ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್

ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್

ಡಾ. ರಾಜ್‌ಕುಮಾರ್‌ ಬರೀ ನಟನಲ್ಲ. ಅವರೊಬ್ಬ ಯೋಗಿ. ಯೋಗವನ್ನು ಸಿದ್ಧಿಸಿಕೊಂಡಿದ್ದರು. ಆ ಯೋಗದ ಮೂಲಕವೇ ತಮ್ಮ ಸಾವಾಗಬೇಕು ಎಂದು ನಿರ್ಧರಿಸಿದ್ದರು. ಅದರಂತೆಯೇ ಎರಡು ಸಲ ಸ್ವ ಹತ್ಯೆಗೆ ಪ್ರಯತ್ನಿಸಿದ್ದರು. ಈ ವಿಚಾರವನ್ನು ಅಣ್ಣಾವ್ರ ಅಳಿಯ ಗ್ರೀನ್‌ ಹೌಸ್‌ ವಾಸು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್‌, ಆದರೆ..
ಅಣ್ಣಾವ್ರ ಸಾವಿನ ರಹಸ್ಯ! ಒಂದಲ್ಲ, ಎರಡು ಸಲ ತಾವೇ ಸಾಯುವ ನಿರ್ಧಾರ ಮಾಡಿದ್ದರು ಡಾ ರಾಜ್‌ಕುಮಾರ್‌, ಆದರೆ..

ಸ್ಯಾಂಡಲ್‌ವುಡ್‌ ಕಂಡ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಬರೀ ನಟನಾಗಿ ಜನರ ಮನಸ್ಸಿನಲ್ಲಿ ಬೇರೂರಿಲ್ಲ. ನಡೆ, ನುಡಿ ಸರಳತೆಯ ಮೂಲಕವೇ ಕೋಟಿ ಕೋಟಿ ಜನರ ಆರಾಧ್ಯ ದೈವವಾಗಿದ್ದರು. ಯೋಗವನ್ನು ಸಿದ್ಧಿಸಿಕೊಂಡಿದ್ದರು. ಅದ್ಯಾವ ಮಟ್ಟಿಗೆ ಎಂದರೆ ಅದೇ ಯೋಗದ ಮೂಲಕವೇ ತಮ್ಮ ಉಸಿರು ನಿಲ್ಲಬೇಕು ಎಂದು ಅವರು ನಿರ್ಧರಿಸಿದ್ದರು. ಋಷಿ ಮುನಿಗಳು ಯೋಗವನ್ನು ಸಿದ್ಧಿಸಿಕೊಂಡು, ತಮ್ಮ ಸಾವನ್ನು ತಾವೇ ಬರಮಾಡಿಕೊಳ್ಳುತ್ತಾರೆ. ಅದೇ ರೀತಿ ಡಾ. ರಾಜ್‌ಕುಮಾರ್‌ ಸಹ ಎರಡು ಬಾರಿ ತಾವೇ ಸ್ವ ಹತ್ಯೆಗೆ ನಿರ್ಧಾರ ಮಾಡಿದ್ದರು. ಆ ಅಚ್ಚರಿಯ ಸಂಗತಿಯನ್ನು ಅಣ್ಣಾವ್ರ ಅಳಿಯ ಗ್ರೀನ್‌ ಹೌಸ್‌ ವಾಸು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ಸಲ ಪೂರ್ಣಿಮಾ ಬಂದು ಡಿಸ್ಟರ್ಬ್‌ ಆಯ್ತು..

“ಡಾ. ರಾಜ್‌ಕುಮಾರ್‌ ಬರೀ ನಟನಲ್ಲ. ಅವರೊಬ್ಬ ಯೋಗಿ. ಯೋಗವನ್ನು ಸಿದ್ಧಿಸಿಕೊಂಡಿದ್ದರು. ಆ ಯೋಗದ ಮೂಲಕವೇ ತಮ್ಮ ಸಾವಾಗಬೇಕು ಎಂದು ನಿರ್ಧರಿಸಿದ್ದರು. ನಿತ್ಯ ಒಂದಷ್ಟು ಸಮಯ ಆ ಯೋಗವನ್ನು ಪ್ರಾಕ್ಟಿಸ್‌ ಮಾಡುತ್ತಿದ್ದರು. 2006ರ ಏಪ್ರಿಲ್‌ ತಿಂಗಳಲ್ಲಿಯೇ ಪಲ್ಸ್‌ ರೇಟ್‌ ಕಡಿಮೆ ಆಗಿದ್ದಕ್ಕೆ ಅವರನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಗೆ ರಾಜ್‌ಕುಮಾರ್‌ ದಾಖಲು ಮಾಡಲಾಗಿತ್ತು. ಅದಾಗಿ ಡಿಸ್ಚಾರ್ಜ್‌ ಮಾಡಿ, ಮನೆಗೆ ಕರೆದುಕೊಂಡು ಬಂದಾಗ ಮನೆಯಲ್ಲಿ ಮತ್ತೊಮ್ಮೆ ಟ್ರೈ ಮಾಡಿದ್ದರು. ಆದರೆ ಆ ಸಮಯಕ್ಕೆ ಮಗಳು ಪೂರ್ಣಿಮಾ ಬಂದಿದ್ದಕ್ಕೆ ಅದು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಯೋಗದ ಮೂಲಕ ಸ್ವ ಇಚ್ಛೆಯ ಸಾವು..

ಡಾ. ರಾಜ್‌ಕುಮಾರ್‌ ಸ್ವ ಇಚ್ಛೆಯಿಂದ ದೇಹವನ್ನು ತ್ಯಜಿಸುವ ಪ್ರಕ್ರಿಯೆಗಳನ್ನು ಸಿದ್ಧಿಸಿಕೊಂಡಿದ್ದರು. ಹೇಗೆ ಪ್ರಾಣ ಬಿಡಬೇಕು ಎಂಬುದನ್ನು ಅಣ್ಣಾವ್ರು ಕಂಡುಕೊಂಡಿದ್ದರು. ಮೊದಲ ಪ್ರಯತ್ನದ ವೇಳೆ ಡಿಸ್ಟರ್ಬ್‌ ಆಗಿತ್ತು. ಹಾಗಾಗಿ ಅದು ಸಾಧ್ಯವಾಗಿರಲಿಲ್ಲ. ಇದನ್ನು ಹೇಳಿದರೆ ಉತ್ಪ್ರೇಕ್ಷೆ ಅಂತ ಅಂದುಕೊಳ್ಳಬಹುದು. ಒಮ್ಮೆ ನಾನು ಮಾಮನ (ರಾಜ್‌ಕುಮಾರ್‌) ಮನೆಗೆ ಹೋಗಿದ್ದೆ. ಅಕ್ಕನ ಜೊತೆ ಮಾತನಾಡಿದೆ. ಹೊರಡಬೇಕಾದರೆ, ಮಾಮ ಎಲ್ಲಿ ಎಂದು ಕೇಳಿದೆ. ಯೋಗ ಮಾಸ್ಟರ್‌ ಬಂದಿದ್ದಾರೆ. ದೇವರ ಕೋಣೆ ಪಕ್ಕದ ರೋಮ್‌ನಲ್ಲಿ ಎರಡು ಗಂಟೆಯಿಂದ ಕೂತಿದ್ದಾರೆ ಎಂದು ಅಕ್ಕ (ಪಾರ್ವತಮ್ಮ ರಾಜ್‌ಕುಮಾರ್‌) ಹೇಳಿದ್ರು.

"ನೀನೇ ಹೋಗು ಏನ್ಮಾಡ್ತಿದ್ದಾರೆ ನೋಡು" ಅಂತ ಅಕ್ಕ ಹೇಳಿದ್ಲು. ಯೋಗವನ್ನು ಹಂತ ಹಂತವಾಗಿ ಮಾಡಲಾಗುತ್ತೆ. ಅದರಿಂದ ಆಚೆ ಬರುವಾಗಲೂ ಹೇಗೆ ಹೋಗಿರುತ್ತಾರೋ ಹಾಗೇ ಅದೇ ಹಂತದಲ್ಲಿ ಬರಬೇಕು. ಇಲ್ಲಾಂದ್ರೆ ಮೈಂಡ್‌ ಡಿಸ್ಟರ್ಬ್‌ ಆಗುತ್ತೆ. ನಾನು ಅವರ ಕೋಣೆಗೆ ಹೋದೆ. ಇಡೀ ಕೋಣೆ ನಿಶ್ಯಬ್ಧವಾಗಿತ್ತು. ನನಗೆ ಎಲ್ಲಿ ನನ್ನ ಫೋನ್‌ ರಿಂಗ್‌ ಆಗಿಬಿಡುತ್ತೋ ಅನ್ನೋ ಭಯ. ನಾನು ಯೋಗ ಮಾಸ್ಟರ್‌ ಅವರ ಹಿಂದೆ 5 ಅಡಿ ದೂರದಲ್ಲಿ ನಿಂತಿದ್ದೇನೆ. ನಾನು ನಿಂತಿದ್ದು ಮಾಸ್ಟರ್‌ಗೂ ಗೊತ್ತಾಯ್ತ. ಹತ್ತೇ ಸೆಕೆಂಡ್‌ನಲ್ಲಿ ಅಣ್ಣಾವ್ರು ʻಆಪರೇಷನ್‌ ಡೈಮಂಡ್‌ ರಾಕೆಟ್‌ʼ ಚಿತ್ರದ ʻಅಲ್ಲಿ ಇಲ್ಲಿ ನೋಡುವೆ ಏಕೆ..ʼ ಹಾಡಿನ ಬಗ್ಗೆ ಮಾತನಾಡಿದರು" ಎಂದು ಹೇಳಿಕೊಂಡಿದ್ದಾರೆ.

ಎರಡನೇ ಪ್ರಯತ್ನವೂ ವಿಫಲ

“ಆಮೇಲೆ ಗೊತ್ತಾಯ್ತು, ನಾನು ಹೋದ ದಿನವೇ ಅಣ್ಣಾವ್ರು ಸಾಯುವ ನಿರ್ಧಾರ ಮಾಡಿದ್ದರು ಎಂದು. ಈ ವಿಚಾರವನ್ನು ಆವತ್ತು ನನಗೆ ಯೋಗ ಮಾಸ್ಟರ್‌ ಹೇಳಿದ್ರು. ಆದರೆ ಎರಡನೇ ಸಲದ ಆ ಪ್ರಯತ್ನವೂ ವಿಫಲವಾಯ್ತು” ಎಂದು ಡಾ. ರಾಜ್‌ಕುಮಾರ್‌ ಅಳಿಯ ಗ್ರೀನ್‌ ಹೌಸ್‌ ವಾಸು ʻಕಲಾಮಾಧ್ಯಮʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ, 2006ರ ಏಪ್ರಿಲ್ 12ರಂದು ತಮ್ಮ 76 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಡಾ. ರಾಜ್‌ಕುಮಾರ್‌ ನಿಧನರಾದರು. ಅವರ ಕೊನೆಯ ಆಸೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.