ಕರಿಮಣಿ ಮಾಲೀಕ ನೀನಲ್ಲ.. ಮತ್ಯಾರು? ಕರಿಮಣಿ ಮಾಲೀಕ ರಾವುಲ್ಲಾ! ನಾನು ನಂದಿನಿ ತಂಡದಿಂದ ಬಂತು ಹೊಸ ವರ್ಷನ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಇದೀಗ ವಿಕಿಪೀಡಿಯಾ ಟೀಮ್ ಹೊಸ ಟಚ್ ನೀಡಿ ತಮ್ಮದೇ ಆದ ಒಂದು ವರ್ಷನ್ ಬಿಡುಗಡೆ ಮಾಡಿದೆ. ಈ ರೀಲ್ಸ್‌ನಲ್ಲಿ ಕಬಾಬ್ ಚಂದ್ರು ಅವರ ಡೈಲಾಗ್ ಸಹ ಕೇಳುತ್ತದೆ. ಕಚಗುಳಿ ಇಡುತ್ತದೆ.

Karimani Malika Ninnalla Song: ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಉಪೇಂದ್ರ ಚಿತ್ರದ ಕರಿಮಣಿ ಮಾಲೀಕ ನೀನಲ್ಲ ಹಾಡು ಮುನ್ನೆಲೆಗೆ ಬಂದು ವೈರಲ್ ಆಗಿದೆ. 1999ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಹಾಡು ಆ ಸಮಯದಲ್ಲೂ ಕೇಳುಗರನ್ನು ಮೋಡಿ ಮಾಡಿತ್ತು. ಇದೀಗ 25 ವರ್ಷಗಳ ಬಳಿಕ ಅದೇ ಹಾಡು ವೈರಲ್ ಪಟ್ಟ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಆ ಸಿನಿಮಾ ಬಿಡುಗಡೆಯಾದಾಗ ಇನ್ನೂ ಹುಟ್ಟಿರದವರೀಗ ಅದೇ ಹಾಡಿಗೆ ರೀಲ್ಸ್ ಮಾಡಿ, ಸ್ಟೆಪ್ ಹಾಕುತ್ತಿದ್ದಾರೆ. ಈಗ ಇದೇ ಹಾಡಿನ ಮತ್ತೊಂದು ವರ್ಷನ್ ಸದ್ದು ಮಾಡುತ್ತಿದೆ. ಅದೇ ವಿಕಿಪೀಡಿಯಾ ವರ್ಷನ್!
ಹೌದು, ಕೆಲ ತಿಂಗಳ ಹಿಂದಷ್ಟೇ ನಾನೂ ನಂದಿನಿ, ಬೆಂಗಳೂರಿಗೆ ಬಂದೀನಿ.. ಹಾಡಿನ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ವಿಕಿಪೀಡಿಯಾ ಟೀಮ್, ಇದೀಗ ಕರಿಮಣಿ ಮಾಲೀಕನನ್ನೂ ಹಿಡಿದು ತಂದಿದ್ದಾರೆ. ಅಂದರೆ, ಈ ಹಾಡಿನ ಕಾಮಿಡಿ ಅವತರಣಿಕೆಯನ್ನು ಸಿದ್ಧಪಡಿಸಿ ಸೋಷಿಯಲ್ ಮೀಡಿಯಾ ಪುಟದಲ್ಲಿ ಶೇರ್ ಮಾಡಿದ್ದಾರೆ. ಹಾಗೇ ಪೋಸ್ಟ್ ಆಗಿದ್ದೇ ತಡ ನೋಡುಗರಿಂದಲೂ ಈ ರೀಲ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ವಿಕಿಪೀಡಿಯಾ ರೀಲ್ಸ್‌ನಲ್ಲೇನಿದೆ?
ಕರಿಮಣಿ ಮಾಲೀಕ ಯಾರು?
"ನಿಂಗೆ ಪ್ಲವರ್ಸ್ ಅಂದ್ರೆ, ಅಲರ್ಜಿ ಅಂತ ಮಲ್ಲಿಗೇನೂ ತಗೊಂದ್ ಬಂದಿಲ್ಲ, ಸಂಪಿಗೆನೂ ತಗೊಂದ್ ಬಂದಿಲ್ಲ. ಫ್ರೂಟ್ಸ್ ತಗೊಂದ್ ಬಂದಿದಿನಿ. ಆದ್ರೆ, ಅವ್ನು, ನೀನು ವೆಜಿಟೇರಿಯನ್ ಅಂತ ಗೊತ್ತಿದ್ದರೂ, ಕಬಾಬ್ ತಂದಿದಾನೆ. ಇವಾಗ್ ಹೇಳು, ಈ ಕರಿಮಣಿ ಮಾಲೀಕ ಯಾರು? ಇದನ್ನು ಒಂದು ಸಾಂಗ್ ಮೂಲಕ ಹೇಳಲಾ ಎನ್ನುತ್ತಾಳೆ ನಂದಿನಿ. ಇದೇನು ಎದೆತುಂಬಿ ಹಾಡುವೆನೇನಾ? ಎನ್ನುತ್ತಲೇ ಹಾಡು ಎನ್ನುತ್ತಾನೆ.
