ಕನ್ನಡ ಸುದ್ದಿ  /  Entertainment  /  Sandalwood News Upendra Shivarajkumar 2000 Preethse Movie Holi Holi Holi Holi Movie Song Lyrics Holi Festival Songs Pcp

Holi Movie Songs: ಹೋಳಿ ಹಬ್ಬದಂದು ಶಿವಣ್ಣ ಉಪೇಂದ್ರ ನಟನೆಯ ಪ್ರೀತ್ಸೆ ಸಿನಿಮಾ ಮರೆಯಲಾದೀತೆ; ಇಲ್ಲಿದೆ ಹೋಳಿ ಹೋಳಿ ಸಾಂಗ್ ಲಿರಿಕ್ಸ್‌‌

Holi Kannada Movie Songs: ಹೋಳಿ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ "ಹೋಳಿ ಹೋಳಿ ಹೋಳಿ ಹೋಳೀ ಏಳೇಳು ಬಣ್ಣದ ಬೆಳ್ಳಿ ಹೋಳಿ" ಎಂಬ ಹಾಡಿನ ಲಿರಿಕ್ಸ್‌ ಇಲ್ಲಿದೆ. 2000ರಲ್ಲಿ ತೆರೆಕಂಡ ಪ್ರೀತ್ಸೆ ಸಿನಿಮಾದಲ್ಲಿ ಉಪೇಂದ್ರ ಮತ್ತು ಶಿವರಾಜ್‌ ಕುಮಾರ್‌ ನಟಿಸಿದ್ದರು.

 ಶಿವಣ್ಣ ಉಪೇಂದ್ರ ನಟನೆಯ ಪ್ರೀತ್ಸೆ ಸಿನಿಮಾದ ಹೋಳಿ ಹೋಳಿ ಸಾಂಗ್ ಲಿರಿಕ್ಸ್‌‌
ಶಿವಣ್ಣ ಉಪೇಂದ್ರ ನಟನೆಯ ಪ್ರೀತ್ಸೆ ಸಿನಿಮಾದ ಹೋಳಿ ಹೋಳಿ ಸಾಂಗ್ ಲಿರಿಕ್ಸ್‌‌

ಕನ್ನಡದ ಎವರ್‌ಗ್ರೀನ್‌ ಹೋಳಿ ಹಾಡು ಎಂದರೆ "ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ" ಎಂದರೆ ತಪ್ಪಾಗದು. ಡಾ. ಶಿವರಾಜ್‌ ಕುಮಾರ್‌ ಮತ್ತು ಉಪೇಂದ್ರ ಕಾಂಬಿನೇಷನ್‌ನ ಪ್ರೀತ್ಸೆ ಸಿನಿಮಾದ ಈ ಹಾಡು ಕನ್ನಡ ಸಿನಿಪ್ರಿಯರಿಗೆ ಇಷ್ಟವಾಗಿದೆ. ಪ್ರೀತ್ಸೆ ಎಂಬ ಸುಮಾರು 24 ವರ್ಷದ ಹಿಂದಿನ ಈ ಸಿನಿಮಾದ ಹಾಡು ಈಗಲೂ ಎಲ್ಲರಿಗೂ ಫೇವರಿಟ್‌.

2000ನೇ ಇಸವಿಯಲ್ಲಿ ಬಿಡುಗಡೆಗೊಂಡ ಪ್ರೀತ್ಸೆ ಎಂಬ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾವನ್ನು ಡಿ. ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಶೂಟಿಂಗ್‌ ಮಾಡಲಾಗಿತ್ತು. ಈ ಸಿನಿಮಾ ತೆಲುಗಿನಲ್ಲಿ ಸ್ಯಾಡಿಸ್ಟ್‌ ಹೆಸರಿನಲ್ಲಿ ರಿಲೀಸ್‌ ಆಗಿತ್ತು. ಆ ಕಾಲದಲ್ಲಿ ಯುಜಮಾನ ಬಳಿಕ ಅತ್ಯಧಿಕ ಗಳಿಕೆ ಮಾಡಿದ ಚಿತ್ರವಿದು. ಸುಮಾರು 25 ವಾರ ಚಿತ್ರಮಂದಿರಗಳಲ್ಲಿ ಓಡಿದ ಸಿನಿಮಾವಿದು. ಇದೇ ಸಿನಿಮಾದ ಹೋಳಿ ಹೋಳಿ ಹಾಡಿಗೆ ಹಂಸಲೇಖಾ ಸಂಗೀತ ನೀಡಿದ್ದಾರೆ.

ಮಾರ್ಚ್‌ 25 ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ. ಈ ಸಂಭ್ರಮದ ಸಮಯದಲ್ಲಿ ಕನ್ನಡ ಸಿನಿಪ್ರಿಯರಿಗೆ ಖಂಡಿತವಾಗಿಯೂ ಹೋಳಿ ಹೋಳಿ ಎಂಬ ಪ್ರೀತ್ಸೆ ಹಾಡು ನೆನಪಾಗದೆ ಇರದು. ಈ ಹಾಡಿನ ವಿಡಿಯೋದ ಜತೆಗೆ ಕನ್ನಡ ಲಿರಿಕ್ಸ್‌ ಅನ್ನೂ ಇಲ್ಲಿ ನೀಡಲಾಗಿದೆ.

