ಕನ್ನಡ ಸುದ್ದಿ  /  Entertainment  /  Sandalwood News Vasishta Simha Vip Movie First Look Released Kgf Yuva Movie Stunt Choreographers Pcp

ವಸಿಷ್ಠ ಸಿಂಹ ಅಭಿನಯದ ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ; ವಿಐಪಿಗೂ ಕೆಜಿಎಫ್‌, ಯುವ ಸಿನಿಮಾಗಳಿಗೂ ಇದೆ ನಂಟು

Vasishta Simha VIP Movie: ಸ್ಯಾಂಡಲ್‌ವುಡ್‌ನಲ್ಲಿ ವಶಿಷ್ಠ ಸಿಂಹ ಅಭಿನಯದ ವಿಐಪಿ ಸಿನಿಮಾ ತಯಾರಾಗುತ್ತಿದೆ. ಇದೀಗ ಚಿತ್ರತಂಡ ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ಫಸ್ಟ್‌ಲುಕ್‌ನಲ್ಲಿ ವಶಿಷ್ಠ ಸಿಂಹ ಬ್ಯಾಟ್‌ ಹಿಡಿದಿದ್ದಾರೆ.

ವಸಿಷ್ಠ ಸಿಂಹ ಅಭಿನಯದ ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ
ವಸಿಷ್ಠ ಸಿಂಹ ಅಭಿನಯದ ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

ಬೆಂಗಳೂರು: ಕನ್ನಡ ನಟ ವಸಿಷ್ಠ ಸಿಂಹರ ಕಂಚಿನ ಕಂಠ, ನಟನೆ ಎಲ್ಲರಿಗೂ ಇಷ್ಟ. ವಸಿಷ್ಠ ಸಿಂಹ ಅಭಿನಯದ ವಿಐಪಿ ಸಿನಿಮಾದ ಶೂಟಿಂಗ್‌ ನಡೆಯುತ್ತಿರುವ ಸಂಗತಿ ಸಿನಿಮಾ ಅಭಿಮಾನಿಗಳಿಗೆ ತಿಳಿದಿರಬಹುದು. ಇದೀಗ ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಫಸ್ಟ್‌ ಲುಕ್‌ನಲ್ಲಿ ವಸಿಷ್ಠ ಸಿಂಹ ಕ್ರಿಕೆಟ್‌ ಬ್ಯಾಟ್‌ ಹಿಡಿದುಕೊಂಡು ನಿಂತಿರುವ ಸೀನ್‌ ಇದೆ. ಬ್ಯಾಟ್‌ ಹಿಡಿದಿರುವ ಭಂಗಿ ನೋಡಿದರೆ ಸಿಕ್ಸ್‌ ಹೊಡೆಯಲೂ ರೆಡಿ, ದುಷ್ಮನ್‌ಗಳ ತಲೆ ಹೊಡೆಯಲೂ ರೆಡಿ ಅನ್ನುವ ರೀತಿ ಇದೆ.

ವಿಐಪಿ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ

ಅದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ವಿಐಪಿ ಸಿನಿಮಾದ ಲುಕ್‌ ರಿಲೀಸ್‌ ಮಾಡಲಾಗಿದೆ. ನಾಯಕ ವಸಿಷ್ಠ ಸಿಂಹ ಹಾಗೂ ಚಿತ್ರತಂಡ ಉಪಸ್ಥಿತರಿದ್ದರು. ಫಸ್ಟ್ ಲುಕ್ ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದಿದ್ದಾರೆ. ಮಾಸ್ ಫೀಲ್ ಇರುವಂತಹ ಪೋಸ್ಟರ್ ಕುತೂಹಲ ಮೂಡಿಸಿದೆ.

ವಿಐಪಿಗೂ ಕೆಜಿಎಫ್‌, ಯುವ ಸಿನಿಮಾಗಳಿಗೂ ಇದೆ ನಂಟು

ಈ ವಾರ ಯುವ ರಾಜ್‌ಕುಮಾರ್‌ ಅಭಿನಯದ ಯುವ ಸಿನಿಮಾ ರಿಲೀಸ್‌ ಆಗಲಿದೆ. ಅಂದಹಾಗೆ ಯುವ ಸಿನಿಮಾಕ್ಕೂ ವಿಐಪಿ ಸಿನಿಮಾಕ್ಕೂ ನಂಟು ಇದೆ. ಯುವ" ಖ್ಯಾತಿಯ ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ವಿಐಪಿ ಸಿನಿಮಾದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಕೆಜಿಎಫ್‌ ಸಿನಿಮಾಕ್ಕೂ ವಿಐಪಿಗೂ ನಂಟಿದೆ. "ಕೆ.ಜಿ.ಎಫ್" ಖ್ಯಾತಿಯ ವಿಕ್ರಂ ಮೋರ್ ಕೂಡ ವಿಐಪಿ ಸಿನಿಮಾದ ಸಾಹಸ ಸನ್ನಿವೇಶಗಳ ಹಿಂದೆ ಇದ್ದಾರೆ.

ಬಹು ನಿರೀಕ್ಷಿತ ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಸುತ್ತಮುತ್ತ ಎರಡು ಹಂತಗಳ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಭಾಗದಲ್ಲಿ ಮಾತಿನ‌ ಭಾಗದ ಚಿತ್ರೀಕರಣ ನಡೆದಿದೆ. ಕೆಜಿಎಫ್‌ ಸಿನಿಮಾಕ್ಕೆ ಸಾಹಸ ನಿರ್ದೇಶನ ಮಾಡಿದ ವಿಕ್ರಂ ಮೋರ್ , "ಯುವ" ಖ್ಯಾತಿಯ ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ.

ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ . ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ಅವರ ನಿರ್ಮಾಣದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಬ್ರಹ್ಮ ಈ ಚಿತ್ರದ ಡೈರೆಕ್ಟರ್‌. ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್ ನಿಂದ ಸದ್ದು ಮಾಡುತ್ತಿರುವ "ವಿಐಪಿ" ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ , ಅಫ್ಜಲ್ , ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್ , ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ವಿಐಪಿ ಸಿನಿಮಾಕ್ಕೆ ರಾಜೀವ್ ಗಣೇಸನ್ ಛಾಯಾಗ್ರಹಣ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಇರಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾಹಿತಿ ನೀಡಿದ್ದಾರೆ.