ಅಷ್ಟರಲ್ಲಿ, ಮನಸಿನೊಳಗೆ ಖಾಲಿ ಖಾಲಿ... ನೀ ಮನದೊಳಗೇ ಇದ್ದರು.. ಮಲ್ಲಿಗೆ.. ಸಂಪಿಗೆ ತರದೇ ಹೋದರೂ ನೀ ನನಗೆ, ಓ ನಲ್ಲ, ನೀನಲ್ಲ ಕರಿಮಣಿ ಮಾಲೀಕ ನೀನಲ್ಲ. ಮತ್ಯಾರು? ಕರಿಮಣಿ ಮಾಲೀಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ.. ಕರಿಮಣಿ ಮಾಲೀಕ ರಾವುಲ್ಲಾ.. ರಾವುಲ್ಲಾ ರಾವುಲ್ಲಾ ಕರಿಮಣಿ ಮಾಲೀಕ ರಾವುಲ್ಲ.. ಇದರ ನಡುವೆ ಕಬಾಬ್ ಚಂದ್ರು ಅವರ ಡೈಲಾಗ್ ಒನ್ ಮೋರ್ ಒನ್ ಮೋರ್ ಎಂಬುದೂ ನುಸುಳಿ ಕಚಗುಳಿ ಇಡುತ್ತದೆ.
ನಿಮ್ಮಿಂದ ನಾವಿದ್ದನ್ನು ನಿರೀಕ್ಷಿಸಿರಲಿಲ್ಲ ಎಂದ ನೆಟ್ಟಿಗರು
ಈ ಹಿಂದೆ ನಾನು ನಂದಿನಿ, ಬೆಂಗಳೂರಿಗ್ ಬಂದೀನಿ ಹಾಡಿನ ಮೂಲಕ ವೈರಲ್ ಆಗಿದ್ದ ವಿಕಿಪೀಡಿಯಾ ತಂಡ, ಇದೀಗ ಕರಿಮಣಿ ಮಾಲೀಕ ಮೂಲಕ ರಂಜಿಸಿದೆ. ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ, ಅವರ ಫಾಲೋವರ್ಸ್ ಇವರ ಕ್ರಿಯೇಟಿವಿಟಿಗೆ ಜೈ ಎಂದಿದ್ದಾರೆ. ನಕ್ಕು ನಕ್ಕು ಸಾಕಾಯ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದೇ ಅಲ್ವಾ ಬೆಳ್ಳುಳ್ಳಿ ಡಾನ್ಸ್ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ. ಕಬಾಬ್ ಚಂದ್ರು ಅವರ ಡೈಲಾಗ್ ಕೇಳುತ್ತಿದ್ದಂತೆ, ಒನ್ ಮೋರ್ ಒನ್ ಮೋರ್ ಎಂದೂ ಕಾಮೆಂಟ್ ಪೋಸ್ಟ್ ಮಾಡುತ್ತಿದ್ದಾರೆ ನೆಟ್ಟಿಗರು.
ಕರಿಮಣಿ ಮಾಲೀಕ ನೀನಲ್ಲ ಹಾಡಿನ ಪೂರ್ತಿ ಸಾಹಿತ್ಯ ಇಲ್ಲಿದೆ..
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ, ಏನೇನಿಲ್ಲ
ಕಳೆದ ದಿನಗಳಲೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ, ದಕ್ಷಿಣ
ಸೇರಿಸೋ ದಿಂಬಲಿ ನೀನಿಲ್ಲ
ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ
ಏನಿಲ್ಲ, ಏನೇನಿಲ್ಲ
ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ, ಸಂಪಿಗೆ
ತರದೆ ಹೋದರು ನೀ ನನಗೆ
ಓ ನಲ್ಲ, ನೀನಲ್ಲ
ಕರಿಮಣಿ ಮಾಲೀಕ ನೀನಲ್ಲ
ಕರಿಮಣಿ ಮಾಲೀಕ ನೀನಲ್ಲ
ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ
