ಕನ್ನಡ ಸುದ್ದಿ  /  ಮನರಂಜನೆ  /  ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ಗೆ ಜುಲೈ 2ರಂದು ಶುಭ ವಿವಾಹ; ಪ್ರಧಾನಿ ಮೋದಿಗೆ ಖುದ್ದಾಗಿ ಆಮಂತ್ರಣ ಪತ್ರ ತಲುಪಿಸಿದ ರನ್ನನ ಚೆಲುವೆ

ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ಗೆ ಜುಲೈ 2ರಂದು ಶುಭ ವಿವಾಹ; ಪ್ರಧಾನಿ ಮೋದಿಗೆ ಖುದ್ದಾಗಿ ಆಮಂತ್ರಣ ಪತ್ರ ತಲುಪಿಸಿದ ರನ್ನನ ಚೆಲುವೆ

Varalaxmi Sarathkumar Marriage: ಕನ್ನಡದಲ್ಲಿ ಕಿಚ್ಚ ಸುದೀಪ್‌ ಜತೆ ಮಾಣಿಕ್ಯ, ರನ್ನ ಸಿನಿಮಾದಲ್ಲಿ ನಟಿಸಿದ್ದ, ದಕ್ಷಿಣ ಭಾರತದ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ಅವರ ಶುಭ ವಿವಾಹವೂ ಜುಲೈ 2ರಂದು ನಡೆಯಲಿದೆ. ವರಲಕ್ಷ್ಮಿಯವರು ವಿವಾಹದ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಿದ್ದಾರೆ.

ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ಗೆ ಜುಲೈ 2ರಂದು ಶುಭ ವಿವಾಹ; ಮೋದಿಗೆ ಆಮಂತ್ರಣ
ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ಗೆ ಜುಲೈ 2ರಂದು ಶುಭ ವಿವಾಹ; ಮೋದಿಗೆ ಆಮಂತ್ರಣ

ಬೆಂಗಳೂರು: ದಕ್ಷಿಣ ಭಾರತದ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ (Varalaxmi Sarathkumar Marriage) ಅವರು ವಿವಾಹ ಸಂಭ್ರಮದಲ್ಲಿದ್ದಾರೆ. ಇದೇ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಮತ್ತು ಉದ್ಯಮಿ ನಿಕೋಲಾಯ್‌ ವಿವಾಹ ಕಾರ್ಯಕ್ರಮ ನಡೆಯಲಿದೆ. ಇದೀಗ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದ ವರಲಕ್ಷ್ಮಿ ಶರತ್‌ ಕುಮಾರ್‌ ಅವರು ತನ್ನ ವಿವಾಹದ ಆಮಂತ್ರಣ ಪತ್ರಿಕೆಯನ್ನು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿರುವ ನಟಿ ಮತ್ತು ಆಕೆಯ ಕುಟುಂಬ ಪ್ರಧಾನಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನರೇಂದ್ರ ಮೋದಿಗೆ ಆಮಂತ್ರಣ ಪತ್ರಿಕೆ ನೀಡುವ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನಮ್ಮ ಶುಭ ವಿವಾಹಕ್ಕೆ ಅವರನ್ನು ಆಹ್ವಾನಿಸಿದ್ದೇವೆ. ಎಂತಹ ಸೌಭಾಗ್ಯದ ಕ್ಷಣವಿದು. ಆತ್ಮೀಯ ಭೇಟಿಗೆ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಬಿಡುವಿಲ್ಲದ ಶೆಡ್ಯೂಲ್‌ ನಡೆಉವೆ ನಮಗೆ ಅಮೂಲ್ಯ ಸಮಯ ನೀಡಿದ್ದೀರಿ. ಇಂತಹ ಅದ್ಭುತ ಅವಕಾಶ ಒದಗಿಸಿದ ಅಪ್ಪ ಶರತ್‌ ಕುಮಾರ್‌ಗೆ, ಅಮ್ಮ ರಾಧಿಕಾ ಶರತ್‌ ಕುಮಾರ್‌ಗೆ ಥ್ಯಾಂಕ್ಸ್‌" ಎಂದು ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವರಲಕ್ಷ್ಮಿ ಶರತ್‌ ಕುಮಾರ್‌ ಮದುವೆ

ನಟಿ ವರಲಕ್ಷಿ ಶರತ್‌ ಕುಮಾರ್‌ ಅವರು ಇದೇ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ನಿಕೋಲಾಯ್‌ ಜತೆ ವಿವಾಹವಾಗಲಿದ್ದಾರೆ. ಇವರಿಬ್ಬರ ಎಂಗೇಜ್‌ಮೆಂಟ್‌ ಮಾರ್ಚ್‌ 1ರಂದು ನಡೆದಿತ್ತು. ಇವರಿಬ್ಬರು ಹಲವು ವರ್ಷಗಳಿಂದ ಲವ್‌ ಮಾಡುತ್ತಿದ್ದರು. ಈಗಾಗಲೇ ನಟಿಯ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.

