ಕನ್ನಡ ಸುದ್ದಿ  /  ಮನರಂಜನೆ  /  ಕರಿಮಣಿ ಮಾಲೀಕ ನೀನಲ್ಲ ವಿಡಿಯೋಗೆ ಬಂದ ರಿಯಲ್‌ ರಾವುಲ್ಲಾ; ಆಹಾ ಚಟಪಟ ಚಟಪಟ ಒನ್‌ಮೋರ್‌ ಒನ್‌ಮೋರ್‌ ಅನ್ಬೇಕು ನೀವು

ಕರಿಮಣಿ ಮಾಲೀಕ ನೀನಲ್ಲ ವಿಡಿಯೋಗೆ ಬಂದ ರಿಯಲ್‌ ರಾವುಲ್ಲಾ; ಆಹಾ ಚಟಪಟ ಚಟಪಟ ಒನ್‌ಮೋರ್‌ ಒನ್‌ಮೋರ್‌ ಅನ್ಬೇಕು ನೀವು

Karimani Malika Ninnalla Trending: ಸೋಷಿಯಲ್‌ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲ ಹಾಡು ಮತ್ತು ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ರಾಹುಲ್ಲಾ ಸುದ್ದಿಯಲ್ಲಿದ್ದಾರೆ. ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ತಂಡ ಇದೀಗ ರಾಹುಲ್ಲಾನ ಜತೆ ಕರಿಮಣಿ ಮಾಲೀಕ ನೀನಲ್ಲ ವಿಡಿಯೋ ಶೂಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕರಿಮಣಿ ಮಾಲೀಕ ನೀನಲ್ಲ ವಿಡಿಯೋಗೆ ಬಂದ ರಿಯಲ್‌ ರಾವುಲ್ಲಾ
ಕರಿಮಣಿ ಮಾಲೀಕ ನೀನಲ್ಲ ವಿಡಿಯೋಗೆ ಬಂದ ರಿಯಲ್‌ ರಾವುಲ್ಲಾ

ಬೆಂಗಳೂರು: ಸೋಷಿಯಲ್‌ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲ ಹಾಡು ಮತ್ತು ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ರಾಹುಲ್ಲಾ ಸುದ್ದಿಯಲ್ಲಿದ್ದಾರೆ. ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ತಂಡ ಇದೀಗ ರಾಹುಲ್ಲಾನ ಜತೆ ಕರಿಮಣಿ ಮಾಲೀಕ ನೀನಲ್ಲ ವಿಡಿಯೋ ಶೂಟ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.1999ರಲ್ಲಿ ರಿಲೀಸ್‌ ಆಗಿದ್ದ ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡಿನ ವಿಕಿಪೀಡಿಯಾ ವರ್ಷನ್‌ ಇತ್ತೀಚೆಗೆ ಬಿಡುಗಡೆಯಾಗಿತ್ತು. ಕೆಲವು ದಿನಗಳ ಹಿಂದೆ ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಮೂಲಕ ವೈರಲ್‌ ಆಗಿದ್ದ ಕನ್ನಡ ವಿಕ್ಕಿಪೀಡಿಯಾ ಪುಟದಲ್ಲಿ ಈಗ ಕರಿಮಣಿ ಮಾಲೀಕ ನಾನಲ್ಲ ಮತ್ತು ರಾವುಲ್ಲಾ ವಿಡಿಯೋಗಳು ಮತ್ತೆ ಸುದ್ದಿಯಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಸೋಷಿಯಲ್‌ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲ ಕ್ರೇಜ್‌ ಸದ್ಯಕ್ಕೆ ಕಡಿಮೆಯಾಗುವ ಸೂಚನೆಯಿಲ್ಲ. ಇನ್ನೇನೂ ರೀಲ್ಸ್‌ಗಳಲ್ಲಿ ಕರಿಮಣಿ ಮಾಲೀಕ ಹಾಡುಗಳು ಕಡಿಮೆಯಾಗುತ್ತಿವೆ ಎಂದಾಗ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ಪೇಜ್‌ನಲ್ಲಿ ಕರಿಮಣಿ ಮಾಲೀಕ ರಾವುಲ್ಲಾ ಎಂಬ ವಿಡಿಯೋ ಹೊರಬಂದಿತ್ತು. ಆ ವಿಡಿಯೋದಲ್ಲಿ ರಿಯಲ್‌ ರಾವುಲ್ಲಾ ಇರಲಿಲ್ಲ. ಈಗ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ಆ ವಿಡಿಯೋದಲ್ಲಿ ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಚಂದ್ರು ಮತ್ತು ರಾಹುಲ್ಲಾ ಕೂಡ ಇದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಏನಿದೆ ವಿಡಿಯೋದಲ್ಲಿ?