ಪ್ರೀತ್ಸೆ ಸಿನಿಮಾದ ಹೋಳಿ ಹೋಳಿ ಹಾಡಿನ ಕನ್ನಡ ಲಿರಿಕ್ಸ್‌

ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ ಹೋಳಿ
ಹೋಳಿ ಹೋಳಿ ಹೋಳಿ ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ

ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಓ.. ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗು ರಂಗೋಲಿ

ಹರಿಶಿನ ಕುಂಕುಮವ ಒಂದು ಕ್ಷಣ ಬೆರೆಸೋಣ
ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
ರವಿವರ್ಮ ನಕ್ಕರೆ ಕ್ಷಮಿಸು ಬಣ್ಣದ ಹಬ್ಬ ಅನ್ನೋಣ
ಓಹೋ ಓಕುಳಿ ಆಡೋಣ ಬಣ್ಣ ಕಂಡ್ರೆ ಕುಣಿಯೋಣ, ಕುಣಿಯೋಣ
ಬಳಿಯಲು ಬಂದ್ರೆ ಓಡೋಣ, ಓಡೋಣ
ಬೇಡ ಅನ್ನೋ ಈ ಭಯವೇ, ಈ ಭಯವೇ ಬೇಕು ಅನ್ನೋ ಬಿನ್ನಾಣ,
ಆಹಾ ಬಿನ್ನಾಣ ತನುವೆಲ್ಲ ನವರಂಗು ಮನಸೆಲ್ಲ ಬೆಳದಿಂಗಳು
ಈ ಹಬ್ಬ ಧರೆಗಿತ್ತ ಕೃಷ್ಣನಿಗೆ ನಮನಗಳು
ಮನೆ ಮನೆಗೊಬ್ಬ ರಂಗಿನ ರಂಗ ರಂಗಿನ ರಂಗ ಹುಟ್ಟುವನೆಂದು,
ಗೋಕುಲ ರಂಗ ಹಿಡಿಯೋ ಹಚ್ಚೋ, ಹಿಡಿಯೋ ಹಚ್ಚೋ, ಹಿಡಿಯೋ ಹಚ್ಚೋ


ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ ಓಹೋ ಓಕುಳಿ ಆಡೋಣ…
ಕಣ್ಣಲ್ಲೆ ಬೌಲಿಂಗ್‌ ಮಾಡೊ ಕಣ್ಣಲ್ಲೆ ಬ್ಯಾಟಿಂಗ್ ಮಾಡೊ
ಗೋಪಿಕಾ ಸ್ತ್ರೀ ನೋಡು ಸೆಂಚುರಿ ಶ್ರೀ ಕೃಷ್ಣನ ನೋಡು
ಒಂದೆ ದಿನ ಒಂದೇ ಬಾಲ್ ಒಂದೇ ರನ್ ಒಂದೇ ವಿಕೇಟ್ ಹೊಡಿದ್ರೆ ವಿನ್ ಬಿಟ್ರೆ ಡ್ರಾ
ಒಲವು ಚೆಲುವು ಒಂದಾಗಿ ಆ ಆ ಆ ಆ ನಲಿದಿದೆ ಇಲ್ಲಿ
ಹೆಣ್ಣಾಗಿ ಓ ಓ ಓ ಓ ಹೆಣ್ಣ ಕಂಡ ಬಣ್ಣಗಳೆಲ್ಲ
ಆ ಆ ಆ ಆ ಶರಣು ಅಂದವೋ ಮಂಕಾಗಿ
ಓ ಓ ಓ ಓ ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ
ಮುದ್ದಿನ ಜೇನಿನ ಚೆಲುವಿನ ಊಟಕ್ಕೆ
ಹಬ್ಬದ ಹಬ್ಬ ಒಲವಿನ ಹಬ್ಬ ಮನೆ ಮನೆ ಹಬ್ಬ ತುಂಬಿದೆ
ಬಾಳಿನ ಹಬ್ಬ ದಿಬ್ಬ ಚೆಲ್ಲೊ ಚೆಲ್ಲೊ ಬಣ್ಣ ಚೆಲ್ಲೊ ಬಣ್ಣ ಚೆಲ್ಲೊ
ಕೋಗಿಲೆ ಕೊಳಲಲ್ಲಿ ಪಂಚಮವ ಹಿಡಿಸೋಣ ಮಯೂರದ ಮೈಯಿಂದ
ಕೋಗಿಲೆ ಕೊಳಲಲ್ಲಿ ಪಂಚಮವ ಹಿಡಿಸೋಣ
ಮಯೂರದ ಮೈಯಿಂದ ಲಾಸ್ಯ ಲಯ ಬೆರೆಸೋಣ
ಹದ ಮೀರದಂತ ಹೂಗಳ ಬಣ್ಣದ ಅಡಿಗೆ ಕಲಿಯೋಣ
ಭಾವದ ಹೋಳಿಗೆ ಮಾಡೋಣ.