Raj Family: ನಾಡಿನ ಹೃದಯ ಗೆದ್ದ ಡಾ. ರಾಜ್‌ ಕುಟುಂಬದ ಹೃದಯಕ್ಕೇ ಏಟಿನ ಮೇಲೆ ಏಟು! ಪುನೀತ್‌ ರಾಜ್‌ಕುಮಾರ್‌ ನೆನಪಿಸಿದ ಸ್ಪಂದನಾ ಸಾವು
ಕನ್ನಡ ಸುದ್ದಿ  /  ಮನರಂಜನೆ  /  Raj Family: ನಾಡಿನ ಹೃದಯ ಗೆದ್ದ ಡಾ. ರಾಜ್‌ ಕುಟುಂಬದ ಹೃದಯಕ್ಕೇ ಏಟಿನ ಮೇಲೆ ಏಟು! ಪುನೀತ್‌ ರಾಜ್‌ಕುಮಾರ್‌ ನೆನಪಿಸಿದ ಸ್ಪಂದನಾ ಸಾವು

Raj Family: ನಾಡಿನ ಹೃದಯ ಗೆದ್ದ ಡಾ. ರಾಜ್‌ ಕುಟುಂಬದ ಹೃದಯಕ್ಕೇ ಏಟಿನ ಮೇಲೆ ಏಟು! ಪುನೀತ್‌ ರಾಜ್‌ಕುಮಾರ್‌ ನೆನಪಿಸಿದ ಸ್ಪಂದನಾ ಸಾವು

ಮೂಲ ರಾಜ್‌ ಕುಟುಂಬ ಅಲ್ಲದಿದ್ದರೂ, ಸೊಸೆಯಾಗಿ ಈ ಕುಟುಂಬಕ್ಕೆ ಬಂದ ಸ್ಪಂದನಾ, ಹೃದಯಾಘಾತದಿಂದಲೇ ನಿಧನರಾಗಿದ್ದಾರೆ. ಇಡೀ ನಾಡಿನ ಹೃದಯ ಗೆದ್ದ ಈ ಕುಟುಂಬಕ್ಕೆ ಆ ಹೃದಯ ನೋವು ನೀಡುತ್ತಲೇ ಬರುತ್ತಿದೆ.

ನಾಡಿನ ಹೃದಯ ಗೆದ್ದ ಡಾ. ರಾಜ್‌ ಕುಟುಂಬದ ಹೃದಯಕ್ಕೇ ಏಟಿನ ಮೇಲೆ ಏಟು! ಪುನೀತ್‌ ರಾಜ್‌ಕುಮಾರ್‌ ನೆನಪಿಸಿದ ಸ್ಪಂದನಾ ಸಾವು
ನಾಡಿನ ಹೃದಯ ಗೆದ್ದ ಡಾ. ರಾಜ್‌ ಕುಟುಂಬದ ಹೃದಯಕ್ಕೇ ಏಟಿನ ಮೇಲೆ ಏಟು! ಪುನೀತ್‌ ರಾಜ್‌ಕುಮಾರ್‌ ನೆನಪಿಸಿದ ಸ್ಪಂದನಾ ಸಾವು

Raj Family: ಕರುನಾಡಿನ ದೊಡ್ಮನೆ ಡಾ. ರಾಜ್‌ ಕುಟುಂಬಕ್ಕೆ ಇತ್ತೀಚಿನ ಕೆಲ ವರ್ಷಗಳಲ್ಲಿ ಸಂತೋಷಕ್ಕಿಂತ ಮಾಸದ ನೋವೇ ದಕ್ಕಿದ್ದು ಹೆಚ್ಚು. ಒಂದಲ್ಲ ಎರಡಲ್ಲ ಸರಣಿ ದುರಂತಗಳು ಕೇವಲ ಅಣ್ಣಾವ್ರ ಕುಟುಂಬವನ್ನಷ್ಟೇ ಅಲ್ಲ, ನಾಡಿನ ಅವರ ಅಪಾರ ಅಭಿಮಾನಿ ಬಳಗವನ್ನೂ ಅಳಿಸಿದೆ. ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಸಾವಿನ ಬಳಿಕ ಜರ್ಜರಿತವಾಗಿದ್ದ ರಾಜ್‌ ಕುಟುಂಬ ಆ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಹೀಗಿರುವಾಗಲೇ ಇದೇ ಕುಟುಂಬಕ್ಕೆ ಸೇರಿದ ಸ್ಪಂದನಾ ಅವರ ಸಾವೂ ಇದೀಗ ಇಡೀ ಕುಟುಂಬನ್ನು ಮತ್ತೆ ನೋವಿನ ಕೂಪಕ್ಕೆ ನೂಕಿದೆ.

