ಕನ್ನಡ ಸುದ್ದಿ  /  ಮನರಂಜನೆ  /  ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Umapathy Ramaiah and Aishwarya Arjun Marriage Date June 10: ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್‌ ಮದುವೆ ಇದೇ ಜೂನ್‌ 10ರಂದು ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ನಡೆಯಲಿದೆ.

ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ
ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

ಬೆಂಗಳೂರು: ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್‌ ಮದುವೆ ಇದೇ ಜೂನ್‌ 10ರಂದು ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ನಡೆಯಲಿದೆ. ನಿವೇದಿತಾ ಅರ್ಜುನ್ ಮತ್ತು ಅರ್ಜುನ್ ಸರ್ಜಾ ಅವರು ತಮ್ಮ ಮಗಳ ಆಹ್ವಾನ ಪತ್ರಿಕೆಯನ್ನು ಹಂಚಲು ಆರಂಭಿಸಿದ್ದಾರೆ. ಖುಷಿ ಮತ್ತು "ಸಂಭ್ರಮದ ಗಳಿಗೆಯೊಂದು ಬಂದಿದೆ. ಮಗಳ ಮದುವೆ ಸಂಭ್ರಮದಲ್ಲೂ ನಿಮ್ಮದೂ ಹಾಜರಿ ಇರಲಿ" ಎಂದು ಎಲ್ಲರಿಗೂ ತಮ್ಮ ಮಗಳ ಶುಭವಿವಾಹದ ಪ್ರೀತಿಯ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಉಮಾಪತಿ ರಾಮಯ್ಯ - ಐಶ್ವರ್ಯಾ ಅರ್ಜುನ್‌ ಮದುವೆ ದಿನಾಂಕ

ಚಿ.ಸೌ ಐಶ್ವರ್ಯಾ ಅರ್ಜುನ್ ಮತ್ತು ಚಿ. ಉಮಾಪತಿ ರಾಮಯ್ಯ ಶುಭವಿವಾಹನವು ಜೂನ್‌ 10ರಂದು ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ಜರುಗಲಿದೆ. "ಈ ಜೋಡಿಯ ವಿವಾಹ ಮಹೋತ್ಸವ 2024ರ ಜೂನ್ 10ರಂದು, ಆಂಜನೇಯನ ಸನ್ನಿಧಾನದಲ್ಲಿ ನೆರವೇರಲಿದೆ. ಈ ಒಂದು ಖುಷಿಯ ಕ್ಷಣದಲ್ಲಿ ನಿಮ್ಮ ಉಪಸ್ಥಿತಿ ಇರಲಿ. ನಿಮ್ಮಗಳ ಆಶೀರ್ವಾದ ನವ ಜೋಡಿಗೆ ಸಿಗಲಿ ಎಂದು ಈ ಮೂಲಕ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ" ಎಂದು ಅರ್ಜುನ್‌ ಸರ್ಜಾ ಹೇಳಿದ್ದಾರೆ. ಸುಖಾಗಮನ ಬಯಸುವವರ ಹೆಸರಿನ ಪಟ್ಟಿಯಲ್ಲಿ "ಶ್ರೀಮತಿ ಅಂಜನಾ ಅರ್ಜುನ್, ಶ್ರೀ ಧ್ರುವ ಸರ್ಜಾ ದಂಪತಿ, ಶ್ರೀಮತಿ ಅಪರ್ಣಾ ಕಿಶೋರ್ ಸರ್ಜಾ, ಶ್ರೀಮತಿ ಅಮ್ಮಾಜಿ ವಿಜಯ್ ಕುಮಾರ್, ಡಾ.ಪ್ರಿಯದರ್ಶನ್ ರಾಜೇಶ್, ಸೂರಜ್ ಸರ್ಜಾ ಇಸೆಯಾ ನುಟ್ಟೆರ್, ಜೂನಿ, ಟ್ರಫಿ ಮುಂತಾದವರ ಹೆಸರು ಇದೆ.

