K Shivaram: ಹಿರಿಯ ನಟ ಕೆ ಶಿವರಾಮ್‌ ಆರೋಗ್ಯ ಸ್ಥಿತಿ ಚಿಂತಾಜನಕ, ಮಾಜಿ ಐಎಎಸ್‌ ಅಧಿಕಾರಿ ನಟಿಸಿದ 8 ಸಿನಿಮಾಗಳಿವು-sandalwood news veteran kannada actor ex ias officer k shivaram health update k shivaram top movies list pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  K Shivaram: ಹಿರಿಯ ನಟ ಕೆ ಶಿವರಾಮ್‌ ಆರೋಗ್ಯ ಸ್ಥಿತಿ ಚಿಂತಾಜನಕ, ಮಾಜಿ ಐಎಎಸ್‌ ಅಧಿಕಾರಿ ನಟಿಸಿದ 8 ಸಿನಿಮಾಗಳಿವು

K Shivaram: ಹಿರಿಯ ನಟ ಕೆ ಶಿವರಾಮ್‌ ಆರೋಗ್ಯ ಸ್ಥಿತಿ ಚಿಂತಾಜನಕ, ಮಾಜಿ ಐಎಎಸ್‌ ಅಧಿಕಾರಿ ನಟಿಸಿದ 8 ಸಿನಿಮಾಗಳಿವು

K Shivaram Health Update: ಮಾಜಿ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರನ್ನು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾ ನಲ್ಲೆ ಮಧುಚಂದ್ರಕೆ, ವಸಂತ ಕಾವ್ಯ, ಖಳನಾಯಕ, ಯಾರಿಗೆ ಬೇಡ ದುಡ್ಡು, ಟೈಗರ್‌ ಸೇರಿದಂತೆ ಇವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

K Shivaram: ಹಿರಿಯ ನಟ ಕೆ ಶಿವರಾಮ್‌ ಆರೋಗ್ಯ ಸ್ಥಿತಿ ಚಿಂತಾಜನಕ, ಮಾಜಿ ಐಎಎಸ್‌ ಅಧಿಕಾರಿ ನಟಿಸಿದ 8 ಸಿನಿಮಾಗಳಿವು
K Shivaram: ಹಿರಿಯ ನಟ ಕೆ ಶಿವರಾಮ್‌ ಆರೋಗ್ಯ ಸ್ಥಿತಿ ಚಿಂತಾಜನಕ, ಮಾಜಿ ಐಎಎಸ್‌ ಅಧಿಕಾರಿ ನಟಿಸಿದ 8 ಸಿನಿಮಾಗಳಿವು

ಬೆಂಗಳೂರು: ಮಾಜಿ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಇವರನ್ನು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಂದ ಮಾಹಿತಿ ಪ್ರಕಾರ ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರು ವರದಿಗಳ ಪ್ರಕಾರ ಶಿವರಾಮ್‌ ಅವರ ಮಿದುಳು ನಿಷ್ಕ್ರೀಯವಾಗಿದೆ.

ಇದೀಗ ಬಂದ ಸುದ್ದಿ: ನಟ ಕೆ ಶಿವರಾಮ್‌ ನಿಧನ

ಹೃದಯಾಘಾತದ ಕಾರಣದಿಂದ ಕೆ. ಶಿವರಾಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಯಾಲಿಸಿಸ್‌ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಐಎಎಸ್‌ ಅಧಿಕಾರಿ ಕನ್ನಡ ಸಿನಿಮಾ ನಟರಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಇವರು ನಟಿಸಿರುವ ಪ್ರಮುಖ ಕನ್ನಡ ಸಿನಿಮಾಗಳ ವಿವರವನ್ನು ಪಡೆಯೋಣ.

ಬಾ ನಲ್ಲೆ ಮಧುಚಂದ್ರಕೆ

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಕೆ. ಶಿವರಾಮ್‌ ನಾಯಕರಾಗಿ ನಟಿಸಿದ್ದಾರೆ. 1993ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ನಂದಿನಿ ಸಿಂಗ್‌ ನಾಯಕಿಯಾಗಿದ್ದರು. ಬಾ ನಲ್ಲೆ ಮಧುಚಂದ್ರಕೆ ಹೆಸರಿನ ಕಾದಂಬರಿ ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು.

ವಸಂತ ಕಾವ್ಯ

1996ರಲ್ಲಿ ತೆರೆಕಂಡ ವಸಂತಕಾವ್ಯ ಸಿನಿಮಾದಲ್ಲಿ ಕೆ ಶಿವರಾಮ್‌, ಸುಧಾರಾಣಿ, ದಿ. ಲೀಲಾವತಿ, ಪ್ರಕಾಶ್‌ ರೈ, ರಾಜಾನಂದ್‌, ಜಾಕಿ ಶಿವು, ಟೆನ್ನಿಸ್‌ ಕೃಷ್ಣ, ಹೊನ್ನಾವಳಿ ಕೃಷ್ಣ, ಗೌತಮ್‌, ಬೇಬಿ ಬೃಂದಾ, ಡಾ. ಸುರೇಶ್‌ ಶರ್ಮಾ ಮುಂತಾದವರು ನಟಿಸಿದ್ದಾರೆ. ವಸಂತ ಕಾವ್ಯ ಸಿನಿಮಾವನ್ನು ಎಸ್‌ ನಾರಾಯಣ ನಿರ್ದೇಶಿಸಿದ್ದರು.

ಖಳನಾಯಕ

ಟೈಗರ್‌ ಪ್ರಭಾಕರ್‌, ಶಶಿಕುಮಾರ್‌, ಕೆ ಶಿವಕುಮಾರ್‌, ರಾವಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾವಿದು. ಮೊಹಮ್ಮದ್‌ ಗೌಸ್‌ ನಿರ್ದೇಶಿಸಿದ ಈ ಸಿನಿಮಾ 1999ರಲ್ಲಿ ತೆರೆಕಂಡಿತ್ತು.

ಯಾರಿಗೆ ಬೇಡ ದುಡ್ಡು

ಗುರುಪ್ರಸಾದ್‌ ನಿರ್ದೇಶನದ ಯಾರಿಗೆ ಬೇಡ ದುಡ್ಡು ಸಿನಿಮಾದಲ್ಲಿ ಕೆ. ಶಿವರಾಮ್‌ ನಟಿಸಿದ್ದಾರೆ. 2002ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಅಭಿಜಿತ್‌, ಟೆನ್ನಿಸ್‌ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಗೇಮ್ ಫಾರ್ ಲವ್‌

2003 ರಲ್ಲಿ ಬಿಡುಗಡೆಯಾದ ಗೇಮ್‌ ಫಾರ್‌ ಸಿನಿಮಾದಲ್ಲಿ ಕೆ. ಶಿವರಾಮ್‌, ಮೀನಾ, ಶಿವಧ್ವಜ್‌, ಭವ್ಯ, ಹರಿ, ನಾಗಶೇಖರ್‌, ಸುರೇಶ್‌ ಅಂಚನ್‌, ಗಣೇಶ್‌ ಮುಂತಾದ ಕಲಾವಿದರು ನಟಿಸಿದ್ದಾರೆ. ಇದು ಎಂಡಿ ಶ್ರೀಧರ್‌ ನಿರ್ದೇಶಣದ ಸಿನಿಮಾ.

ಟೈಗರ್‌

2017ರಲ್ಲಿ ತೆರೆಕಂಡ ಟೈಗರ್‌ ಸಿನಿಮಾದಲ್ಲಿ ಪ್ರದೀಪ್‌, ನೈರಾ, ಕೆ. ಶಿವರಾಮ್‌, ಓಂಪುರಿ ನಟಿಸಿದ್ದಾರೆ. ಪೊಲೀಸ್‌ ಆಗಬೇಕೆಂಬ ಕನಸಿನಲ್ಲಿರುವ ಯುವಕನ ಕಥೆಯನ್ನು ಈ ಸಿನಿಮಾ ಹೊಂದಿದೆ. ಇಷ್ಟು ಮಾತ್ರವಲ್ಲದೆ ಕೆ ಶಿವರಾಮ್‌ ಅವರು ನಾಗ, ಓ ಪ್ರೇಮ ದೇವತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

mysore-dasara_Entry_Point