ಪಾರ್ವತಮ್ಮ ರಾಜ್‌ಕುಮಾರ್‌ ಸಹೋದರ ಚಿನ್ನೇಗೌಡ ಅವರ ಹಿರಿಮಗ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ವಿದೇಶದಲ್ಲಿ ಕೊನೆಯುಸಿರೆಳೆದಿದ್ದಾರೆ. ದೈಹಿಕವಾಗಿ ಫಿಟ್‌ ಆಗಿದ್ದ, ಯಾವುದೇ ಕಾಯಿಲೆ ಇರದೆ ಆರೋಗ್ಯವಾಗಿದ್ದ ಸ್ಪಂದನಾ ಅವರ ಅಕಾಲಿಕ ಸಾವು ಎರಡೂ ಕುಟುಂಬವನ್ನು ಶಾಕ್‌ಗೆ ದೂಡಿದೆ. ಇನ್ನೇನು ಇದೇ ತಿಂಗಳು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ಸ್ಪಂದನಾ ವಿಜಯ್‌ ರಾಘವೇಂದ್ರ ಈಗ ಬಹುದೂರ ಪ್ರಯಾಣಿಸಿದ್ದಾರೆ.

ಅಪ್ಪು ನೆನಪಿಸಿದ ಸ್ಪಂದನಾ ಸಾವು

ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ 2021ರ ಅಕ್ಟೋಬರ್‌ 29ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಫಿಟ್‌ನೆಸ್‌ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದ ಅಪ್ಪು ಏಕಾಏಕಿ ಕುಸಿದು ಕಣ್ಮುಚಿದರು. ಆ ಸಾವು ತಂದ ನೋವು ಇನ್ನೂ ಮಾಸಿಲ್ಲ. ಇದೀಗ ಆ ಏಟಿನ ಮೇಲೆಯೇ ಮತ್ತೊಂದು ಏಟು ಬಿದ್ದಿದೆ. ವಿದೇಶಿ ಪ್ರವಾಸದಲ್ಲಿದ್ದ ಸ್ಪಂದನಾ ಸಹ ಹೃದಯಾಘಾತದಿಂದಲೇ ನಿಧನರಾಗಿ ಇಡೀ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ.

ರಾಜ್‌ ಕುಟುಂಬದ ʼಹೃದಯʼಕ್ಕೆ ಏಟು

ಡಾ. ರಾಜ್‌ಕುಮಾರ್‌ ಅವರ ಕುಟುಂಬಕ್ಕೆ ಜೆನಿಟಿಕಲ್‌ ಆಗಿ ಹೃದಯ ಸಮಸ್ಯೆ ಇದೆ ಎಂದು ಈಗಾಗಲೇ ಗೊತ್ತಿರುವ ಸಂಗತಿ. 2006ರಲ್ಲಿ ಡಾ. ರಾಜ್‌ಕುಮಾರ್‌ ಸಹ ಏಪ್ರಿಲ್‌ 12ರಂದು ಹೃದಯಾಘಾತದಿಂದಲೇ ನಿಧನರಾಗಿದ್ದರು. ಅದೇ ರೀತಿ ಅಣ್ಣಾವ್ರ ಮೂವರು ಮಕ್ಕಳಿಗೂ ಇದೇ ಹೃದಯದ ಕಾಯಿಲೆಯಿತ್ತು. ಕೇವಲ 27ನೇ ವಯಸ್ಸಿನಲ್ಲಿಯೇ ರಾಘವೇಂದ್ರ ರಾಜ್‌ಕುಮಾರ್‌ ಆ್ಯಂಜಿಯೋಪ್ಲಾಸ್ಟಿ ಟ್ರೀಟ್‌ಮೆಂಟ್‌ ಪಡೆದಿದ್ದರು. ಅದಾದ ಬಳಿಕ 2013ರಲ್ಲಿ ಬ್ರೇನ್‌ ಸ್ಟ್ರೋಕ್‌ ಆಗಿ ಇಂದಿಗೂ ಚಿಕಿತ್ಸೆಯಲ್ಲಿಯೇ ಇದ್ದಾರೆ ರಾಘಣ್ಣ.

