ಕನ್ನಡ ಸುದ್ದಿ  /  ಮನರಂಜನೆ  /  Yash Birthday: ಹುಟ್ಟುಹಬ್ಬಕ್ಕೆ ಇರಲ್ಲ ಅನ್ತಿರಿ, ಸಿನಿಮಾ ದಿನ ತಪ್ಪದೇ ನೋಡಿ ಅಂತೀರಾ, ಇದು ನ್ಯಾಯನಾ ಯಶ್‌ ಬಾಸ್‌? ಅಭಿಮಾನಿಗಳ ಪ್ರಶ್ನೆ

Yash Birthday: ಹುಟ್ಟುಹಬ್ಬಕ್ಕೆ ಇರಲ್ಲ ಅನ್ತಿರಿ, ಸಿನಿಮಾ ದಿನ ತಪ್ಪದೇ ನೋಡಿ ಅಂತೀರಾ, ಇದು ನ್ಯಾಯನಾ ಯಶ್‌ ಬಾಸ್‌? ಅಭಿಮಾನಿಗಳ ಪ್ರಶ್ನೆ

January 8 Yash Birthday: ಜನವರಿ 8ರಂದು ಕೆಜಿಎಫ್‌ ನಟ ಯಶ್‌ ಹುಟ್ಟುಹಬ್ಬ. ಅನಿವಾರ್ಯ ಕಾರಣಗಳಿಂದ ಈ ದಿನ ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗದು ಎಂದು ಹೇಳಿರುವ ಯಶ್‌ ತನ್ನ ಅಭಿಮಾನಿಗಳಿಗೆ ಭಾವುಕ ಸಂದೇಶ ಬರೆದಿದ್ದಾರೆ.

ಯಶ್‌ ಹುಟ್ಟುಹಬ್ಬ
ಯಶ್‌ ಹುಟ್ಟುಹಬ್ಬ

ಪ್ಯಾನ್‌ ಇಂಡಿಯಾ ಟಾಕ್ಸಿಕ್‌ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್‌ ನಟ ಯಶ್‌ ತನ್ನ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುದೀರ್ಘವಾಗಿ ಬರೆದಿದ್ದಾರೆ. ಯಶ್‌ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದರು. ಆದರೆ, ಟಾಕ್ಸಿಕ್‌ ನಟ ಯಶ್‌ ಈ ದಿನ ಬ್ಯುಸಿಯಾಗಿರುವ ಕಾರಣ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಭಿಮಾನಿಗಳಿಗೆ ಯಶ್‌ ಭಾವುಕ ಪತ್ರ

ಕನ್ನಡ ನಟ ಯಶ್‌ ಟ್ವಿಟ್ಟರ್‌ನಲ್ಲಿ ಹೀಗೆ ಬರೆದಿದ್ದಾರೆ. "ಜನವರಿ 8, ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ... ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ ಎಂಟರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ" ಎಂದು ಯಶ್‌ ಟ್ವೀಟ್‌ ಮಾಡಿದ್ದಾರೆ.

"ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಸದಾಕಾಲ ನನ್ನ ಜತೆ ಇರುವ ನಿಮ್ಮ ಪ್ರೀತಿ ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ- ನಿಮ್ಮ ಪ್ರೀತಿಯ ಯಶ್‌" ಎಂದು ಟ್ವೀಟ್‌ ಮಾಡಿದ್ದಾರೆ. "ಟಾಕ್ಸಿಕ್‌ ಸಿನಿಮಾದ ಘೋಷಣೆ ಮಾಡಿ ಇಲ್ಲಿಗೆ ಒಂದು ತಿಂಗಳಾಗುತ್ತ ಬಂತು. ಈಗ ಈ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ" ಎಂದು ಯಶ್‌ ಹೇಳಿದ್ದಾರೆ.

ಹೀಗೆ ಮಾಡೋದು ಸರಿನಾ ಸರ್‌?

