ಸಿಡ್ನಿಯಿಂದಲೇ ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಮೂಲ ಗಾಯಕಿ; ಕರ್ನಾಟಕಕ್ಕೆ ಮತ್ತೆ ಬನ್ನಿ ಹಾಡಿ ಎಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಸಿಡ್ನಿಯಿಂದಲೇ ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಮೂಲ ಗಾಯಕಿ; ಕರ್ನಾಟಕಕ್ಕೆ ಮತ್ತೆ ಬನ್ನಿ ಹಾಡಿ ಎಂದ್ರು ಫ್ಯಾನ್ಸ್‌

ಸಿಡ್ನಿಯಿಂದಲೇ ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಮೂಲ ಗಾಯಕಿ; ಕರ್ನಾಟಕಕ್ಕೆ ಮತ್ತೆ ಬನ್ನಿ ಹಾಡಿ ಎಂದ್ರು ಫ್ಯಾನ್ಸ್‌

Enilla Enilla Song Singer: ಸೋಷಿಯಲ್‌ ಮೀಡಿಯಾದಲ್ಲಿ "ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ" ಹಾಡಿನ ಹವಾ ಇನ್ನೂ ಮುಗಿದಿಲ್ಲ. ಇದೀಗ ಉಪೇಂದ್ರ ಸಿನಿಮಾದಲ್ಲಿ ಏನಿಲ್ಲ ಹಾಡನ್ನು ಹಾಡಿದ್ದ ಮೂಲ ಗಾಯಕಿ ಪ್ರತಿಮಾ ರಾವ್‌ ಸಿಡ್ನಿಯಿಂದಲೇ ಈ ಹಾಡನ್ನು ಹಾಡಿದ್ದಾರೆ. ಬನ್ನಿ ಮತ್ತೊಮ್ಮೆ ಓ ನಲ್ಲ ಹಾಡನ್ನು ಕೇಳೋಣ.

ಸಿಡ್ನಿಯಿಂದಲೇ ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಮೂಲ ಗಾಯಕಿ
ಸಿಡ್ನಿಯಿಂದಲೇ ಓ ನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಮೂಲ ಗಾಯಕಿ

ಬೆಂಗಳೂರು: ಸರಿಸುಮಾರು 25 ವರ್ಷದ ಹಿಂದೆ ತೆರೆಕಂಡ ಉಪೇಂದ್ರ ಸಿನಿಮಾದ "ಏನಿಲ್ಲ ಏನಿಲ್ಲ ಹಾಡಿನ ಕರಿಮಣಿ ಮಾಲೀಕ ನೀನಲ್ಲ" ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಎಬ್ಬಿಸಿದ ಹವಾ ಎಲ್ಲರಿಗೂ ಗೊತ್ತು. ಇದೀಗ ಈ ಹಾಡನ್ನು ಮೂಲ ಗಾಯಕಿ ಪ್ರತಿಮಾ ರಾವ್‌ (ರಾಧಿಕಾ ರಾವ್‌ ಎಂಬ ಹೆಸರೂ ಇದೆ) ಮತ್ತೆ ಹಾಡಿದ್ದು, ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಸಾಕಷ್ಟು ಜನರು ಈ ಹಾಡಿನ ರಚನೆಯ ಕುರಿತು ಗುರುಕಿರಣ್‌ರಲ್ಲಿ ಮಾತನಾಡಿದ್ದರು. ಹಾಡು ಹುಟ್ಟಿದ ಬಗೆಯ ವಿವರ ಪಡೆದಿದ್ದರು. ಈ ಹಾಡಿನ ಗಾಯಕಿ ಯಾರು ಎಂಬ ಹೆಚ್ಚಿನವರು ಯೋಚಿಸಿರಲಿಲ್ಲ.

ಉಪೇಂದ್ರ ಸಿನಿಮಾದಲ್ಲಿ ಕರಿಮಣಿ ಮಾಲೀಕ ಹಾಡನ್ನು ಹಾಡಿರುವ ಮೂಲ ಗಾಯಕಿ ಪ್ರತಿಮಾ ರಾವ್‌. ಇವರು ಸದ್ಯ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಸಕ್ರೀಯರಾಗಿದ್ದಾರೆ. ರಾಧಿಕ ರಾವ್‌ ಮ್ಯೂಸಿಕ್‌ ಎಂಬ ಯೂಟ್ಯೂಬ್‌ ಚಾನೆಲ್‌ ಅನ್ನೂ ಹೊಂದಿದ್ದಾರೆ. ಈ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಲಾದ ಏನಿಲ್ಲ ಏನಿಲ್ಲ ಹಾಡು ಇಲ್ಲಿದೆ ಕೇಳಿ.