ಶಿವರಾಜ್‌ಕುಮಾರ್‌ ಸಹ ಲಘು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ. 2015ರಲ್ಲಿ ಶಿವಣ್ಣನಿಗೂ ಮೈಲ್ಡ್ ಹಾರ್ಟ್‌ ಅಟ್ಯಾಕ್‌ ಆಗಿತ್ತು. ಎಂದಿನಂತೆ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಕಾಣಿಸಿದ ಸಣ್ಣ ಎದೆ ನೋವು ಇಡೀ ಕರುನಾಡನ್ನು ತೀವ್ರ ಆತಂಕಕ್ಕೀಡು ಮಾಡಿತ್ತು. ಚಿಕಿತ್ಸೆ ಬಳಿಕ ಶಿವಣ್ಣ ಸುಧಾರಿಸಿಕೊಂಡರು. ವಿದೇಶದಲ್ಲಿಯೂ ಟ್ರೀಟ್‌ಮೆಂಟ್‌ ತೆಗೆದುಕೊಂಡು ಚೇತರಿಸಿಕೊಂಡರು.

ಹೃದಯ ಗೆದ್ದ ಕುಟುಂಬಕ್ಕೆ ಹೃದಯವೇ ವೈರಿ..

ಸದಾ ಫಿಟ್‌ ಆಗಿ ಇರುತ್ತಿದ್ದ ಪುನೀತ್‌ ರಾಜ್‌ಕುಮಾರ್‌ ಹೃದಯಾಘಾತದಿಂದ ದುರಂತ ಸಾವನ್ನಪ್ಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಅದೂ ಘಟಿಸಿತು. ಆ ಒಂದು ಸಾವು ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ನಡುಕ ಸೃಷ್ಟಿಸಿತ್ತು. ಇದೀಗ ಮೂಲ ರಾಜ್‌ ಕುಟುಂಬ ಅಲ್ಲದಿದ್ದರೂ, ಸೊಸೆಯಾಗಿ ಈ ಕುಟುಂಬಕ್ಕೆ ಬಂದ ಸ್ಪಂದನಾ, ಹೃದಯಾಘಾತದಿಂದಲೇ ನಿಧನರಾಗಿದ್ದಾರೆ. ಇಡೀ ನಾಡಿನ ಹೃದಯ ಗೆದ್ದ ಈ ಕುಟುಂಬಕ್ಕೆ ಆ ಹೃದಯ ನೋವು ನೀಡುತ್ತಲೇ ಬರುತ್ತಿದೆ.

ಅಪಘಾತದಲ್ಲಿ ಕಾಲು ಕಳೆದುಕೊಂಡ ಸೂರಜ್‌

ಪಾರ್ವತಮ್ಮ ರಾಜ್‌ಕುಮಾರ್‌ ಅವರ ತಮ್ಮನ ಮಗ ಸೂರಜ್‌ ಚಿತ್ರರಂಗದಲ್ಲಿ ಈಗಷ್ಟೇ ಗುರುತಿಸಿಕೊಳ್ಳುತ್ತಿದ್ದರು. ಭಗವಾನ್‌ ಶ್ರೀಕೃಷ್ಣ ಪರಮಾತ್ಮ ಅನ್ನೋ ಸಿನಿಮಾದಲ್ಲಿಯೂ ನಟಿಸಿದ್ದರು. ದುರಂತ ಏನೆಂದರೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಇತ್ತೀಚಗೆಷ್ಟೇ ನಡೆದ ಭೀಕರ ಅಪಘಾತದಲ್ಲಿ ಒಂದು ಕಾಲನ್ನೇ ಕಳೆದುಕೊಂಡಿದ್ದರು. ನಂಜನಗೂಡಿನ ಬಳಿ ಲಾರಿ- ಬೈಕ್‌ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಲಗಾಲಿನ ಮೇಲೆಯೇ ಲಾರಿಯ ಚಕ್ರ ಹರಿದಿತ್ತು. ಪರಿಣಾಮ ಸೂರಜ್‌ ಅವರ ಕಾಲನ್ನೇ ಕತ್ತರಿಸಿಲಾಗಿತ್ತು.

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner