ವೀರ ಚಂದ್ರಹಾಸ ಟೈಟಲ್ ಟ್ರ್ಯಾಕ್ ಬಿಡುಗಡೆ: ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣನ ದರ್ಶನ; ಇಲ್ಲಿದೆ ನೋಡಿ ಯಕ್ಷಗಾನ ಸಿನಿಮಾದ ಝಲಕ್
ರವಿ ಬಸ್ರೂರು ನಿರ್ದಶನದ ಯಕ್ಷಗಾನ ಸಿನಿಮಾ "ವೀರ ಚಂದ್ರಹಾಸ"ದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯಕ್ಷ ಸಿನಿಮಾ ಮಾಡುವ ತೆರೆ ಹಿಂದಿನ ಪ್ರಯತ್ನಗಳನ್ನ ತೋರಿಸಲಾಗಿದೆ. ಕಿಚ್ಚ ಸುದೀಪ್ ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ರವಿ ಬಸ್ರೂರು ನಿರ್ದಶನದ ಯಕ್ಷಗಾನ ಸಿನಿಮಾ "ವೀರ ಚಂದ್ರಹಾಸ"ದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯಕ್ಷ ಸಿನಿಮಾ ಮಾಡುವ ತೆರೆ ಹಿಂದಿನ ಪ್ರಯತ್ನಗಳನ್ನ ತೋರಿಸಲಾಗಿದೆ. ಕಿಚ್ಚ ಸುದೀಪ್ ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವೀರ ಚಂದ್ರಹಾಸ ಸಿನಿಮಾದಲ್ಲಿ ನೂರಾರು ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 400-500 ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಹಜ ಬೆಳಕಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಯಾವುದೇ ಸಿನಿಮಾ ಸೆಟ್‌ನ ಲೈಟ್ ಬಳಸಿಲ್ಲ. ಈ ಸಿನಿಮಾ ಸುಮಾರು 2 ಗಂಟೆ 36 ನಿಮಿಷ ರನ್ ಟೈಮ್ ಹೊಂದಿದೆ.
ಮೇಕಿಂಗ್ ವಿಡಿಯೋ ಮತ್ತು ಟೈಟಲ್ ಟ್ರ್ಯಾಕ್
ರವಿ ಬಸ್ರೂರು ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಟೈಟಲ್ ಟ್ರ್ಯಾಕ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶಿವಣ್ಣ ಆಗಮಿಸುವುದು, ವೇಷ ಧರಿಸುವುದು ಇತ್ಯಾದಿ ದೃಶ್ಯಗಳ ಜತೆಗೆ ಇತರೆ ಕಲಾವಿದರ ನಟನೆ, ವೇಷಭೂಷಣದ ಝಲಕ್ ಅನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ವೀರ ಚಂದ್ರಹಾಸ ಬಗ್ಗೆ ಸುದೀಪ್ ಹೀಗಂದ್ರು
ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮುನ್ನ ಸುದೀಪ್ ಮಾತುಗಳಿರುವ ವಿಡಿಯೋವನ್ನು ರವಿ ಬಸ್ರೂರು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಸುದೀಪ್‌ಗೆ ಯಕ್ಷಗಾನದ ಕಿರೀಟ ತೊಡಿಸುವ ದೃಶ್ಯವೂ ಇದೆ. ಇದರಲ್ಲಿ ಸುದೀಪ್ ಮಾತುಕತೆಯೂ ಇದೆ. ಯಕ್ಷಗಾನದ ಮೊಮೊಂಟೊವನ್ನು ರವಿ ಬಸ್ರೂರು ನೀಡಿದ್ದಾರೆ. ಇದನ್ನು ಕೈಯಲ್ಲಿ ಹಿಡಿದುಕೊಂಡು ಸುದೀಪ್ ಹೀಗೆ ಹೇಳಿದ್ದಾರೆ. "ನನ್ನ ಮನೆಗೆ ಈ ರೀತಿಯ ಮೊಮೆಂಟೊ ಇದೇ ಮೊದಲ ಭಾರಿಗೆ ಬರುತ್ತಿದೆ. ಮೇಕಿಂಗ್ ವಿಡಿಯೋ ನೋಡಿದೆ. ತುಂಬಾ ಅದ್ಭುತವಾದ ಶ್ರಮ ಅದರಲ್ಲಿ ಕಾಣಿಸಿದೆ. ಅವರ ಜತೆ ಮಾತನಾಡಿದಾಗಲೂ ಸಾಕಷ್ಟು ವಿಷಯ ತಿಳಿಯಿತು. ಸರಕಾರದ ಬಳಿ ಹೋಗಿ ಈ ಯಕ್ಷಗಾನಕ್ಕೆ ಹೇಗೆ ಬೆಂಬಲ ಪಡೆದರು ಎಂದೂ ತಿಳಿಸಿದ್ದಾರೆ. ಸಂಸ್ಕೃತಿಯನ್ನು ಬೆಳೆಸಲು ಮಾಡಿರುವ ಅದ್ಭುತ ಪ್ರಯತ್ನ ಈ ವೀರ ಚಂದ್ರಹಾಸ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. "ಇದಕ್ಕೂ ಮಿಗಿಲಾಗಿ ಶಿವಣ್ಣನನ್ನು ಯಕ್ಷಗಾನದ ವೇಷದಲ್ಲಿ ನೋಡಿ ಬಹಳ ಖುಷಿಯಾಯ್ತು. ಮೇಕಿಂಗ್ ವಿಡಿಯೋ ನೋಡಿದ್ರೆ ಇದರ ಕುರಿತು ನಿಮಗೆ ತಿಳಿಯುತ್ತದೆ." ಎಂದು ಸುದೀಪ್ ಹೇಳಿದ್ದಾರೆ.
ಇಂದು ಬೆಳಗ್ಗೆಯೇ ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ರವಿ ಬಸ್ರೂರು ಅನೌನ್ಸ್ ಮಾಡಿದ್ದರು. "ತುಂಬಾ ಹೆಮ್ಮೆ ಮತ್ತು ಕೃತಜ್ಞತೆಯಿಂದ ನಾವು ಕಿಚ್ಚ ಸುದೀಪ್ ಅವರಿಂದ ವೀರ ಚಂದ್ರಹಾಸದ ಮೇಕಿಂಗ್ ವಿಡಿಯೋವನ್ನು ಅನಾವರಣ ಮಾಡುತ್ತಿದ್ದೇವೆ" ಎಂದು ರವಿ ಬಸ್ರೂರು ಹೇಳಿದ್ದರು. ವೀರ ಚಂದ್ರಹಾಸ ಸಿನಿಮಾದಲ್ಲಿ ಪುನೀತ್, ಗರುಡಾ ರಾಮ್, ಚಂದನ್ ಶೆಟ್ಟಿ ಮುಂತಾದ ಸಿನಿಮಾ ನಟರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. “ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕೆಂಬ ನಮ್ಮ ಹೆಜ್ಜೆಗೆ ನೀವು ಜೊತೆಯಾಗಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕೆಂಬುದು ನಮ್ಮ ಆಸೆ.” ಎಂದು ರವಿ ಬಸ್ರೂರು ಪ್ರೇಕ್ಷಕರಲ್ಲಿ ವಿನಂತಿಸಿದ್ದಾರೆ.