"ಅಲ್ಲ ಸರ್‌ ನೀವು ಹುಟ್ಟು ಹಬ್ಬಕ್ಕೆ ನಾನು ಇರಲ್ಲ ಬರಬೇಡಿ ಅಂತೀರಾ ಆದ್ರೆ ಅದೇ ನಿಮ್ಮ ಸಿನಿಮ ರಿಲೀಸ್ ಆದ್ರೆ ತಪ್ಪದೆ ಬಂದ್ ನೋಡಿ ಅಂತೀರಾ ಅಲ್ವಾ ಇದು ನ್ಯಾಯವೇ ನೀವೇ ಹೇಳಿ ನಿಮ್ಮ ಅಭಿಮಾನಿಗಳು ಅವತ್ತು ಒಂದ ದಿನಾನೂ ನೋಡೋದು ಬೇಡವಾ ಸರ್‌" ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

ಯಶ್‌ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. "ಜನವರಿ 8ರಂದು ಟಾಕ್ಸಿಕ್‌ ಸಿನಿಮಾದ ಝಲಕ್‌ ನಿರೀಕ್ಷಿಸುತ್ತಿದ್ದೇವೆ" ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. "ಮುಂದಿನ ವರ್ಷವಾದರೂ ಸಿಗುವಂತರಾಗಿ ನಮ್ಮ ಪ್ರೀತಿಯ ಯಶ್ ಬಾಸ್ ರವರೆ ನಿಮ್ಮ ಚಲನ ಚಿತ್ರಕ್ಕಾಗಿ ನಿಮ್ಮ ಗೆಲವಿನ ನಗೆಗಾಗಿ ಸದಾ ಕಾಯುತ್ತಿರುವ ನಿಮ್ಮ ಅಭಿಮಾನಿ" ಎಂದು ಸಾಕಷ್ಟು ಜನರು ಟ್ವೀಟ್‌ ಮಾಡಿದ್ದಾರೆ. "ಏನ್ ಸಾರ್ ಈ ರೀತಿ ಮಾಡಿ ಬಿಟ್ಟ್ರಿ ,, ಸರಿ ಆಯ್ತು ನಮಗೆ toxic ಬಗ್ಗೆ ದೊಡ್ಡ ಅಪ್ಡೇಟ್ ಕೊಡಿ" ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಯಶ್‌ ಹುಟ್ಟುಹಬ್ಬ ದಿನಾಂಕ

ಯಶ್‌ ಮೂಲ ಹೆಸರು ನವೀನ್‌ ಕುಮಾರ್‌ ಗೌಡ. ಇವರು ಹಾಸನ ಜಿಲ್ಲೆಯಲ್ಲಿ ಅರುಣ್‌ ಕುಮಾರ್‌ ಮತ್ತು ಪುಷ್ಪ ದಂಪತಿಗಳಿಗೆ ಜನವರಿ 8, 1986ರಲ್ಲಿ ಜನಿಸಿದರು. ಜಂಭದ ಹುಡುಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಮೊಗ್ಗಿನ ಮನಸ್ಸು ಇವರ ಎರಡನೇ ಚಿತ್ರ. ಈ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದರು. ಮೊದಲ ಸಲ, ಕಿರಾತಕ, ಡ್ರಾಮಾ, ಗೂಗ್ಲಿ, ರಾಜಾ ಹುಲಿ, ಗಜಕೇಸರಿ, ಮಿ. ಮಿಸ್ಟರ್‌ ರಾಮಚಾರಿ, ಮಾಸ್ಟರ್‌ ಪೀಸ್‌, ಸಂತು ಸ್ಟ್ರೈಟ್‌ ಫಾರ್ವರ್ಡ್‌, ಕೆಜಿಎಫ್‌ ಚಾಪ್ಟರ್‌ ಒನ್‌, ಕೆಜಿಎಫ್‌ ಚಾಪ್ಟರ್‌ ಟು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಕ್ಸಿಕ್‌ ಇವರ ಮುಂದಿನ ಬಹುನಿರೀಕ್ಷಿತ ಚಲನಚಿತ್ರವಾಗಿದೆ.

ಟಿ20 ವರ್ಲ್ಡ್‌ಕಪ್ 2024