ಕಳೆದ ವರ್ಷ ನಡೆದಿತ್ತು ಎಂಗೇಜ್‌ಮೆಂಟ್‌

ಬಹುಭಾಷಾ ನಟ ಅರ್ಜುನ್‌ ಸರ್ಜಾರ ಪುತ್ರಿ ಐಶ್ವರ್ಯಾ. ಇವರಿಗೆ ಇತ್ತೀಚೆಗೆ ತಮಿಳು ನಟ ಉಮಾಪತಿ ರಾಮಯ್ಯರ ಜತೆ ಎಂಗೇಜ್‌ಮೆಂಟ್‌ ನಡೆದಿತ್ತು. ಇವರಿಬ್ಬರದ್ದು ಲವ್‌ ಸ್ಟೋರಿ. ಈ ಪ್ರೇಮಕಥೆಗೆ ಎರಡೂ ಕುಟುಂಬ ಸಮ್ಮತಿ ನೀಡಿ ನಿಶ್ಚಿತಾರ್ಥ ಮಾಡಿದ್ದಾರೆ. ಐಶ್ವರ್ಯಾ ಅರ್ಜುನ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟಿವ್‌ ಆಗಿರುತ್ತಾರೆ. ನೀವು ಹೇಗೆ ಇಬ್ಬರು ಪ್ರೇಮಕ್ಕೆ ಬಿದ್ದಿರಿ? ನಿಮ್ಮ ಲವ್‌ ಸ್ಟೋರಿಯೇನು ಎಂದು ಅಭಿಮಾನಿಗಳು ಕೇಳ್ತಾ ಇರ್ತಾರೆ. ಆದರೆ, ಈ ಪ್ರಶ್ನೆಗೆ ಐಶ್ವರ್ಯಾ ಇಲ್ಲಿಯವರೆಗೆ ಉತ್ತರಿಸಿಲ್ಲ. ಕೆಲವು ಮೂಲಗಳ ಪ್ರಕಾರ ಇವರಿಬ್ಬರದು ಹಲವು ವರ್ಷಗಳ ಲವ್‌. ತಮಿಳು ಚಿತ್ರರಂಗದ ಸುಂದರವಾದ ನಟಿಯೆಂಬ ಖ್ಯಾತಿ ಪಡೆದಿದ್ದ ಐಶ್ವರ್ಯಾರನ್ನು ಉಮಾಪತಿ ಇಷ್ಟಪಟ್ಟು ವಿವಾಹವಾಗುತ್ತಿದ್ದಾರೆ.

ಯಾರಿದು ತಂಬಿ ರಾಮಯ್ಯ?

ತಂಬಿ ರಾಮಯ್ಯ ಅವರು ತಮಿಳು ಸಿನಿಮೋದ್ಯಮದಲ್ಲಿ ಪ್ರಮುಖ ಕಾಮಿಡಿಯನ್‌. ಹಲವು ಸಿನಿಮಾಗಳಲ್ಲಿ ತನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಇಂತಹ ಜನಪ್ರಿಯ ಹಾಸ್ಯನಟನ ಮಗ ಉಮಾಪತಿ. ಇವರು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮನಿಯಾರ್‌ ಕುಡುಂಬಂ, ತಿರುಮನಮ್‌, ತನ್ನೆ ವಂದಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಐಶ್ವರ್ಯಾ ಅರ್ಜುನ್‌ ಕಾಲಿವುಡ್‌ ನಂಟು

ಅರ್ಜುನ್‌ ಸರ್ಜಾರ ಪುತ್ರಿಯೂ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇವರು ವಿಶಾಲ್‌ರ ಪಟ್ಟಥು ಯಾನೈ ಚಿತ್ರದ ಮೂಲಕ ತಮಿಳು ಚಿತ್ರದಲ್ಲಿ ನಟನೆ ಆರಂಭಿಸಿದರು. ಪ್ರೇಮ ಬರಹ ಎಂಬ ಚಿತ್ರದಲ್ಲಿಯೂ ನಟಿಸಿದ್ದರು. ಬಳಿಕ ಇವರು ಸಿನಿಮಾದಲ್ಲಿ ಮುಂದುವರೆಯಲಿಲ್ಲ.

ಇನ್ನಷ್ಟು ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point