"ಈಗ ತುಂಬಾ ವೈರಲ್‌ ಆಗುತ್ತಿದೆ, ಜನ ತುಂಬಾ ಕೇಳುತ್ತಿದ್ದಾರೆ. ಆ ಕರಿಮಣಿ ಮಾಲೀಕ ಯಾರು? ಬೇಗ ಹೇಳಮ್ಮ" ಎಂದು ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಚಂದ್ರು ಪ್ರಶ್ನಿಸುತ್ತಾರೆ. ಅದಕ್ಕೆ ನಂದಿನಿ "ಒಂದು ಹಾಡಿನ ಮೂಲಕ ಹೇಳ್ಲ?" ಎಂದು ಹೇಳುತ್ತಾರೆ. ಒಂದು ಸಾಂಗ್‌ ಮುಖಾಂತರ ಹೇಳ್ಲಾ? ಎಂದು ನಂದಿನಿ ಹೇಳುತ್ತಾರೆ. "ಬೇಡ ಕಸ್ಟಮರ್ಸ್‌ ಇದ್ದಾರೆ, ಕಷ್ಟ ಆಗುತ್ತೆ" ಎಂದು ಚಂದ್ರು ಹೇಳಿದಾಗ ನಂದಿನಿ ಪ್ಲೀಸ್‌ ಎನ್ನುತ್ತಾರೆ. "ಓಕೆ ಎಂಜಾಯ್‌ಮ ಆಡಿ" ಎಂದು ಚಂದ್ರು ಹೇಳಿದಾಗ ನಂದಿನಿ ಹಾಡುತ್ತಾಳೆ. "ಮನಸಿನೊಳಗೆ ಖಾಲಿ ಖಾಲಿ... ನೀ ಮನದೊಳಗೇ ಇದ್ದರು.. ಮಲ್ಲಿಗೆ.. ಸಂಪಿಗೆ ತರದೇ ಹೋದರೂ ನೀ ನನಗೆ, ಓ ನಲ್ಲ, ನೀನಲ್ಲ ಕರಿಮಣಿ ಮಾಲೀಕ ನೀನಲ್ಲ" ಎನ್ನುತ್ತಾಳೆ."ಮತ್ಯಾರು" ಎಂದು ಚಂದ್ರು ಪ್ರಶ್ನಿಸಿದಾಗ "ಕರಿಮಣಿ ಮಾಲೀಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ.. ಕರಿಮಣಿ ಮಾಲೀಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ ಕರಿಮಣಿ ಮಾಲೀಕ ರಾವುಲ್ಲ" ಎಂದು ಹಾಡುತ್ತಾಳೆ. ಹಿನ್ನೆಲೆಯಲ್ಲಿ ಒರಿಜಿನಲ್‌ ರಾವುಲ್ಲಾ ಕಬಾಬ್‌ಪ್ಲೇಟ್‌ ಹಿಡಿದುಕೊಂಡಿರುತ್ತಾನೆ.

ಫ್ಯಾನ್ಸ್‌ ಪ್ರತಿಕ್ರಿಯೆ

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ. "ಅಯ್ಯೋ ಅಂಬಿಕಾ ರಾಹುಲ್ಲನ್ನ ಮದ್ವೆ ಆಗಿ ಬಿಟಿಲ್ಯಪ್ಪ" " ಬೆಳ್ಳುಳಿ ಕಬಾಬ್ ಮಾಲೀಕನೇ ಕರಿಮಣಿ ಮಾಲೀಕ" "ಅದೆಷ್ಟೋ ಜನರ ಮನೆದೇವರಾಗ್ಬಿಟ್ಟವ್ನೆ ರಾಹುಲ್ಲ" " ನೀವು ಒಬ್ಬರೆ ನಾನು ನೋಡಿದ ಬಿಗ್ ಕ್ರಿಯೇಟಿವಿಟಿ ಮೈಂಡ್ ಇರೋದು ಪಕ್ಕಾ ಕಂಟೆಂಟ್ ಸೂಪರ್ " "ಕೊನೆಗೂ ಕರಿಮಣಿ ಮಾಲೀಕ ಸಿಕ್ಕ" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಕನ್ನಡ ಚಿತ್ರರಂಗಕ್ಕೆ ಡೈರೆಕ್ಟರ್‌ ಕ್ಯಾಪ್‌ ಹಾಕಿಕೊಂಡು ಎಂಟ್ರಿ ನೀಡಿದ್ದರು. ಬಳಿಕ ಇವರೇ ಹಲವು ಸಿನಿಮಾಗಳಿಗೆ ಹೀರೋ ಆಗಿದ್ದರು. ಈ ಸಂದರ್ಭದಲ್ಲಿ ನಟಿ ಪ್ರೇಮ ಜತೆ ಉಪೇಂದ್ರರಿಗೆ ಏನೋ ಇದೆ ಎಂಬ ಗುಸುಗುಸು ಹರಡಿತ್ತು.ಈ ವದಂತಿ ಸುಳ್ಳು ಎನ್ನುವುದು ಇಡೀ ಚಿತ್ರರಂಗಕ್ಕೆ ಗೊತ್ತಿತ್ತು. ಆದರೆ, ಇಂತಹ ವದಂತಿ ಹೊರಗಡೆ ಹಬ್ಬುತ್ತಿತ್ತು. ಇದೇ ಸಂದರ್ಭದಲ್ಲಿ ಇಂತಹ ವದಂತಿಗಳಿಗೆ ಹಾಡಿನ ಮೂಲಕವೇ ಉತ್ತರ ನೀಡಲು ಉಪೇಂದ್ರ ಬಯಸಿದ್ದರು. ಆ ಸಂದರ್ಭದಲ್ಲಿ ಈ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು ಹುಟ್ಟಿಕೊಂಡಿತ್ತು ಎಂದು ಇತ್ತೀಚೆಗೆ ಗುರುಕಿರಣ್‌ ಮಾಹಿತಿ ನೀಡಿದ್ದರು.

IPL_Entry_Point