾಡುಗಳಿಗೆ ಕಿವಿಯಾಗೋಣ.
ಮುಂಗಾರು ಮಳೆಯೇ...
ಗಣೇಶ್ ಅಭಿನಯದ ಮುಂಗಾರು ಮಳೆ ಸಿನಿಮಾ ಕರ್ನಾಟಕದಲ್ಲಿ ಹೊಸ ಹವಾ ಸೃಷ್ಟಿಸಿತ್ತು. ಈ ಸಿನಿಮಾದ ಉಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡು ಈಗಲೂ ಎಲ್ಲರಿಗೂ ನೆನಪಿರಬಹುದು.
ಸ್ವಾತಿ ಮುತ್ತಿನ ಮಳೆ ಹನಿಯೇ
ಇದು ಹಳೆ ಹಾಡಾಗಿದ್ದರೂ ಈಗಲೂ ಗುಣುಗುಣಿಸುವಂತಹ ಸುಂದರ ಚಿತ್ರಗೀತೆ. ರವಿಚಂದ್ರನ್ ಅವರು ಬಣ್ಣದ ಗೆಜ್ಜೆ ಸಿನಿಮಾದಲ್ಲಿ ಅಮಲಾ ಪೌಲ್ ಜತೆ ನಟಿಸಿದ ಸಿನಿಮಾವಿದು. ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ ನನ್ನಾ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರಸರನೆ ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ ಹಾಡನ್ನು ಈ ಮಳೆಗಾಲದಲ್ಲಿ ನೆನಪಿಸಿಕೊಳ್ಳಿ.
ಬಾ ಮಳೆಯೇ ಬಾ..
ಭಾವಗೀತೆ ಪ್ರಿಯರಿಗೆ ಬಾ ಮಳೆಯೇ ಬಾ ಹಾಡು ಅಚ್ಚುಮೆಚ್ಚು. ರಮೇಶ್ ಅರವಿಂದ್ ಅವರ ಆಕ್ಸಿಡೆಂಟ್ ಸಿನಿಮಾದಲ್ಲೂ ಈ ಭಾವಗೀತೆ ಚಿತ್ರಗೀತೆಯಾಗಿತ್ತು. ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಹಿಂತಿರುಗಿ ಹೋಗದಂತೆ ನಲ್ಲೆ, ಹಿಂತಿರುಗಿ ಹೋಗದಂತೆ ಎಂಬ ಭಾವಗೀತೆಯನ್ನು ಕೇಳುತ್ತ ಮೈಮರೆಯಬಹುದು.
ಮುತ್ತು ಮುತ್ತು ನೀರ ಹನಿಯಾ..
ಹಳೆ ಚಿತ್ರಗೀತೆಗಳು ಎವರ್‌ಗ್ರೀನ್. ಶಿವರಾಜ್ಕುಮಾರ್, ಪ್ರೇಮಾ, ರಮೇಶ್ ಅರವಿಂದ್ ಅವರು ನಮ್ಮೂರ ಮಂದಾರ ಹೂವೇ ಚಿತ್ರದಲ್ಲಿ ಮುತ್ತು ಮುತ್ತು ನೀರ ಹನಿಯಾ.. ಹಾಡಿಗೆ ಮೈಮರೆದು ನರ್ತಿಸಿದ್ದರು. ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ.. ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ ಮೈಮನವೇ.. ಋತು ಋತುಗಳ ಚೇತನ ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ ಎಂದು ಈ ಮಳೆಗೆ ನೀವು ಮೈಮರೆಯಿರಿ.
ಬಂದ ಬಂದ ಮೇಘರಾಜ..
ನಟಿ ಸೌಂದರ್ಯ ಅವರು ಸಿಪಾಯಿ ಚಿತ್ರದಲ್ಲಿ ನರ್ತಿಸಿದ ಹಾಡಿದು. ಇದರ ಲಿರಿಕ್ಸ್‌ನ ಕೆಲವು ಸಾಲುಗಳು ಮುಂದಿನಂತೆ ಇದೆ. ಓ ಓ ಓ ಓ ಓ ಮೇಘರಾಜನೇ, ನುಡಿ ನುಡಿ, ಓ ಓ ಓ ಓ ಓ ಮೇಘರಾಜನೇ, ನುಡಿ ನುಡಿ, ಬಂದ ಬಂದ ಮೇಘರಾಜ, ನಮ್ಮ ಊರ ಕೆರೆಗೆ, ತಂದ ತಂದ ಜೀವದೆಳೆಯ, ನಮ್ಮ ಊರ ಬೆಳೆಗೆ, ಓ ಓ ಓ ಓ ಓ ಜೀವ ಗಂಗೆಯೇ, ಮಿಂದೆ ಮಿಂದೆ ನಾ ಸಮಗಸನೀದಮಗಳಲಿ, ಬಂದ ಬಂದ ಮೇಘರಾಜ, ನಮ್ಮ ಊರ ಕೆರೆಗೆ" ಈ ಹಾಡು ಕೇಳಿ ಮಳೆಗಾಲವನ್ನು ಆನಂದಿಸಿ.
ಮಳೆ ಮಳೆ ಮಳೆ ಮಳೆ.. ಒಲವಿನ ಸುರಿಮಳೆ..
ಮಳೆಗೆ ಸಂಬಂಧಪಟ್ಟ ಇನ್ನೊಂದು ಸುಂದರ ಚಿತ್ರಗೀತೆಯಿದು. ಅಂಬರೀಷ್ ಮತ್ತು ವನಿತಾ ವಾಸು ಈ ಹಾಡಿಗೆ ಕುಣಿದಿದ್ದಾರೆ. ಇದು ಮಣ್ಣಿನ ದೋಣಿ ಸಿನಿಮಾದ ಜನಪ್ರಿಯ ಹಾಡು. ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ ಮನ ಹರೆಯದ ನದಿಯಾಗಿದೇ..ಒ..ಓ..ಓ... ತನು ಬದುಕಿನ ಕಡಲಾಗಿದೆ ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ ಮನ ಹರೆಯದ ನದಿಯಾಗಿದೇ..ಒ..ಓ..ಓ... ತನು ಬದುಕಿನ ಕಡಲಾಗಿದೆ ಎಂಬ ಹಾಡು ಕೇಳಿ ಮಳೆಗಾಲವನ್ನು ಎಂಜಾಯ್ ಮಾಡಿ.
ತುಂತುರು ಅಲ್ಲಿ ನೀರ ಹಾಡು
ಅಮೃತ ವರ್ಷಿಣಿ ಸಿನಿಮಾದ ಜನಪ್ರಿಯ ಚಿತ್ರಗೀತೆಯಿದು. ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಎಂಬ ಹಾಡು ಕೇಳುತ್ತ ಮೈಮರೆಯಿರಿ.
ಮಳೆಗೆ ಸಂಬಂಧಪಟ್ಟಂತೆ ಈ ರೀತಿ ಹಲವು ಚಿತ್ರಗೀತೆಗಳನ್ನು, ಭಾವಗೀತೆಗಳನ್ನು, ಜಾನಪದಗೀತೆಗಳನ್ನು ಕೇಳಬಹುದು.