ಪ್ರತಿಮಾ ರಾವ್‌ ಸಂದೇಶ

"ನನ್ನ ಅಭಿಮಾನಿಗಳಿಗೆ ಮತ್ತು ಸುಂದರ ಕೇಳುಗರಿಗೆ ಪ್ರೀತಿಯ ನಮಸ್ತೆ. ಏನೆಂದು ಹೇಳಲಿ. ನೀವು ಬರೆದ ಪ್ರತಿಯೊಂದು ಕಾಮೆಂಟ್‌ ಅನ್ನೂ ಓದಿದ್ದೇನೆ. ನೀವು ನನ್ನ ಹೃದಯ ಟಚ್‌ ಮಾಡಿದ್ದೀರಿ. ನನ್ನ ಧ್ವನಿಯ ಕುರಿತು ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ವಯಾದ. ನನಗೆ ನಿಜಕ್ಕೂ ಇದು ಖುಷಿ ತಂದಿದೆ. ನಿಮ್ಮ ಹಾರೈಕೆ ಮತ್ತು ಬೆಂಬಲಕ್ಕೆ ಹೃದಯ ಪೂರ್ವಕ ನಮಸ್ಕಾರಗಳು. ಯಾವಾಗಲೂ ಎಲ್ಲರೂ ಖುಷಿಯಾಗಿರಿ. ಜೀವನದಲ್ಲಿ ಏನೇ ಬರಲಿ, ನಗು ಕಳೆದುಕೊಳ್ಳಬೇಡಿ. ನಗು ಎನ್ನುವುದು ಜೀವನದ ನಿಜವಾದ ಶಕ್ತಿ. ನಾನು ಖಂಡಿತವಾಗಿಯೂ ನನ್ನ ಇನ್ನಷ್ಟು ಹಾಡುಗಳೊಂದಿಗೆ ವಾಪಸ್‌ ಬರುತ್ತೇನೆ. ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವೆ. ದೇವು ಸದಾ ನಿಮ್ಮ ಜತೆ ಇರಲಿ- ರಾಧಿಕಾ ರಾವ್‌ (ಪ್ರತಿಮಾ ರಾವ್‌)" ಎಂದು ಯೂಟ್ಯೂಬ್‌ ಕಾಮೆಂಟ್‌ ಬಾಕ್ಸ್‌ನಲ್ಲಿ ಪ್ರತಿಮಾ ರಾವ್‌ ಬರೆದಿದ್ದಾರೆ.

ಅಭಿಮಾನಿಗಳ ಅಭಿಪ್ರಾಯ

ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿರುವ ಈ ಹಾಡಿಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಉಪೇಂದ್ರ ಸರ್ ಅವರು ಒಳ್ಳೆಯ ಪ್ರತಿಭೆಯನ್ನು ಕನ್ನಡಕ್ಕೆ ಪರಿಚಯಿದ್ದಾರೆ. ತುಂಬಾ ಧನ್ಯವಾದಗಳು" "ಮ್ಯಾಮ್ ಪ್ರತಿಮಾ ರಾವ್ ನೀವೇನಾ.. ತುಂಬಾ ಚೇಂಜ್ ಆಗಿದೀರಾ. But ನಿಮ್ಮ voice ಅತ್ಯದ್ಭುತ ಮ್ಯಾಮ್. ಒಳ್ಳೆದಾಗಲಿ ನಿಮಗೆ..... " "ಪೂರ್ತಿ ಕರ್ನಾಟಕದಲ್ಲಿ ನಿಮ್ಮದೇ ಹಾಡಿನ ಹವಾ" "ಈ ಹಾಡನ್ನ ಎಷ್ಟು ಭಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ ಎವರ್ ಗ್ರೀನ್ ಸಾಂಗ್ ಉಪ್ಪಿ ಸರ್‌ಗೆ ಒಂದು ದೊಡ್ಡ ಸೆಲ್ಯೂಟ್ ಈ ಹಾಡನ್ನ ಇಪ್ಪತೈದು ವರುಷದಿಂದಾ ಕೇಳ್ತಾ ಇದೇನೆ" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

"ನಿಮ್ಮ ಗಾಯನ ಅಂತು ಅದ್ಬುತ ಮೇಡಂ.. ನೀವು ಮತ್ತೆ ಕನ್ನಡ ಇಂಡಸ್ಟ್ರೀಗೆ ಬರುವಂತಾಗಲಿ ಎಂದು ಆಶಿಸುತ್ತೇನೆ" "ಎಂತಹ ಸುಮಧುರ ಹಾಡುಗಾರಿಕೆ ಮೇಡಂ ,ಇಂತ ಅದ್ಭುತ ಸಾಹಿತ್ಯ ಕನ್ನಡದಲ್ಲಿ ಮಾತ್ರ ಕಾಣಲು ಸಾದ್ಯ ಬೇರೆ ಯಾವ ಬಾಷೆಯಲ್ಲೂ ಸಿಗುವುದಿಲ್ಲ" "ಹಾಡಿಗೆ ಪರಿಪೂರ್ಣ ಅರ್ಥ ಬರುವ ಹಾಗೆ ಹಾಡಿದ್ದೀರಿ" "ತುಂಬಾ ಒಳ್ಳೆಯ ಕಂಠ. ನಿಮಗೆ ಏಕೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ನಿಮಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ" "ಇಪ್ಪತ್ತೈದು ವರ್ಷವಾದ ಬಳಿಕ ನೀವು ಮತ್ತೆ ಎಲ್ಲರಿಗೂ ಕಾಣಿಸಿದ್ದು ಅಚ್ಚರಿಯೇ ಸರಿ" "ಎಲ್ಲಿದ್ದೀರಾ ಮೇಡಂ? ಮತ್ತೆ ಕರ್ನಾಟಕಕ್ಕೆ ಬನ್ನಿ ನಿಮ್ಮ ಗಾಯನ ಶುರುಮಾಡಿ... ನಿಮ್ಮ ಧ್ವನಿ ಅದ್ಬುತ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

Whats_app_banner