ಕನ್ನಡ ಸುದ್ದಿ  /  Entertainment  /  Sandalwood News Upcoming Kannada Movie Bharjari Gandu Kiran Raj Hero Prasidh Direction Release Date April 5 Pcp

Upcoming Movie: ಕಿರಣ್‌ ರಾಜ್‌ ಅಭಿನಯದ ಭರ್ಜರಿ ಗಂಡು ಏಪ್ರಿಲ್‌ 5 ಕ್ಕೆ ಬಿಡುಗಡೆ, ಗ್ರಾಮೀಣ ಸೊಗಡಿನ ಚಿತ್ರದ ಮೇಲೆ ಹೆಚ್ಚಿದ ನಿರೀಕ್ಷೆ

Upcoming Kannada Movies: ಏಪ್ರಿಲ್‌ 5ರಂದು ಭರ್ಜರಿ ಗಂಡು ಹೆಸರಿನ ಸಿನಿಮಾವೊಂದು ಬಿಡುಗಡೆಯಾಗಲು ಸಜ್ಜಾಗಿದೆ. ಪ್ರಸಿದ್ದ್ ನಿರ್ದೇಶನ, ಕಿರಣ್‌ ರಾಜ್‌ ನಾಯಕನಾಗಿ ನಟಿಸಿರುವ ಈ ಚಿತ್ರವು ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ.

Upcoming Movie: ಕಿರಣ್‌ ರಾಜ್‌ ಅಭಿನಯದ ಭರ್ಜರಿ ಗಂಡು ಸಿನಿಮಾ ಏಪ್ರಿಲ್‌ 5 ಕ್ಕೆ ಬಿಡುಗಡೆ
Upcoming Movie: ಕಿರಣ್‌ ರಾಜ್‌ ಅಭಿನಯದ ಭರ್ಜರಿ ಗಂಡು ಸಿನಿಮಾ ಏಪ್ರಿಲ್‌ 5 ಕ್ಕೆ ಬಿಡುಗಡೆ

ಬೆಂಗಳೂರು: ಮಾರ್ಚ್‌ ತಿಂಗಳ ಕೊನೆಯಲ್ಲಿ ಯುವ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ. ಏಪ್ರಿಲ್‌ ತಿಂಗಳಲ್ಲಿಯೂ ಹಲವು ಸಿನಿಮಾಗಳು ರಿಲೀಸ್‌ ಆಗಲು ಕಾಯುತ್ತಿವೆ. ಕಿರಣ್ ರಾಜ್ ನಾಯಕನಾಗಿ ನಟಿಸಿರುವ ಭರ್ಜರಿ ಗಂಡು ಎಂಬ ಸಿನಿಮಾ ಏಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ಪ್ರಸಿದ್ಧ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೀಗ ಭರ್ಜರಿ ಗಂಡು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

"ರತ್ನ ಮಂಜರಿ" ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ನನ್ನ ಸ್ನೇಹಿತ ಛಾಯಾಗ್ರಾಹಕ ಕಿಟ್ಟಿ ನೆರವನ್ನು ಇಲ್ಲಿ ಸ್ಮರಿಸಬೇಕು. ಇವರು ನನಗೆನಾಯಕ ಕಿರಣ್ ರಾಜ್ ಸೇರಿದಂತೆ ಅನೇಕ ಆರ್ಟಿಸ್ಟ್‌ಗಳನ್ನು ಪರಿಚಯಿಸಿದರು. ಚಾಕೊಲೇಟ್ ಬಾಯ್ ಎಂದೇ ಖ್ಯಾತರಾಗಿರುವ ಕಿರಣ್ ರಾಜ್, ಈ ಚಿತ್ರದ ಮೂಲಕ ಆಕ್ಷನ್ ಹೀರೋ ಆಗುವುದಂತು ಖಚಿತ. ಅಷ್ಟು ಅದ್ಭುತವಾಗಿ ಸಾಹಸವನ್ನು ಮಾಡಿದ್ದಾರೆ. "ಭರ್ಜರಿ ಗಂಡು" ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ. ಏಪ್ರಿಲ್ 5 ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ" ಎಂದು ನಿರ್ದೇಶಕ ಪ್ರಸಿದ್ದ್ ಹೇಳಿದ್ದಾರೆ.

ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು ಎಂದು ಮಾತನಾಡಿದ ನಾಯಕ ಕಿರಣ್ ರಾಜ್, ಪ್ರಸಿದ್ದ್ ಅವರು ಬರೆದಿರುವ ಕಥೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ನಾಯಕಿ ಯಶ ಶಿವಕುಮಾರ್ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಕಲಾವಿದರಾದ ರಾಕೇಶ್ ರಾಜ್, ರೋಹಿತ್ ನಾಗೇಶ್ , ಸೌರಭ್ ಕುಲಕರ್ಣಿ, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ಸಂಗೀತ ನಿರ್ದೇಶಕ ಗುಮ್ಮೆನೇನಿ ವಿಜಯ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. ಈ ಚಿತ್ರವನ್ನು ಪ್ರಸಿದ್ದ್ ಫಿಲಂಸ್, ಅನಿಲ್ ಕುಮಾರ್ ಹಾಗೂ ಮದನ್ ಗೌಡ ನಿರ್ಮಿಸಿದ್ದಾರೆ. ರಮೇಶ್ ಗೌಡ ಮತ್ತು ಸುದರ್ಶನ್ ಸುಂದರರಾಜ್ ಅಂಜದ ಗಂಡು ಸಿನಿಮಾದ ಸಹ ನಿರ್ಮಾಪಕರು ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಬಿಡುಗಡೆಗೆ ಕಾಯುತ್ತಿವೆ ಹಲವು ಸಿನಿಮಾಗಳು

ಈ ತಿಂಗಳ ಅಂತ್ಯದಲ್ಲಿ ಬಹುನಿರೀಕ್ಷೆಯ ಯುವ ಸಿನಿಮಾ ರಿಲೀಸ್‌ ಆಗುತ್ತಿದೆ. ಯುವ ರಾಜ್‌ಕುಮಾರ್‌ ನಟನೆಯ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ಹೊರತರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ರಾಕ್ಷಸ ತಂತ್ರ, ತೂತು ಕಾಸು, ದಿಲ್‌ ಖುಷ್‌, ಲೈನ್‌ ಮ್ಯಾನ್‌, ಯುವ, ಅವತಾರ ಪುರುಷ, ಪವರ್‌, ಭರ್ಜರಿ ಗಂಡು, ನೈಟ್‌ ಕರ್ಫ್ಯೂ, ಲವ್‌ ಯು ಶಂಕರ್‌, ರಾಮ ಆಂಡ್‌ ರಾಮು, ಕಿರಿಕ್‌ ಮುಂತಾದ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ.

IPL_Entry_Point