ಈ ಮದುವೆ ಕಾರ್ಯಕ್ರಮಕ್ಕೆ ಮಾಣಿಕ್ಯ ನಟ ಸುದೀಪ್, ನಯನತಾರ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್‌, ಎಆರ್‌ ಮುರುಗದಾಸ್‌, ಮುರಳಿ ಶರ್ಮಾ, ಸಮಂತಾ ಸೇರಿದಂತೆ ಸಿನಿಮಾ ನಟಿಯರಿಗೆ, ನಟರಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ವರಲಕ್ಷ್ಮಿ ಶರತ್‌ ಕುಮಾರ್‌ ಬಗ್ಗೆ

ನಟ ಶರತ್‌ ಕುಮಾರ್‌ ಮತ್ತು ಛಾಯಾ ದಂಪತಿಗೆ ವರಲಕ್ಷ್ಮಿ ಶರತ್‌ ಕುಮಾರ್‌ 1985ರ ಮಾರ್ಚ್‌ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಜನಿಸಿದ ಇವರ ಮಲತಾಯಿಯ ಹೆಸರು ರಾಧಿಕಾ. ವರಲಕ್ಷ್ಮಿ ಅವರು ಚೆನ್ನೈನ ಸೇಂಟ್‌ ಮೈಕಲ್‌ ಅಕಾಡೆಮಿಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ಚೆನ್ನೈನ ಹಿಂದೂಸ್ತಾನ್‌ ಆರ್ಟ್ಸ್‌ ಮತ್ತು ಸೈನ್ಸ್‌ ಕಾಲೇಜಿನಲ್ಲಿ ಮೈಕ್ರೊಬಯೋಲಜಿಯಲ್ಲಿ ಪದವಿ ಪಡೆದರು. ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂಬೈನ ಅನುಪಮ್‌ ಖೇರ್‌ ನಟನಾ ತರಬೇತಿ ಸಂಸ್ಥೆಯಲ್ಲಿ ನಟನೆ ಕಲಿತರು. ಇದಾದ ಬಳಿಕ ವೃತ್ತಿಪರವಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡಿದರು.

ವರಲಕ್ಷ್ಮಿ ಶರತ್‌ ಕುಮಾರ್‌ ಸಿನಿಮಾಗಳು

ಪೋಡಾ ಪೋಡಿ ಎಂಬ ತಮಿಳು ಸಿನಿಮಾದ ಮೂಲಕ ಸಿನಿಕರಿಯರ್‌ ಆರಂಭಿಸಿದರು. ಇದಾದ ಬಳಿಕ ಕಿಚ್ಚ ಸುದೀಪ್‌ ಜತೆ ಕನ್ನಡದಲ್ಲಿ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದರು. ರನ್ನ ಸಿನಮಾದಲ್ಲೂ ನಟಿಸಿದ್ದರು. ಇದಾದ ಬಳಿಕ ಮಾಲಿವುಡ್‌ಗೆ ನೆಗೆದರು. ಮಲಯಾಳಂನಲ್ಲಿ ಕಸಬ ಎಂಬ ಸಿನಿಮಾದಲ್ಲಿ ನಟಿಸಿದರು. ತಮಿಳಿನಲ್ಲಿ ಥರೈ ತಪ್ಪಟ್ಟೈ, ವಿಕ್ರಮ್‌ ವೇದಾ, ನಿಬುನನ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಸ್ಮಯ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ತಮಿಳಿನ ಸತ್ಯ, ಮಲಯಾಳಂನ ಕಟ್ಟು, ಮಾಸ್ಟರ್‌ಪೀಸ್‌, ತಮಿಳಿನ ಎಚ್ಚರಿಕೈ, ಸ್ಯಾಂಡಕೋಜಿ 2, ಸರ್ಕಾರ್‌, ಮಾರಿ 2, ನೇಯಾ 2, ತೆನ್ನಾಲಿ ರಾಮಕೃಷ್ಣ ಬಿಎ, ಬಿಎಲ್‌, ವಲ್ಕೆಟ್‌ ನಗರಮ್‌, ಡ್ಯಾನಿ, ಕನ್ನಿ ರಾಶಿ, ತೆಲುಗಿನಲ್ಲಿ ಕ್ರ್ಯಾಕ್‌, ಝೊಂಬಿ ರೆಡ್ಡಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಇವರು ಕನ್ನಡದ ರಣಂ ಸಿನಿಮಾದಲ್ಲೂ ನಟಿಸಿದ್ದಾರೆ. ಚೇಸಿಂಗ್‌, ಸಿಂಗ ಪಾರ್ವೈ, ಪಕ್ಕ ಮರ್ಷಿಯಲ್‌, ಇರ್ವಿನ್‌ ನಿಝಲ್‌, ಪೈಕಲ್‌ ಕುತುರೈ, ಕಠೇರಿ, ಯಶೋಧಾ, ವಿ3, ವೀರ ಸಿಂಹ ರೆಡ್ಡಿ, ಮೈಕೆಲ್‌, ಕನ್ನಿಥೀವ್‌, ಕೊಂಡ್ರಾಲ್‌ ಪೋವಮ್‌, ಏಜೆಂಟ್‌, ಮಾರುತಿ ನಗರ್‌ ಪೊಲೀಸ್‌ ಸ್ಟೇಷನ್‌, ಹನುಮಾನ್‌, ಶಬರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್‌ ನಟನೆಯ ಮುಂಬರುವ ಮ್ಯಾಕ್ಸ್‌ನಲ್ಲೂ ನಟಿಸುತ್ತಿದ್ದಾರೆ.